kn_ta/translate/figs-youdual/01.md

11 KiB

ವಿವರಣೆಗಳು.

ಕೆಲವು ಭಾಷೆಯಲ್ಲಿ ಏಕವಚನ ನೀನು, ಪದ ಇದೆ. ಇದು ಯಾವಾಗ ವ್ಯಕ್ತಿಯನ್ನು ಕುರಿತು ಹೇಳುತ್ತದೆ ಮತ್ತು ಯಾವಾಗ ಬಹುವಚನ ರೂಪದ "ನೀವು" ಪದವನ್ನು ಕುರಿತು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಬಹುವಚನ ರೂಪದ "ನೀವು" ಒಬ್ಬರಿಗಿಂತ ಹೆಚ್ಚಿನ ವ್ಯಕ್ತಿಗಳ ಬಗ್ಗೆಯೂ ಹೇಳಲಾಗುತ್ತದೆ.

ಕೆಲವು ಭಾಷೆಯಲ್ಲಿ "you" ನೀನು / ನೀವು ಎಂಬ ಪದಕ್ಕೆ ಒಂದೇ ಪದ ಇದ್ದು ದ್ವಿವಿಧ ದಲ್ಲಿ ಬಳಸಿಕೊಂಡು ಇಬ್ಬರು ವ್ಯಕ್ತಿಗಳಿಗೆ ಈ ಪದವನ್ನು ಬಳಸುತ್ತಾರೆ. ಭಾಷಾಂತರಗಾರರು ಇಂತಹ ಭಾಷೆಗಳಲ್ಲಿ ಯಾವುದಾದರೂ ಒಂದು ಭಾಷೆಯನ್ನು ಮಾತನಾಡುತ್ತಿದ್ದರೆ ಅವರು ತಮ್ಮ ಭಾಷೆಯಲ್ಲಿ ಸೂಕ್ತ ಸಮಯ, ಸನ್ನಿವೇಶದಲ್ಲಿ ಯಾವತರದ "you" ನೀನು / ನೀವು ಪದಬಳಸಬೇಕು ಎಂಬುದನ್ನು ತಿಳಿದಿರಬೇಕು.

ಬೇರೆ ಭಾಷೆಗಳು ಉದಾಹರಣೆಗೆ ಇಂಗ್ಲೀಷ್ ಭಾಷೆಯಲ್ಲಿ ಒಂದೇ ರೀತಿಯ "you" ರೂಪದ ಪದವನ್ನು ಬಳಸುತ್ತಾರೆ. ಅದು ಎಷ್ಟೇ ಜನರನ್ನು ಉದ್ದೇಶಿಸಿ ಹೇಳುವುದಿದ್ದರೂ ಒಂದೇ ಪದಬಳಕೆ ಮಾಡುತ್ತಾರೆ. ಸತ್ಯವೇದವನ್ನು ಮೊದಲು ಹಿಬ್ರೂ, ಅರಾಮಿಕ್,ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆಯಲ್ಪಟ್ಟಿತು. ಈ ಭಾಷೆಗಳಲ್ಲಿ ಏಕವಚನ ರೂಪದ ಪದ "ನೀನು" ಮತ್ತು "ಬಹುವಚನ" ರೂಪದ ಪದ ನೀವು "ಬಳಕೆಯಲ್ಲಿದೆ."

ನಾವು ಈ ಭಾಷೆಗಳಲ್ಲಿ ಸತ್ಯವೇದವನ್ನು ಓದುವಾಗ ಇದರಲ್ಲಿ ಬರುವ ಸರ್ವನಾಮಗಳು ಮತ್ತು ಕ್ರಿಯಾಪದಗಳು ನಮಗೆ ಇವು ಒಬ್ಬವ್ಯಕ್ತಿಯನ್ನು ಕುರಿತು ಹೇಳುತ್ತದೋ ಇಲ್ಲವೇ ಇಬ್ಬರು ವ್ಯಕ್ತಿಗಳನ್ನು ಕುರಿತು ಹೇಳುತ್ತದೋ ಎಂಬುದನ್ನು ತಿಳಿಸುತ್ತದೆ. ಆದರೂ ಇಲ್ಲಿ ಅದು ಇಬ್ಬರು ವ್ಯಕ್ತಿಗಳ ಬಗ್ಗೆ ಹೇಳುತ್ತಿದೆಯೋ ಅಥವಾ ಇಬ್ಬರಿಗಿಂತ ಹೆಚ್ಚು ಜನರನ್ನು ಕುರಿತು ಹೇಳುತ್ತಿದೆಯೋ ಎಂಬುದು ತಿಳಿಯುವುದಿಲ್ಲ. ಸರ್ವನಾಮಗಳನ್ನು ಬಳಸಿರುವ "you" ಎಂಬ ಪದ ಎಷ್ಟುಜನರನ್ನು ಕುರಿತು ಹೇಳುತ್ತಿದೆ ಎಂದು ತೋರಿಸದಿದ್ದರೆ ನಾವು ವಾಕ್ಯಭಾಗವನ್ನು ಓದಿ ಅಲ್ಲಿ ಎಷ್ಟು ಜನರೊಂದಿಗೆ ಮಾತನಾಡುತ್ತಿದ್ದಾನೆ (ಮಾತನಾಡುತ್ತಿರುವವನು) ಎಂದು ತಿಳಿದುಕೊಳ್ಳಬೇಕು.

ಕಾರಣ ಇದೊಂದು ಭಾಷಾಂತರ ಪ್ರಕರಣ.

  • ಏಕವಚನ, ಬಹುವಚನ ಮತ್ತು ದ್ವಿವಿಧ ರೂಪದ "you" ಗಳು ಇದ್ದರೆ ಆ ಭಾಷೆಯನ್ನು ಮಾತನಾಡುತ್ತಿರುವ ಭಾಷಾಂತರಗಾರರು, ಮಾತನಾಡುತ್ತಿರುವ ವ್ಯಕ್ತಿ ಯಾರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾನೆ ಎಂಬುದನ್ನು ತಿಳಿದುಕೊಂಡರೆ ಸೂಕ್ತವಾದ "you" ಪದವನ್ನು ಭಾಷಾಂತರ ಮಾಡುವ ಭಾಷೆಯಲ್ಲಿ ಬಳಸಬಹುದು.
  • ಅನೇಕ ಭಾಷೆಯಲ್ಲಿ ವಿವಿಧ ರೀತಿಯ ಕ್ರಿಯಾಪದಗಳು ವ್ಯಕ್ತಿ ಏಕವಚನ ರೂಪದಲ್ಲಿ ಇದ್ದನೋ ಬಹುವಚನ ರೂಪದಲ್ಲಿ ಇದ್ದನೋ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. "you" ಪದಕ್ಕೆ ಸರ್ವನಾಮ ಅರ್ಥ ಇಲ್ಲದಿದ್ದರೂ ಈ ಭಾಷೆಯ ಭಾಷಾಂತರಗಾರರು ಇಲ್ಲಿ ಒಬ್ಬ ವ್ಯಕ್ತಿಬಗ್ಗೆ ಅಥವಾ ಒಬ್ಬರಿಗಿಂತ ಇಬ್ಬರು ವ್ಯಕ್ತಿಗಳ ಬಗ್ಗೆ ಮಾತನಾಡುತ್ತಿದ್ದಾರೆಯೇ ಎಂದು ನೋಡಿ ಭಾಷಾಂತರಿಸಬೇಕು ಇಲ್ಲಿ ಉಪಯೋಗಿಸಲಾಗಿರುವ “ನೀನು”. ಎಂಬ ಪದ ಒಬ್ಬ ವ್ಯಕ್ತಿಗೋ ಅಥವಾ ಒಬ್ಬರಿಗಿಂತ ಹೆಚ್ಚು ಜನರಿಗೆ ಅನ್ವಹಿಸುವುದೋ ಎಂದು ಅದರ ಸಂದರ್ಭ ಮೇಲೆ ಆಧಾರವಾಗಿರುತ್ತದೆ.

ಅದೇ ವಾಕ್ಯದಲ್ಲಿ ಇನ್ನೊಂದು ಸರ್ವನಾಮವಿದ್ದರೆ ಮಾತನಾಡುತ್ತಿರುವನು ಎಷ್ಟುಜನರೊಂದಿಗೆ ಮಾತನಾಡುತ್ತಿದ್ದಾನೆ ಎಂಬುದನ್ನು ದೃಢಪಡಿಸುತ್ತದೆ.

ಸತ್ಯವೇದದಲ್ಲಿನ ಉದಾಹರಣೆಗಳು.

ಯಾಕೋಬ ಮತ್ತು ಯೋಹಾನರು , ಆತನ ಬಳಿಗೆ ಬಂದು ಆತನಿಗೆ, "ಗುರುವೇ ನಾವು ಒಂದು ಮಾತು ಕೇಳುತ್ತೇವೆ, ನಮಗೋಸ್ಕರ ನಡೆಸಿಕೊಡಬೇಕು” ಎಂದು ಕೇಳಿದರು. ಆತನ [ಯೇಸು] ಅವರನ್ನು ನಿಮಗೇನು ನಡೆಸಿಕೊಡಬೇಕು?ಎಂದು ಕೇಳಿದನು " (ಮಾರ್ಕ್ 10:35-36 ULB)

ಯೇಸು ಆ ಇಬ್ಬರನ್ನು,ಯಾಕೋಬ ಮತ್ತು ಯೋಹಾನರನ್ನು ಕುರಿತು ಅವರಿಗೆ ಏನು ಮಾಡ ಬೇಕೆಂದು ಕೇಳಿದನು. ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ದ್ವಿವಿಧ "you,"/ ನೀನು /ನೀವು ಇದ್ದರೆ ಬಳಸಿಕೊಳ್ಳಿ. ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ದ್ವಿವಿಧ ಇಲ್ಲದಿದ್ದರೆ ಬಹುವಚನರೂಪವನ್ನು ಉಪಯೋಗಿಸುವುದು ಸೂಕ್ತ.

....ಆತನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು "ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ" ಎಂದನು. ಹಳ್ಳಿಯನ್ನು ನೀವುಪ್ರವೇಶಿಸುತ್ತಿರುವಾಗಲೇ ನೀವು ಅಲ್ಲಿ ಕಟ್ಟಿರುವ ಒಂದು ಕತ್ತೆ ಮರಿಯನ್ನು ಕಾಣುವಿರಿ, ಇದುವರೆಗೆ ಅದರ ಮೇಲೆ ಯಾರೂ ಹತ್ತಿಲ್ಲ " ಅದನ್ನು ಬಿಚ್ಚಿಹಿಡಿದುಕೊಂಡು ನನ್ನ ಬಳಿಗೆ ಬನ್ನಿರಿ (ಮಾರ್ಕ್ 11:1-2 ULB)

ಈ ವಾಕ್ಯಭಾಗವು ಇಬ್ಬರೊಂದಿಗೆ ಮಾತನಾಡುತ್ತಿದ್ದಾನೆ ಎಂಬುದು ಸ್ಪಷ್ಟವಾಗಿದೆ. ನೀವು ಭಾಷಾಂತರ ಮಾಡುತ್ತಿರುವ ಭಾಷೆ ದ್ವಿವಿಧ ರೂಪದ "you" ಆಗಿದ್ದರೆ ಅದನ್ನು ಉಪಯೋಗಿಸಕೊಳ್ಳಿ. ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ** ದ್ವಿವಿಧ** "you,"/ ನೀನು /ನೀವು ಇಲ್ಲದಿದ್ದರೆ ಅಲ್ಲಿ ಬಹುವಚನವನ್ನು ಉಪಯೋಗಿಸುವುದು ಸಮಂಜಸ.

ದೇವರಿಗೂ ಕರ್ತನಾದ ಯೇಸು ಕ್ರಿಸ್ತನಿಗೂ ಸೇವೆ ಮಾಡುವ ದಾಸನಾದ ಯಾಕೋಬನು ಅನ್ಯದೇಶದಲ್ಲಿ ಚದುರಿರುವ ಹನ್ನೆರಡು ಕುಲದವರಿಗೆ ಶುಭವಾಗಲಿ ನನ್ನ ಸಹೋದರರೇ ನಿಮ್ಮನಂಬಿಕೆಗೆ ಆಗುವ ಪರಿಶೋಧನೆಯುತಾಳ್ಮೆಯನ್ನು ಉಂಟುಮಾಡುತ್ತದೆಂದು ತಿಳಿದು ನಾನಾ ಕಷ್ಟಗಳಲ್ಲಿ ಬಿದ್ದಿರುವಾಗ ಅದನ್ನು ಆನಂದಕರವಾದುದೆಂದು ಎಣಿಸಿರಿ. (ಯಾಕೋಬ 1:1-3 ULB)

ಯಾಕೋಬನು ಈ ಪತ್ರವನ್ನುಅನೇಕ ಜನರನ್ನು ಉದ್ದೇಶಿಸಿ ಬರೆದನು ಆದುದರಿಂದ "you," ನೀನು /ನೀವು ಪದ ಅನೇಕ ಜನರಿಗೆ ಸಂಬಂಧಿಸಿದೆ. ಭಾಷಾಂತರವಾಗುತ್ತಿರುವ ಭಾಷೆಯಲ್ಲಿ ಬಹುವಚನ ರೂಪದ "you,"ಇದ್ದರೆ ಅದನ್ನು ಬಳಸುವುದು ಅತ್ಯುತ್ತಮವಾಗಿರುತ್ತದೆ.

"you,"ಎಂಬ ಪದ ಎಷ್ಟು ಜನರಿಗೆ ಅನ್ವಯಿಸುತ್ತದೆ ಎಂಬುದನ್ನು ಕಂಡುಕೊಳ್ಳಲು ಬೇಕಾದ ಕೌಶಲ್ಯಗಳು.

  1. ಟಿಪ್ಪಣಿಯನ್ನು ನೊಡಿ "you," ಎಂಬ ಪದ ಒಬ್ಬ ವ್ಯಕ್ತಿ ಅಥವಾ ಒಬ್ಬರಿಗಿಂತ ಹೆಚ್ಚಿನ ವ್ಯಕ್ತಿಗಳಿಗೆ ಅನ್ವಯಿಸುತ್ತದೆಯೇ ಎಂದು ತಿಳಿಯಿರಿ.
  2. UDBಯನ್ನು ಪರಿಶೀಲಿಸಿ ಅದರಲ್ಲಿ "you," ಪದ ಒಬ್ಬ ವ್ಯಕ್ತಿ ಅಥವಾ ಒಬ್ಬರಿಗಿಂತ ಹೆಚ್ಚು ವ್ಯಕ್ತಿಯ ಬಗ್ಗೆ ಹೇಳುತ್ತಿದೆಯೇ ತಿಳಿಯಿರಿ.
  3. ನಿಮ್ಮಲ್ಲಿರುವ ಸತ್ಯವೇದದ ಭಾಷೆಯಲ್ಲಿ ಏಕವಚನ "you," ಮತ್ತು ಬಹುವಚನ "you," ಗಳ ನಡುವೆ ವ್ಯತ್ಯಾಸ ತಿಳಿಸುತ್ತಿದೆಯೇ ? ಮತ್ತು ಆ ಸತ್ಯವೇದದಲ್ಲಿ ಯಾವ ರೀತಿ "you," ರೂಪದ ಪದ ಬಳಕೆಯ ವಾಕ್ಯಗಳಿವೆ ನೋಡಿ
  4. ವಾಕ್ಯಭಾಗವನ್ನು ಪರಿಶೀಲಿಸಿ ಮಾತನಾಡುತ್ತಿರುವವರು ಯಾರು ? ಮತ್ತು ಯಾರೊಂದಿಗೆ ಮಾತನಾಡುತ್ತಿದ್ದಾರೆ? ಯಾವ ಪ್ರತಿಕ್ರಿಯೆ ಬಂದಿತು ಎಂದು ನೋಡಿ.

ನೀವು ಇಲ್ಲಿರುವ ಲಿಂಕ್ ಬಳಸಿ ವಿಡಿಯೋ ನೋಡಿ at http://ufw.io/figs_youdual.