kn_ta/translate/figs-informremind/01.md

14 KiB
Raw Permalink Blame History

ನುಡಿಗಳನ್ನು ನಾಮಪದಗಳೊಂದಿಗೆ ಬಳಸಿದಾಗ ನಾಮಪದದ ಬಗ್ಗೆ ಮಾಹಿತಿ ಕೊಡಲು ಮತ್ತು ಜನರಿಗೆ ಆ ವಿಷಯದಲ್ಲಿ ಏನನ್ನಾದರೂ ನೆನಪಿಸಲು ಕೆಲವು ಭಾಷೆಗಳಲ್ಲಿ ಸಾಧ್ಯವಾಗುತ್ತದೆ.

  • ಮೇರಿ ಸ್ವಲ್ಪ ಆಹಾರವನ್ನು ತನ್ನ ಸಹೋದರಿಗೆ ಕೊಟ್ಟಳು, ಆದುದರಿಂದ ಅವಳು ಕೃತಜ್ಞತೆ ಸಲ್ಲಿಸಿದಳು .

‘ಅವಳು ಕೃತಜ್ಞತೆ ಸಲ್ಲಿಸಿದಳು’ ಎಂಬ ನುಡಿಗುಚ್ಛ ಸಹೋದರಿ ಪದವನ್ನು ಅನುಸರಿಸಿ ಬರುತ್ತದೆ.ಮೇರಿ ತನ್ನ ಸಹೋದರಿಗೆ ಆಹಾರ ಕೊಟ್ಟಾಗ ಅವಳು ತಕ್ಷಣವೇ ವಂದನೆ ಹೇಳುವ ಮೂಲಕ ಪ್ರತಿಕ್ರಿಯೆ ತೋರಿಸಿದಳು ಈ ವಿಷಯದಲ್ಲಿ ಮೇರಿಗೆ ಇಬ್ಬರು ಸಹೋದರಿಯರಿದ್ದು ಇಬ್ಬರೂ ಸಹೋದರಿಯ ನಡುವೆ ಯಾವ ವ್ಯತ್ಯಾಸವನ್ನು ತೋರಿಸುತ್ತಿಲ್ಲ ಇದು ಕೇವಲ ಆ ಸಹೋದರಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದೆಯಷ್ಟೇ

ವಿವರಣೆ

ನುಡಿಗಳನ್ನು ನಾಮಪದಗಳೊಂದಿಗೆ ಬಳಸಿದಾಗ ನಾಮಪದದ ಬಗ್ಗೆ ಮಾಹಿತಿ ಕೊಡಲು ಮತ್ತು ಆ ವಿಷಯದಲ್ಲಿ ಏನನ್ನಾದರೂ ನೆನಪಿಸಲು ಕೆಲವು ಭಾಷೆಗಳಲ್ಲಿ ಸಾಧ್ಯವಾಗುತ್ತದೆ.

  • ಮೇರಿ ಸ್ವಲ್ಪ ಆಹಾರವನ್ನು ತನ್ನ ಸಹೋದರಿಗೆ ಕೊಟ್ಟಳು, ಆದುದರಿಂದ ಅವಳು ಕೃತಜ್ಞತೆ ಸಲ್ಲಿಸಿದಳು .

‘ಅವಳು ಕೃತಜ್ಞತೆ ಸಲ್ಲಿಸಿದಳು’ ಎಂಬ ನುಡಿಗುಚ್ಛ ಸಹೋದರಿ ಪದವನ್ನು ಅನುಸರಿಸಿ ಬರುತ್ತದೆ.ಮೇರಿ ತನ್ನ ಸಹೋದರಿಗೆ ಆಹಾರ ಕೊಟ್ಟಾಗ ಅವಳು ತಕ್ಷಣವೇ ವಂದನೆ ಹೇಳುವ ಮೂಲಕ ಪ್ರತಿಕ್ರಿಯೆ ತೋರಿಸಿದಳು ಈ ವಿಷಯದಲ್ಲಿ ಮೇರಿ ಮೇರಿಗೆ ಇಬ್ಬರು ಸಹೋದರಿಯರಿದ್ದು ಇಬ್ಬರೂ ಸಹೋದರಿಯ ನಡುವೆ ಯಾವ ವ್ಯತ್ಯಾಸವನ್ನು ತೋರಿಸುತ್ತಿಲ್ಲ.

** ಜನರು ಈ ನುಡಿಗುಚ್ಛಗಳನ್ನು ಬಳಸಲು ಕಾರಣ**: ಜನರು ಆಗಿಂದಾಗ್ಗೆ ಇಂತಹ ನೆನಪು ನೀಡುವ ಪದಗಳನ್ನು ಅಥವಾ ಹೊಸ ಮಾಹಿತಿಗಳನ್ನು ಅಸಮರ್ಪಕವಾಗಿ ಬಳಸುತ್ತಾರೆ. ಅವರು ತಮ್ಮ ಶ್ರೋತೃಗಳು ತಾವು ನೀಡುತ್ತಿರುವ ಮಾಹಿತಿಗಳ ಕಡೆ ಗಮನ ನೀಡುತ್ತಿದ್ದಾರೆಯೇ ಇಲ್ಲವೇ ಎಂದು ಪರೀಕ್ಷಿಸಲು ಹೀಗೆ ಹೇಳುವುದುಂಟು. ಮೇಲೆ ಕೊಟ್ಟಿರುವ ಉದಾಹರಣೆಯಲ್ಲಿ ಮೇರಿ ಮಾಡಿದ ಕೆಲಸದ ಕಡೆ ತಮ್ಮ ಶ್ರೋತೃಗಳು ಗಮನ ಕೊಡಬೇಕೆಂದು ಆಶಿಸುತ್ತಾರೆಯೇ ಹೊರತು ಅವಳ ಸಹೋದರಿಯ ಪ್ರತಿಕ್ರಿಯೆಕಡೆ ಅಲ್ಲ.

** ಇದಕ್ಕೆ ಕಾರಣ ಇದೊಂದು ಭಾಷಾಂತರ ವಿಷಯ:** ಭಾಷೆಯಲ್ಲಿ ಅನೇಕ ವಿಭಿನ್ನ ಮಾರ್ಗಗಳು ಸಂವಹನ ಸಂಜ್ಞೆಗಳನ್ನು ನೀಡಿ ಶ್ರೋತೃಗಳು ವಿಶೇಷ ಗಮನ ನೀಡುವಂತೆ ಮಾಡುತ್ತದೆ.

ಭಾಷಾಂತರ ತತ್ವಗಳು.

  • ನಿಮ್ಮ ಭಾಷೆಯಲ್ಲಿ ನಾಮಪದದೊಂದಿಗೆ ಹೊಸ ಮಾಹಿತಿಯನ್ನು ಪಡೆಯಲು ನುಡಿಗುಚ್ಛಗಳನ್ನು ಬಳಸದಿದ್ದರೆ ಇದಕ್ಕೊಂದು ನೆನಪಿನ ಜ್ಞಾಪನಾ ಅಂಶ ಇಲ್ಲದಿದ್ದರೆ ನೀವು ಹೊಸ ಮಾಹಿತಿ ಅಥವಾ ಜ್ಞಾಪನಾ ಅಂಶವನ್ನು ವಿಭಿನ್ನ ರೀತಿಯಲ್ಲಿ ವಾಕ್ಯದ ಭಾಗದಲ್ಲಿ ಸೇರಿಸಬೇಕು.
  • ಇದನ್ನು ಕಡಿಮೆ ಒತ್ತು ನೀಡಿ ಪ್ರಸ್ತುತ ಪಡಿಸಬೇಕು.
  • ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ: ನಿಮ್ಮ ಭಾಷೆಯಲ್ಲಿ ಹೆಚ್ಚು ಒತ್ತು ನೀಡಿ ಮಾಹಿತಿಗಳನ್ನು ಹೇಗೆ ವ್ಯಕ್ತಪಡಿಸಬಹುದು ಮತ್ತು ಇದೇ ಮಾಹಿತಿಯನ್ನು ಕಡಿಮೆ ಒತ್ತು ನೀಡಿ ಪ್ರಸ್ತುತಪಡಿಸುವುದು ಹೇಗೆ ?

ಸತ್ಯವೇದದಿಂದ ಉದಾಹರಣೆಗಳು.

ಮೂರನೇ ನದಿಯ ಹೆಸರು ಟೈಗ್ರಿಸ್, ಅಸ್ಯೂರ್ ಸೀಮೆಯ ಪೂರ್ವಕ್ಕೆ ಹರಿಯುತ್ತದೆ. . (ಆದಿಕಾಂಡ 2:14 ULB)

ಟೈಗ್ರಿಸ್ ಎಂಬ ನದಿ ಒಂದೇ ಒಂದು ನದಿ ಇದೆ. " ಅಸ್ಯೂರ್ ಸೀಮೆಯ ಪೂರ್ವಕ್ಕೆ ಈ ನದಿ ಹರಿಯುತ್ತದೆ " ಎಂಬ ನುಡಿಗಟ್ಟು ನದಿ ಎಲ್ಲಿಂದ ಎಲ್ಲಿಗೆ ಹರಿಯುತ್ತದೆ ಎಂಬ ಮಾಹಿತಿ ನೀಡುತ್ತದೆ. ಇದು ಮೂಲ ಶ್ರೋತೃಗಳಿಗೆ ಸಹಾಯಕವಾಗಿರುತ್ತದೆ, ಮತ್ತು ಅವರಿಗೆ ಅಸ್ಯೂರ್ ಎಲ್ಲಿದೆ ಎಂದು ತಿಳಿದಿದೆ.

ನಾನು ಸೃಷ್ಟಿಸಿದ ಮಾನವ ಜನಾಂಗವನ್ನು ಭೂಮಿಯ ಮೇಲಿನಿಂದ ನಾಶ / ಒರೆಸಿಹಾಕಿ ಬಿಡುತ್ತೇನೆ ಎಂದನು. (ಆದಿಕಾಂಡ 6:7 ULB)

ಇಲ್ಲಿ ಬಳಸಿರುವ " ನಾನು ಸೃಷ್ಟಿಸಿದ ಮಾನವ ಜನಾಂಗ " ಎಂಬ ನುಡಿಗುಚ್ಛ ದೇವರು ಮತ್ತು ಮಾನವರ ನಡುವಿನ ಸಂಬಂಧವನ್ನು ನೆನಪಿಸುತ್ತದೆ. ಇದಕ್ಕೆ ಕಾರಣವೇನೆಂದರೆ ದೇವರಿಗೆ ಇವುಗಳನ್ನು ನಾಶಮಾಡುವ ಹಕ್ಕು ಇದೆ.

ನಾನು ಈ ಮೆಂಪಿಸಿಸ್ ನ ನಿಷ್ಟ್ರಯೋಜಕಪ್ರತಿಮೆಗಳನ್ನು ಕೊನೆಗಾಣಿಸುತ್ತೇನೆ. (ಯೆಹೆಜ್ಕೇಲ 30:13 ULB)

ಎಲ್ಲಾ ವಿಗ್ರಹಗಳು ನಿಷ್ಟ್ರಯೋಜಕ. ಆದುದರಿಂದಲೇ ದೇವರು ಅವುಗಳನ್ನು ನಾಶಮಾಡುತ್ತೇನೆ ಎಂದಿರುವುದು.

.. ನಿನ್ನ ವಿಧಿಗಳು ಹಿತಕರವಾಗಿದೆ, ಇಗೋ ನಿನ್ನ ನೇಮಗಳನ್ನು ಪ್ರೀತಿಸುತ್ತೇನೆ. (ದಾ. ಕೀ. 119:39 ULB)

ದೇವರ ನ್ಯಾಯ ತೀರ್ಪು ನೀತಿಪರವಾಗಿದೆ. ಆದುದರಿಂದ ಕೀರ್ತನಗಾರನು ಈ ಕೀರ್ತನೆಗಳನ್ನು ಬರೆಯುವಾಗ ಅವುಗಳನ್ನು ಒಳ್ಳೆಯದು ಎಂದು ಹೇಳಿದರು.

ಭಾಷಾಂತರ ತಂತ್ರಗಳು

ನಾಮಪದದೊಂದಿಗೆ ಇರುವ ನುಡಿಗುಚ್ಛಗಳ ಉದ್ದೇಶವನ್ನು ಜನರು / ಓದುಗರು ಅರ್ಥಮಾಡಿಕೊಂಡರೆ ಆ ನುಡಿಗುಚ್ಛಗಳನ್ನು ಮತ್ತು ನಾಮಪದವನ್ನು ಹಾಗೆ ಉಳಿಸಿಕೊಳ್ಳಬೇಕು. ಇಲ್ಲಿ ನುಡಿಗುಚ್ಛಗಳನ್ನು ಮಾಹಿತಿ ನೀಡಲು ಮತ್ತು ನೆನಪಿಸಲು ಬಳಸಿಕೊಳ್ಳಲು ಅನುಕೂಲವಾಗುವಂತೆ ಕೆಲವು ತಂತ್ರಗಳನ್ನು ನೀಡಿದೆ.

  1. ಮಾಹಿತಿಯನ್ನು ವಾಕ್ಯದ ಒಂದು ಭಾಗದಲ್ಲಿ ಇರಿಸಿ ಪದಗಳನ್ನು ಅದರ ಉದ್ದೇಶ ತಿಳಿಸುವಂತೆ ಇಡಬೇಕು.
  2. ಕಡಿಮೆ ಒತ್ತುನೀಡಿ ಮಾಹಿತಿ ನೀಡಲು ನಿಮ್ಮ ಭಾಷೆಯ ಒಂದು ವಿಧಾನವನ್ನು ಬಳಸಿಕೊಳ್ಳಿ.

ಇದು ಒಂದು ಚಿಕ್ಕ ಪದವನ್ನು ಸೇರಿಸುವುದರ ಮೂಲಕ ಅಥವಾ ಮತ್ತು ಯಾವ ರೀತಿಯ ಧ್ವನ್ಯಾರ್ಥ ಇದೆ ಎಂಬುದನ್ನು ಸೇರಿಸಬಹುದು. ಕರ್ತರಿ ಕರ್ಮಣಿ ಪ್ರಯೋಗಗಳಲ್ಲಿ, ಧ್ವನ್ಯಾರ್ಥಗಳಲ್ಲಿ ವ್ಯಾಕರಣಾಂಶಗಳನ್ನು ಅಲ್ಪ ವಿರಾಮ, ಅರ್ಧವಿರಾಮ, ಪೂರ್ಣ ವಿರಾಮಗಳನ್ನು, ಆವರಣ ಚಿಹ್ನೆಗಳನ್ನು ಬಳಸಿದಾಗ ಬದಲಾವಣೆಗಳು ಆಗಬಹುದು.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿದ ಬಗ್ಗೆ ಉದಾಹರಣೆಗಳು.

  1. ಮಾಹಿತಿಯನ್ನು ವಾಕ್ಯದ ಒಂದು ಭಾಗದಲ್ಲಿ ಇರಿಸಿ ಪದಗಳನ್ನು ಅದರ ಉದ್ದೇಶ ತಿಳಿಸುವಂತೆ ಇಡಬೇಕು.
  • ನಿಷ್ಪ್ರಯೋಜಕ ವಿಗ್ರಹಗಳ ಸೇವೆ ಮಾಡುವವರನ್ನು ನಾನು ದ್ವೇಷಿಸುತ್ತೇನೆ (ದಾ.ಕೀ. 31:6 ULB) - "ನಿಷ್ಪ್ರಯೋಜಕ" ವಿಗ್ರಹಗಳು ಎಂದು ಹೇಳುವ ಮೂಲಕ ದಾವೀದನು ಎಲ್ಲಾ ವಿಗ್ರಹಗಳನ್ನು ದ್ವೇಷಿಸಲು ಕಾರಣವೇನು ಎಂಬುದನ್ನು ಅದನ್ನು ಪೂಜಿಸುವವರನ್ನು ಏಕೆ ದ್ವೇಷಿಸುತ್ತಾನೆ ಎಂದು ಹೇಳಿದ್ದಾನೆ.

ಅವನು ಮೌಲ್ಯಯುತ ವಿಗ್ರಹಗಳು ಮತ್ತು ನಿಷ್ಪ್ರಯೋಜಕ ವಿಗ್ರಹಗಳು ಇವುಗಳ ನಡುವೆ ಯಾವ ವ್ಯತ್ಯಾಸವನ್ನೂ ಕಾಣಲು ಪ್ರಯತ್ನಿಸಿಲ್ಲ.

  • "ಏಕೆಂದರೆ ವಿಗ್ರಹಗಳು ಮೌಲ್ಯಹೀನವಾಗಿವೆ. ಅವುಗಳ ಸೇವೆ ಮಾಡುವವರನ್ನು, ಆರಾಧಿಸುವವರನ್ನು ದ್ವೇಷಿಸುತ್ತೇನೆ."
  • .. ಏಕೆಂದರೆ ನಿನ್ನ ನೀತಿಪರವಾದ ನ್ಯಾಯತೀರ್ಪು ಒಳ್ಳೆಯದಾಗಿದೆ. (ದಾ.ಕೀ. 119:39 ULB)
  • .. ನಿನ್ನ ನ್ಯಾಯ ತೀರ್ಪು ಒಳ್ಳೆಯದಾಗಿದೆಏಕೆಂದರೆ ಅವು ನ್ಯಾಯಪರವಾಗಿದೆ.
  • ತೊಂಬತ್ತು ವರ್ಷದವಳಾದ, ಸಾರಳು ಹೆತ್ತಾಳೇ ? ಗಂಡು ಮಗುವನ್ನು ಹಡೆಯುವಳೇ ? , ? (ಆದಿಕಾಂಡ 17:17-18 ULB) - "ತೊಂಬತ್ತು ವರ್ಷದವಳು " ಎಂಬ ನುಡಿಗುಚ್ಛ ಸಾರಳ ವಯಸ್ಸನ್ನು ನೆನಪಿಸುವಂತದ್ದು. ಅಬ್ರಹಾಮನು ಏಕೆ ಈ ಪ್ರಶ್ನೆಯನ್ನು ಕೇಳಿದ ಎಂಬುದನ್ನು ತಿಳಿಸುತ್ತದೆ. ಅಷ್ಟು ವಯಸ್ಸಾದ ಹೆಂಗಸು ಮಗುವನ್ನು ಹಡೆಯುವುದನ್ನು ಆತನು ನಿರೀಕ್ಷಿಸಿರಲಿಲ್ಲ
  • " ಸಾರಳು ತೊಂಬತ್ತು ವರ್ಷದವಳಾದರೂ , ಒಬ್ಬ ಮಗನನ್ನು ಹಡೆಯಲು ಸಾಧ್ಯವೇ ?
  • ಯೆಹೋವನು ಸ್ತೋತ್ರಕ್ಕೆ ಅರ್ಹನು ನಾನು ಆತನಿಗೆ ಮೊರೆ ಇಡಲು ನನ್ನನ್ನು ಶತ್ರುಗಳಿಂದ ರಕ್ಷಿಸುತ್ತಾನೆ.. (2 ಸಮುವೇಲ22:4 ULB) ಯೆಹೋವ ದೇವರು ಒಬ್ಬನೇ. " ಸ್ತೋತ್ರಕ್ಕೆ ಅರ್ಹನು " ಎಂಬ ನುಡಿಗುಚ್ಛ ಯೆಹೋವ ದೇವರನ್ನು ಕೂಗಿ ಮೊರೆ ಇಡಲು ಕಾರಣವನ್ನು ತೋರಿಸುತ್ತದೆ.
  • "ನಾನು ಯೆಹೋವನಿಗೆ ಮೊರೆ ಇಡುತ್ತೇನೆ, ಏಕೆಂದರೆ ಆತನು ಸ್ತುತಿ ಸ್ತೋತ್ರಕ್ಕೆ ಪಾತ್ರನು"
  1. ಮಾಹಿತಿಗಳನ್ನು ಕಡಿಮೆ ಪ್ರಮಾಣದಲ್ಲಿ ಅಭಿವ್ಯಕ್ತಗೊಳಿಸಲು ನಿಮ್ಮ ಭಾಷೆಯಲ್ಲಿನ ಒಂದು ಮಾರ್ಗವನ್ನು ಬಳಸಿಕೊಳ್ಳಿ.
  • ಮೂರನೇ ನದಿಯ ಹೆಸರು ಟೈಗ್ರಿಸ್, ಅಶ್ಯೂರ್ ದೇಶದ ಪೂರ್ವಕ್ಕೆ ಹರಿಯುತ್ತದೆ . (ಆದಿಕಾಂಡ 2:14 ULB)
  • " ಮೂರನೇ ನದಿಯ ಹೆಸರು ಟೈಗ್ರಿಸ್, ಇದು ಅಶ್ಯೂರ್ ದೇಶದ ಪೂರ್ವ ದಿಕ್ಕಿನ ಕಡೆಗೆ ಹರಿಯುತ್ತದೆ .