kn_ta/translate/first-draft/01.md

3.0 KiB

ನಾನು ಕಾರ್ಯವನ್ನು ಹೇಗೆ ಪ್ರಾರಂಭಿಸಲಿ ?

  • ನೀವು ಭಾಷಾಂತರಿಸಲು ನಿರ್ಧರಿಸುವ ವಾಕ್ಯಭಾಗಗಳನ್ನು ಚೆನ್ನಾಗಿ ಓದಿ ಅರ್ಥಮಾಡಿಕೊಳ್ಳಲು ಬೇಕಾದ ಎಲ್ಲಾ ರೀತಿಯ ವಿವೇಕ,ವಿವೇಚನೆ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿರಿ. ಆಗ ಆತನು ನಿಮಗೆ ನೀವು ಭಾಷಾಂತರಿಸ ಬೇಕಾದ ಭಾಗಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು ನಿಮ್ಮ ಭಾಷೆಯಲ್ಲಿ ಓದುಗರಿಗೆ ಉತ್ತಮವಾಗಿ ತಿಳಿಸುವ, ಅಭಿವ್ಯಕ್ತಿಸುವ ಸಾಮರ್ಥ್ಯ ನೀಡುವನು.
  • ನೀವು ಸತ್ಯವೇದದಲ್ಲಿನ ಕಥೆಗಳನ್ನು ಮುಕ್ತವಾಗಿ ಭಾಷಾಂತರಿಸುವುದಾದರೆ ಭಾಷಾಂತರ ಮಾಡುವ ಮೊದಲು ಇಡೀ ಕಥೆಗಳನ್ನು ಓದಬೇಕು. ಸತ್ಯವೇದವನ್ನು ಭಾಷಾಂತರಿಸುವುದಾದರೆ ಆಯಾ ಅಧ್ಯಾಯವನ್ನು ಮೊದಲು ಓದಿ ಗ್ರಹಿಸಬೇಕು. ಇದರಿಂದ ನೀವು ಭಾಷಾಂತರಿಸಬೇಕಾದ ವಿಷಯವನ್ನು ಅರ್ಥ ಮಾಡಿಕೊಂಡು ಭಾಷಾಂತರ ಮಾಡಿದ ವಿಷಯ ಉತ್ತಮವಾಗಿ ಮೂಡಿಬಂದು ತಲುಪಬೇಕಾದವರಿಗೆ ತಲುಪಿ ಸರಿಯಾಗಿ ಅರ್ಥವಾಗುವಂತೆ ಮಾಡಬೇಕು.
  • ನೀವು ಭಾಷಾಂತರಿಸಬೇಕೆಂದು ಯೋಚಿಸಿರುವ ವಿಷಯ ಭಾಗವನ್ನು ಓದುವುದರೊಂದಿಗೆ ಈ ಭಾಗದ ಬಗ್ಗೆ ಇರುವ ಇತರ ಭಾಷಾಂತರ ಭಾಗಗಳನ್ನು ಓದಿ ತಿಳಿಯುವುದು ಅಗತ್ಯ. ULB ಮೂಲ ವಿಷಯ ಭಾಗದ ಮೂಲಕ ಸಹಾಯ ಮಾಡುತ್ತದೆ. ಮತ್ತು UDB ಮೂಲಕ ಪಠ್ಯವಿಷಯವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಜನರು ಸುಲಭವಾಗಿ ಪಠ್ಯದ ವಿಷಯಗಳನ್ನು ಅವರ ಭಾಷೆಯಲ್ಲಿ ಅರ್ಥಮಾಡಿಕೊಳ್ಳಲು ಅನುಕೂಲವಾಗು - ವಂತೆ ಯೋಚಿಸಬೇಕು. ನೀವು ಭಾಷಾಂತರಿಸುವ ಸತ್ಯವೇದದ ವಿಷಯ ಭಾಗಗಳ ಬಗ್ಗೆ ಇರುವ ಅನೇಕ ಸತ್ಯವೇದ ರೂಪಾಂತರಗಳು, ವಿಮರ್ಶೆಗಳನ್ನು ಓದಿ ವಿಷಯಸಂಗ್ರಹಣ ಮಾಡಿಕೊಳ್ಳಬೇಕು.
  • ನೀವು ಭಾಷಾಂತರಿಸಲು ಯೋಚಿಸಿರುವ ಬಗ್ಗೆ ಇರುವ ಇತರ ಭಾಷಾಂತರ ಕೈಪಿಡಿ, ಟಿಪ್ಪಣಿಗಳನ್ನು ಓದಿ ತಿಳಿಯಬೇಕು.