kn_ta/translate/figs-infostructure/01.md

13 KiB
Raw Permalink Blame History

ವಿವರಣೆ

ವಿವಿಧ ಭಾಷೆಯಲ್ಲಿ ವಿವಿಧ ರೀತಿಯಲ್ಲಿ ವಾಕ್ಯದ ಭಾಗಗಳನ್ನು ಜೋಡಣೆ ಮಾಡುತ್ತಾರೆ ಇಂಗ್ಲೀಷ್ ಭಾಷೆಯಲ್ಲಿ ವಾಕ್ಯದ ಮೊದಲಲ್ಲಿ ಕತೃಪದ, ಕ್ರಿಯಾಪದ ನಂತರ ಕರ್ಮಪದ ಇದ್ದು ಇತರ ಪದಗಳು ಬರುತ್ತವೆ.

** ಪೀಟರ್ ಪೈಂಟ್ ಮಾಡಿದ ನೆನ್ನೆ ಅವನ ಮನೆಯನ್ನು ಪೈಂಟ್ ಮಾಡಿದ.** ಬೇರೆ ಭಾಷೆಯಲ್ಲಿ ಇದೇ ವಾಕ್ಯದ ಭಾಗಗಳನ್ನು ಬೇರೆ ರೀತಿಯಲ್ಲಿ ಇಡುತ್ತಾರೆ ಉದಾ :

** ಪೈಂಟ್ ಮಾಡಿದನು ನೆನ್ನೆ ಪೀಟರ್ ಅವನ ಮನೆಯನ್ನು.** ಎಲ್ಲಾ ಭಾಷೆಯಲ್ಲೂ ಒಂದೇತರದ ವಾಕ್ಯದ ಭಾಗಗಳು ಇದ್ದರೂ, ಯಾವ ಮಾಹಿತಿಯನ್ನು ಬಳಸಲಾಗಿದೆ ಮತ್ತು ಬರಹಗಾರರು ಯಾವ ವಿಷಯವನ್ನು ಮುಖ್ಯವಾದುದು ಎಂದು ಪರಿಗಣಿಸುತ್ತಾರೋ ಅದರ ಮೇಲೆ ಅವಲಂಬಿತವಾಗುತ್ತದೆ. " ಪೀಟರ್ ನೆನ್ನೆ ಏನನ್ನು ಪೈಂಟ್ ಮಾಡಿದ ? ಎಂದು ಪ್ರಶ್ನೆ ಕೇಳಿದರೆಯಾರು ಹೇಗೆ ಉತ್ತರಿಸಬಲ್ಲರು? ಇಲ್ಲಿ ಪ್ರಶ್ನೆ ಕೇಳುತ್ತಿರುವ ವ್ಯಕ್ತಿಗೆ ಪೀಟರ್ ಏನು ಮಾಡಿದ ಎಂಬುದರ ಬಗ್ಗೆ ಮಾಹಿತಿ ಗೊತ್ತಿರುವುದರಿಂದ “ ಕರ್ಮಪದ “ ವನ್ನು ಮಾತ್ರ ಇಲ್ಲಿ ಬಳಸುತ್ತಾರೆ " ಅವನ ಮನೆಯನ್ನು " ಎಂದು. ಇದರಿಂದ ಈ ಮಾಹಿತಿ ಈ ವಾಕ್ಯದ ಪ್ರಮುಖ ವಿಷಯವಾಗಿ ಉತ್ತರಿಸು ವ್ಯಕ್ತಿ ಹೀಗೆ ಉತ್ತರಿಸಬಹುದು. ** ಅವನ ಮನೆಯನ್ನು ಪೀಟರ್ ಪೈಂಟ್ ಮಾಡಿದನು (ನೆನ್ನೆ)** ಇಲ್ಲಿ ತುಂಬ ಮುಖ್ಯವಾದ ವಿಷಯವನ್ನು ಮೊದಲು ಬರೆಯುವುದು,ಇಂಗ್ಲೀಷ್ ಭಾಷೆಯಲ್ಲಿ ಸಹಜವಾದುದು ಇನ್ನು ಕೆಲವು ಭಾಷೆಯಲ್ಲಿ ಪ್ರಮುಖವಾದ ವಿಷಯವನ್ನು ವಾಕ್ಯದ ಕೊನೆಯಲ್ಲಿ ಬರೆಯುವರು. ಬರವಣಿಗೆಯ ವೇಗದಲ್ಲಿ ಓದುಗರಿಗೆ ಮುಖ್ಯವಾದ ಮಾಹಿತಿಯನ್ನು ಸಾಮಾನ್ಯವಾಗಿ ಲೇಖಕನು ಹೊಸ ಮಾಹಿತಿಯಂತೆಯೇ ಶೋತೃಗಳಿಗೆ ನೀಡುತ್ತಾನೆ. ಕೆಲವು ಭಾಷೆಯಲ್ಲಿ ಹೊಸ ಮಾಹಿತಿ ಮೊದಲು ಬರುತ್ತದೆ. ಇನ್ನೂ ಕೆಲವು ಭಾಷೆಯಲ್ಲಿ ಕೊನೆಯಲ್ಲಿ ಬರುತ್ತದೆ

ಇದಕ್ಕೆ ಕಾರಣ ಇದೊಂದು ಭಾಷಾಂತರದ ಪ್ರಕರಣ

  • ವಿವಿಧ ಭಾಷೆಯಲ್ಲಿ ವಿವಿಧ ರೀತಿಯಲ್ಲಿ ವಾಕ್ಯದ ಭಾಗಗಳನ್ನು ಬರೆಯುತ್ತಾರೆ. ಭಾಷಾಂತರಗಾರರು ಇಂತಹ ಸಂದರ್ಭದಲ್ಲಿ ಮೂಲ ಭಾಷೆಯಂತೆಯೇ ವಾಕ್ಯಗಳನ್ನು ಭಾಷಾಂತರಿಸಿದರೆ ಭಾಷಾಂತರಿಸುತ್ತಿರುವ ಭಾಷೆಯಲ್ಲಿ ಸೂಕ್ತ ಸರಿಯಾದ ಅರ್ಥಕೊಡುವ ಭಾಷಾಂತರ ಆಗುವುದಿಲ್ಲ.
  • ಬೇರೆ ಬೇರೆ ಭಾಷೆಗಳವರು ಮುಖ್ಯ ಅಥವಾ ಹೊಸ ಮಾಹಿತಿಯನ್ನು ವಾಕ್ಯದ ವಿವಿಧ ಭಾಗಗಳಲ್ಲಿ ಸೇರಿಸಿ ಬರೆಯುತ್ತಾರೆ. ಭಾಷಾಂತರಗಾರನು ಮುಖ್ಯ ಅಥವಾ ಹೊಸ ಮಾಹಿತಿಯನ್ನು ಮೂಲ ಭಾಷೆಯಲ್ಲಿಇರುವ ಸ್ಥಾನದಲ್ಲೇ ವಾಕ್ಯದಲ್ಲಿಟ್ಟು ಬರೆದರೆ ಭಾಷಾಂತರಿಸುತ್ತಿರುವ ಭಾಷೆಯಲ್ಲಿ ಗೊಂದಲಮಯವಾದ, ತಪ್ಪು ಮಾಹಿತಿಯನ್ನು ನೀಡುವ ಅವಕಾಶ ಇರುತ್ತದೆ.

ಸತ್ಯವೇದದ ಉದಾಹರಣೆಗಳು

ಅವರೆಲ್ಲರೂ ಊಟ ಮಾಡಿ ತೃಪ್ತರಾದರು (ಮಾರ್ಕ 6:42 ULB)

ಈ ವಾಕ್ಯದ ಭಾಗಗಳು ಮೂಲ ಗ್ರೀಕ್ ಭಾಷೆಯಲ್ಲಿ ಭಿನ್ನವಾಗಿವೆ. ಅವು ಹೀಗಿವೆ. :

  • ಅವರು ಎಲ್ಲವನ್ನು ಊಟ ಮಾಡಿದರು ಮತ್ತು ಅವರು ತೃಪ್ತರಾದರು. ಆದರೆ ಇಂಗ್ಲೀಷ್ ಭಾಷೆಯಲ್ಲಿ ಜನರು ಎಲ್ಲಾ ಆಹಾರವನ್ನು ತಿಂದು ಮುಗಿಸಿದರು ಎಂಬ ಅರ್ಥದಲ್ಲಿದೆ. ಆದರೆ ಮುಂದಿನ ವಾಕ್ಯದಲ್ಲಿ ಉಳಿದ ಎಲ್ಲಾ ರೊಟ್ಟಿ ಮತ್ತು ಮೀನುಗಳನ್ನು ಒಟ್ಟು ಸೇರಿಸಿದಾಗ 12 ಪುಟ್ಟಿಗಳು ತುಂಬಿದವು ಎಂದಿದೆ. ಈ ಕ್ರಮದಲ್ಲಿ ಬರೆದರೆ ಗೊಂದಲವಾಗುವುದಿಲ್ಲ. ಆದ್ದರಿಂದ ULB ಭಾಷಾಂತರಗಾರರು ಇವುಗಳನ್ನುವಾಕ್ಯದ ಸರಿಯಾದ ಸ್ಥಳದಲ್ಲಿ, ಸರಿಯಾದ ಕ್ರಮದಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಬರುವಂತೆ ಮಾಡುತ್ತಾರೆ.

" ಹೊತ್ತು ಇಳಿಯುತ್ತಾ ಬಂತು, ಆ ಹನ್ನೆರೆಡು ಮಂದಿ ಶಿಷ್ಯರು ಆತನ ಬಳಿಗೆ ಬಂದು, " ಈ ಗುಂಪಿಗೆ ಅಪ್ಪಣೆಕೊಡು. ಇವರು ಸುತ್ತಲಿರುವ ಹಳ್ಳಿ, ಹಳ್ಳಿಗಳಿಗೆ ಹೋಗಿ ಇಳುಕೊಂಡು ಊಟಕ್ಕೆ ಬೇಕಾದ ಪದಾರ್ಥಗಳನ್ನು ದೊರಕಿಸಿಕೊಳ್ಳಲಿ ನಾವು ಇಂತಹ ಅಡವಿಯ ಸ್ಥಳದಲ್ಲಿ ಇದ್ದೇವಲ್ಲಾ ಎಂದು ಆತನಿಗೆ ಹೇಳಿದರು, "(ಲೂಕ 9:12 ULB)

ಈ ವಾಕ್ಯಭಾಗದಲ್ಲಿ ಯೇಸು ಆ ಜನರ ಗುಂಪನ್ನು ಕಳುಹಿಸಬೇಕೆಂಬ ಮಾತನ್ನು ಮೊದಲು ತಿಳಿಸುವುದು ಮುಖ್ಯ ಎಂದು ತಿಳಿದು ಯೇಸುವಿಗೆ ತಿಳಿಸಿದರು. ಜನರು ಅದನ್ನು ಅರ್ಥಮಾಡಿಕೊಳ್ಳುತ್ತಾರೆ ಎಂಬ ಕಾರಣದಿಂದ ಕೆಲವು ಭಾಷೆಯಲ್ಲಿ ಮುಖ್ಯ ವಿಷಯವನ್ನು ವಾಕ್ಯಭಾಗದ ಕೊನೆಯಲ್ಲಿ ಹೇಳುವ ಪದ್ಧತಿ ಇಟ್ಟುಕೊಂಡಿರುತ್ತಾರೆ. ಅಡವಿ ಪ್ರದೇಶದಲ್ಲಿ ಇರುವುದು ಇದು ಅವರು ಯೇಸುವಿಗೆ ತಿಳಿಸಬೇಕಾದ ಮುಖ್ಯ ಸಂದೇಶವಾಗಿತ್ತು. ಕೆಲವರು ಬಹುಶಃ ಶಿಷ್ಯಂದಿರು ಆ ನಿರ್ಜನ ಅಡವಿ ಪ್ರದೇಶದಲ್ಲಿ ಇರುವ ದುರಾತ್ಮಗಳ ಬಗ್ಗೆ ಹೆದರಿ ಈ ಮಾತು ಹೇಳಿರಬಹುದು ಮತ್ತು ಜನರನ್ನು ಅವುಗಳಿಂದ (ದುರಾತ್ಮಗಳಿಂದ) ರಕ್ಷಿಸುವುದಕ್ಕಾಗಿ ಅವರನ್ನು ಅಲ್ಲಿಂದ ಕಳುಹಿಸಿರಬಹುದು ಎಂದು ಹೇಳುತ್ತಾರೆ. ಆದರೆ ಇದು ತಪ್ಪು ಮಾಹಿತಿ /ಸಂದೇಶ.

"ಜನರೆಲ್ಲ ನಿಮ್ಮನ್ನು ಹೊಗಳಿದರೆ ನಿಮ್ಮ ಗತಿಯನ್ನು ಏನು ಹೇಳಲಿ ! ಅವರ ಪೂರ್ವಿಕರು ಸುಳ್ಳು ಪ್ರವಾದಿಗಳನ್ನು ಹಾಗೆಯೆ ಹೊಗಳಿದರು". (ಲೂಕ 6:26 ULB)

ಈ ವಾಕ್ಯಭಾಗದಲ್ಲಿ ಮೊದಲ ಮುಖ್ಯ ವಿಚಾರವೆಂದರೆ ಜನರೆಲ್ಲಾ ನಿಮ್ಮನ್ನು ಹೊಗಳಿದರೆ ಅವರ "ಗತಿ" ಏನಾಗುತ್ತದೆ ಎಂಬುದು. ಈ ಕಾರಣದಿಂದ ಅವರನ್ನು ಎಚ್ಚರಿಸುವ ವಾಕ್ಯ ಕೊನೆಯಲ್ಲಿ ಬರುತ್ತದೆ. ಮುಖ್ಯವಾದ ವಿಷಯ ಕೊನೆಯಲ್ಲಿ ಬರುತ್ತದೆ ಎಂದು ನಿರೀಕ್ಷಿಸುತ್ತಿದ್ದ ಜನರಿಗೆ ಇದು ಗೊಂದಲವನ್ನು ಉಂಟು ಮಾಡುತ್ತದೆ.

ಭಾಷಾಂತರದ ಕೌಶಲ್ಯ

  1. ನಿಮ್ಮ ಭಾಷೆಯಲ್ಲಿ ವಾಕ್ಯದ ಭಾಗಗಳನ್ನು ಯಾವ ಕ್ರಮದಲ್ಲಿ ಇಡಬೇಕು ಎಂಬುದನ್ನು ತಿಳಿದು ಭಾಷಾಂತರ ಮಾಡಬೇಕು.
  2. ನಿಮ್ಮ ಭಾಷೆಯಲ್ಲಿ ಹೊಸ ಮತ್ತು ಮುಖ್ಯ ವಿಷಯವನ್ನು ಮತ್ತು ವಿಷಯದ ಯಾವ ಕ್ರಮದಲ್ಲಿ ಇಟ್ಟಿದೆಯೋ ಅದನ್ನೇ ಸರಿಯಾದ ಅರ್ಥದಲ್ಲಿ ಬರುವಂತೆ ಭಾಷಾಂತರದಲ್ಲಿ ಹಿಡಿದಿಡಬೇಕು.

ಭಾಷಾಂತರದ ಕೌಶಲ್ಯಗಳನ್ನು ಅಳವಡಿಸುವುದರ ಬಗ್ಗೆ.

  1. ನಿಮ್ಮ ಭಾಷೆಯಲ್ಲಿ ವಾಕ್ಯಗಳ ಭಾಗವು ಎಲ್ಲೆಲ್ಲಿ ಇರಬೇಕು ಎಂಬುದನ್ನು ತಿಳಿಸುತ್ತದೋ ಅದನ್ನು ಅಧ್ಯಯನ ಮಾಡಿ ನಿಮ್ಮ ಭಾಷಾಂತರದಲ್ಲಿ ಅದನ್ನು ಬಳಸಿಕೊಳ್ಳಿ
  • ಆತನು ಅಲ್ಲಿಂದ ಹೊರಟು ಬಂದನು ಸ್ವಂತ ಊರಿಗೆ ತನ್ನ ಹಿಂದೆಯೇ ಬಂದರು ಶಿಷ್ಯರು. (ಮಾರ್ಕ 6:1)

ಈ ವಾಕ್ಯ ಮೂಲ ಗ್ರೀಕ್ ಭಾಷೆಯ ಕ್ರಮದಲ್ಲಿದೆ. ULB ಇದನ್ನು ಇಂಗ್ಲೀಷ್ ನ ಸಹಜವಾದ ಕ್ರಮದಲ್ಲಿ ಇಟ್ಟಿದೆ (ಈ ಕೆಳಗಿನಂತೆ) ಆತನು ಅಲ್ಲಿಂದ ಹೊರಟು ತನ್ನ ಊರಿಗೆ ಬಂದನು ; ಆತನ ಶಿಷ್ಯರು ಆತನ ಹಿಂದೆಯೇ ಬಂದರು. (ಮಾರ್ಕ 6:1 ULB)

  1. ನಿಮ್ಮ ಭಾಷೆಯಲ್ಲಿ ಹೊಸ ಮತ್ತು ಮುಖ್ಯ ವಿಷಯವನ್ನು ಮತ್ತು ವಿಷಯವನ್ನು ಯಾವ ಕ್ರಮದಲ್ಲಿ ಇಟ್ಟಿದೆಯೋ ಅದನ್ನೇ ಸರಿಯಾದ ಅರ್ಥದಲ್ಲಿ ಬರುವಂತೆ ಭಾಷಾಂತರದಲ್ಲಿ ಹಿಡಿದಿಡಬೇಕು

" ಹೊತ್ತು ಇಳಿಯುತ್ತಾ ಬಂತು, ಆ ಹನ್ನೆರೆಡು ಮಂದಿ ಶಿಷ್ಯರು ಆತನ ಬಳಿಗೆ ಬಂದು, " ಈ ಗುಂಪಿಗೆ ಅಪ್ಪಣೆಕೊಡು. ಇವರು ಸುತ್ತಲಿರುವ ಹಳ್ಳಿ, ಹಳ್ಳಿಗಳಿಗೆ ಹೋಗಿ ಇಳುಕೊಂಡು ಊಟಕ್ಕೆ ಬೇಕಾದ ಪದಾರ್ಥಗಳನ್ನು ದೊರಕಿಸಿಕೊಳ್ಳಲಿ ನಾವು ಇಂತಹ ಅಡವಿಯ ಸ್ಥಳದಲ್ಲಿ ಇದ್ದೇವಲ್ಲಾ ಎಂದು ಆತನಿಗೆ ಹೇಳಿದರು, " (ಲೂಕ 9:12 ULB)

ನಿಮ್ಮ ಭಾಷೆಯಲ್ಲಿ ಮುಖ್ಯ ವಿಷಯವನ್ನು ವಾಕ್ಯದ ಕೊನೆಯಲ್ಲಿ ಹೇಳಿದರೆ, ನೀವು ವಾಕ್ಯದ ಕ್ರಮವನ್ನು ಬದಲಾಯಿಸಬಹುದು.

  • ಈಗ ಹೊತ್ತು ಇಳಿಯುತ್ತಾ ದಿನವು ಕೊನೆಗೊಳ್ಳುತ್ತಿತ್ತು, ಹನ್ನೆರಡು ಮಂದಿ ಶಿಷ್ಯರು ಆತನ ಬಳಿಗೆ ಬಂದು ಹೀಗೆ ಹೇಳಿದರು "ನಾವು ನಿರ್ಜನವಾದ ಅಡವಿಯ ಮಧ್ಯದಲ್ಲಿ ಇದ್ದೇವೆ, ಈ ಜನರ ಗುಂಪು ಸುತ್ತಮುತ್ತ ಇರುವ ಹಳ್ಳಿಗಳಿಗೆ ಹೊಗಿ ಇಳಿದುಕೊಂಡು, ಊಟಕ್ಕೆ ಬೇಕಾದ ಪದಾರ್ಥಗಳನ್ನು ದೊರಕಿಸಿ ಕೊಳ್ಳಲಿ "

"ಜನರೆಲ್ಲ ನಿಮ್ಮನ್ನು ಹೊಗಳಿದರೆ ನಿಮ್ಮ ಗತಿಯನ್ನು ಏನು ಹೇಳಲಿ ! ಅವರ ಪೂರ್ವಿಕರು ಸುಳ್ಳು ಪ್ರವಾದಿಗಳನ್ನು ಹಾಗೆಯೆ ಹೊಗಳಿದರು". (ಲೂಕ 6:26 ULB)

ನಿಮ್ಮ ಭಾಷೆಯಲ್ಲಿ ಮುಖ್ಯ ವಿಷಯವನ್ನು ವಾಕ್ಯದ ಕೊನೆಯಲ್ಲಿ ಇಟ್ಟರೆ ನೀವು ವಾಕ್ಯದ ಕ್ರಮವನ್ನು ಬದಲಾಯಿಸಬಹುದು. ಜನರು ನಿಮ್ಮ ಬಗ್ಗೆ ಒಳ್ಳೆಯ ವಿಚಾರಗಳನ್ನು ಹೇಳಿ ಹೊಗಳಿದರೆ ಆಗ ನಿಮ್ಮ ಗತಿ ಏನು ?, ಅವರ ಪೂರ್ವಿಕರು ಸುಳ್ಳು ಪ್ರವಾದಿಗಳನ್ನು ಹಾಗೆಯೇ ಹೊಗಳಿದರು.