kn_ta/translate/figs-inclusive/01.md

6.5 KiB

ವಿವರಣೆ

ಕೆಲವು ಭಾಷೆಗಳಲ್ಲಿ "ನಾವು" ಎಂಬ ಪದಕ್ಕೆ ಒದಕ್ಕಿಂತ ಹೆಚ್ಚಾದ ರೂಪಗಳಿವೆ: ಅಂತರ್ಗತ ರೂಪದ ಅರ್ಥವೇನಂದರೆ "ನಾನು" ಮತ್ತು "ನೀನು" ಮತ್ತು ವ್ಯಾವರ್ತಕ ರೂಪದ ಅರ್ಥವೇನಂದರೆ ನಾನು ಮತ್ತು ಬೇರೊಬ್ಬರು ಆದರೆ "ನೀನು" ಇಲ್ಲ. ಅಂತರ್ಗತ ನಾಮಪದವು ಯಾವ ವ್ಯಕ್ತಿ ಮಾತನಾಡುತ್ತಿದ್ದರೋ ಅವರು ಮತ್ತು ಇತರರನ್ನು ಮಾತ್ರ ಒಳಗೊಂಡಿರುತ್ತದೆ. ಇದು "ನಾವು," "ನಮ್ಮ," "ನಮ್ಮದು," ಮತ್ತು "ನಮ್ಮನ್ನು" ಎಂಬ ಪದಗಳಲ್ಲಿಯೂ ಹಾಗೆ ಇರುತ್ತದೆ. ಕೆಲವು ಭಾಷೆಗಳಲ್ಲಿ ಇವುಗಳಿಗೆ ಅಂತರ್ಗತ ಮತ್ತು ವ್ಯಾವರ್ತಕ ರೂಪಗಳು ಇರುತ್ತವೆ.

ಚಿತ್ರಗಳನ್ನು ನೋಡಿರಿ. ಮಾತನಾಡುವವನು ಬಲಗಡೆಯಲ್ಲಿರುವ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾನೆ. ಹಳದಿ ಬಣ್ಣದಲ್ಲಿರುವ ಸೂಚನೆ ಯಾವುದು ಅಂತರ್ಗತ "ನಾವು" ಮತ್ತು ವ್ಯಾವರ್ತಕ "ನಾವು" ಎಂಬ ಪದಗಳನ್ನು ತೋರಿಸುತ್ತದೆ.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

ಸತ್ಯವೇದವನ್ನು ಮೊದಲು ಹಿಬ್ರು, ಅರಾಮಿಕ್ ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆಯಲಾಯಿತು. ಇಂಗ್ಲೀಷ್ ಭಾಷೆಯಲ್ಲಿ ಇರುವಂತೆ ಈ ಭಾಷೆಗಳಲ್ಲಿ ಪ್ರತ್ಯೇಕವಾಗಿ ಅಂತರ್ಗತ ಮತ್ತು ವ್ಯಾವರ್ತಕ ರೂಪಗಳಾದ "ನಾವು" ಎಂಬ ಪದಗಳು ಇಲ್ಲ. ಪ್ರತ್ಯೇಕವಾದ ಅಂತರ್ಗತ ಮತ್ತು ವ್ಯಾವರ್ತಕ ರೂಪದ ನಾಮಪದಗಳಿರುವ ಭಾಷೆಗೆ ಭಾಷಾಂತರ ಮಾಡುವವರು ಮಾತನಾಡುವವನು ಹೇಳಿದ್ದರ ಅರ್ಥವೇನೆಂದು ಗ್ರಹಿಸಿಕೊಳ್ಳಬೇಕು, ಇದರಿಂದ ಯಾವ ರೂಪವಿರುವ "ನಾವು" ಎಂಬ ಪದವನ್ನು ಬಳಸಬೇಕೆಂದು ತೀರ್ಮಾನಿಸಬಹುದು.

ಸತ್ಯವೇದದಲ್ಲಿನ ಉದಾಹರಣೆಗಳು

ಅಂತರ್ಗತ

…"ನಾವು ಈಗಲೇ ಬೆತ್ಲೆಹೇಮಿಗೆ ಹೋಗಿ ಕರ್ತನು ನಮಗೆ ತಿಳಿಯಪಡಿಸಿದ ಸಂಗತಿಯನ್ನು ನೋಡೋಣ ನಡೆಯಿರಿ" ಎಂದು ಕುರುಬರು ತಮ್ಮತಮ್ಮೊಳಗೆ ಮಾತಾಡಿಕೊಂಡರು (ಲೂಕ 2:15 ULT)

ಆ ಕುರುಬರು ಒಬ್ಬರ ಸಂಗಡಲ್ಲೊಬ್ಬರು ಮಾತನಾಡಿಕೊಳ್ಳುತ್ತಿದ್ದರು. ಅವರು "ನಾವು" ಎಂಬ ಪದವನ್ನು ಬಳಸುವಾಗ ತಮ್ಮೊಂದಿಗೆ ಮಾತನಾಡುತ್ತಿರುವ ಜನರನ್ನು ಸೇರಿಸಿಕೊಂಡೇ ಮಾತನಾಡುತ್ತಿದ್ದಾರೆ.

ಒಂದಾನೊಂದು ದಿನ ಯೇಸು ಮತ್ತು ಆತನ ಶಿಷ್ಯರು ಒಂದು ದೋಣಿಯನ್ನು ಹತ್ತಿದರು, ಆತನು ಅವರಿಗೆ, "ನಾವು ಸರೋವರದ ಆಚೆ ದಡಕ್ಕೆ ಹೋಗೋಣ ಬನ್ನಿರಿ" ಎಂದನು. ಆಗ ಅವರು ದೋಣಿಯನ್ನು ನೀರಿನೊಳಗೆ ನೂಕಿ ಹೊರಟರು. (ಲೂಕ 8:22 ULT)

ಯೇಸು "ನಾವು" ಎಂದು ಹೇಳಿದಾಗ ಆತನು ತನ್ನನ್ನು ಮತ್ತು ತಾನು ಮಾತನಾಡುತ್ತಿರುವ ಶಿಷ್ಯರನ್ನು ಸೂಚಿಸುತ್ತಿದ್ದಾನೆ, ಆದ್ದರಿಂದ ಇದು ಅಂತರ್ಗತ ರೂಪವಾಗಿರುವುದು.

ವ್ಯಾವರ್ತಕ

ತಂದೆಯ ಬಳಿಯಲ್ಲಿದ್ದು ನಮಗೆ ಪ್ರತ್ಯಕ್ಷವಾದಂಥ ಆ ನಿತ್ಯಜೀವವನ್ನು ನಾವು ಕಂಡು ಅದನ್ನು ಕುರಿತು ಸಾಕ್ಷಿ ಹೇಳಿ ಅದನ್ನು ನಿಮಗೆ ಸಾರುತ್ತೇವೆ. (1 ಯೋಹಾನ 1: 2 ULT)

ಯೇಸುವನ್ನು ನೋಡದ ಜನರಿಗೆ ಅವನು ಮತ್ತು ಇತರ ಅಪೊಸ್ತಲರು ಕಂಡದ್ದನ್ನು ಯೋಹಾನನು ಹೇಳುತ್ತಿದ್ದಾನೆ. ಆದ್ದರಿಂದ “ನಾವು” ಮತ್ತು “ನಮಗೆ” ಎಂಬ ವ್ಯಾವರ್ತಕ ರೂಪಗಳಿರುವ ಭಾಷೆಗಳು ಈ ವಚನದಲ್ಲಿ ವ್ಯಾವರ್ತಕ ರೂಪಗಳನ್ನು ಬಳಸಬಹುದು.

ಅವರು, “ನಮ್ಮಲ್ಲಿ ಐದು ರೊಟ್ಟಿ ಎರಡು ಮೀನು ಹೊರತು ಹೆಚ್ಚೇನೂ ಇಲ್ಲ, ನಾವು ಹೋಗಿ ಈ ಜನರಿಗೆಲ್ಲಾ ಆಹಾರವನ್ನು ಕೊಂಡು ತರಬೇಕೋ?” ಅಂದರು. (ಲೂಕ 9:13 ULT)

ಮೊದಲ ಉಪವಾಕ್ಯದಲ್ಲಿ, ಶಿಷ್ಯರು ತಮ್ಮಲ್ಲಿ ಎಷ್ಟು ಆಹಾರ ಇದೆ ಎಂದು ಯೇಸುವಿಗೆ ಹೇಳುತ್ತಿದ್ದಾರೆ, ಆದ್ದರಿಂದ ಈ “ನಾವು/ನಮ್ಮಲ್ಲಿ” ಎಂಬುದು ಅಂತರ್ಗತ ರೂಪ ಅಥವಾ ವ್ಯಾವರ್ತಕ ರೂಪವಾಗಿರಬಹುದು. ಎರಡನೆಯ ಉಪವಾಕ್ಯದಲ್ಲಿ, ಶಿಷ್ಯರು ಅವರಲ್ಲಿ ಕೆಲವರು ಆಹಾರವನ್ನು ಕೊಂಡುಕೊಳ್ಳಲು ಹೋಗುವ ಬಗ್ಗೆ ಮಾತನಾಡುತ್ತಿದ್ದಾರೆ, ಯೇಸು ಆಹಾರವನ್ನು ಕೊಂಡುಕೊಳ್ಳಲು ಹೋಗುವುದಿಲ್ಲ, ಇದರಿಂದಾಗಿ “ನಾವು” ಎಂಬುದು ವ್ಯಾವರ್ತಕ ರೂಪವಾಗಿರುವುದು.