kn_ta/translate/figs-imperative/01.md

14 KiB

ವಿವರಣೆಗಳು

ಆಜ್ಞಾಪನಾ ವಾಕ್ಯಗಳೆಂದರೆ ಮುಖ್ಯವಾಗಿ ಬಯಕೆಗಳನ್ನು ಅಥವಾ ಕೋರಿಕೆಗಳನ್ನು ವ್ಯಕ್ತಪಡಿಸಲು , ಯಾರಾದರೊಬ್ಬರು ನಿರ್ದಿಷ್ಟವಾದುದನ್ನು ಮಾಡಬೇಕೆಂದು ಹೇಳುವ ಮಾತುಗಳು . ಸತ್ಯವೇದದಲ್ಲಿ ಬರುವ ಆಜ್ಞಾಪನಾ ವಾಕ್ಯಗಳಿಗೆ ಇತರ ಉಪಯೋಗವೂ ಇದೆ.

ಕಾರಣ ಇದೊಂದು ಭಾಷಾಂತರ ತೊಡಕು

ಸತ್ಯವೇದದಲ್ಲಿ ಬಳಕೆಯಾಗಿರುವ ಇಂತಹ ಆಜ್ಞಾಪನಾ ವಾಕ್ಯಗಳನ್ನು ಮತ್ತು ಅದರ ಕಾರ್ಯಗಳನ್ನು ಕೆಲವು ಭಾಷೆಯಲ್ಲಿ ಉಪಯೋಗ ಮಾಡದೆ ಇರಬಹುದು .

ಸತ್ಯವೇದದಲ್ಲಿನ ಉದಾಹರಣೆಗಳು .

ಮಾತನಾಡುವ ವ್ಯಕ್ತಿಗಳು ತಮ್ಮ ಶ್ರೋತೃಗಳನ್ನು ಕುರಿತು ಈ ಆಜ್ಞಾಪನಾ ವಾಕ್ಯಗಳನ್ನು ಆಗಿಂದಾಗ್ಗೆ ಬಳಸಿ ಅವರಿಗೆ ಹೇಳುವುದು ಇಲ್ಲವೇ ಪ್ರಶ್ನೆ ಕೇಳುವುದು ಮಾಡುವರು ಆದಿಕಾಂಡ 2,ನೇ ಅಧ್ಯಾಯದಲ್ಲಿ ಯೆಹೋವನು ಇಸಾಕನನ್ನು ಕುರಿತು ಮಾತನಾಡಿದನು ಮತ್ತು ಐಗುಪ್ತದೇಶಕ್ಕೆ ಹೋಗದೆ ತಾನು ಹೇಳುವ ದೇಶದಲ್ಲಿ ವಾಸಿಸುವಂತೆ ಹೇಳಿದನು .

ಯೆಹೋವನು ಇಸಾಕನ ಮುಂದೆ ಪ್ರತ್ಯಕ್ಷನಾಗಿ ನೀನು ಐಗುಪ್ತದೇಶಕ್ಕೆ"ಇಳಿದು ಹೋಗಬೇಡ , ನಾನು ಹೇಳಿದ ದೇಶದಲ್ಲಿ ವಾಸಮಾಡಬೇಕು . (ಆದಿಕಾಂಡ 26:2 ULB)

ಕೆಲವೊಮ್ಮೆ ಸತ್ಯವೇದದಲ್ಲಿ ಈ ಆಜ್ಞಾಪನಾ ವಾಕ್ಯಗಳಿಗೆ ಇತರ ಉಪಯೋಗಗಳು ಇರುತ್ತವೆ.

ಆಜ್ಞಾಪನಾ ವಾಕ್ಯಗಳು ಘಟನೆಗಳು ನಡೆಯುವ ಬಗ್ಗೆ ತಿಳಿಸಿವೆ.

ದೇವರು ತಾನು ಆಜ್ಞಾಪಿಸುವ ವಾಕ್ಯಗಳ ಮೂಲಕ ಎಲ್ಲವೂ ನಡೆಯುವಂತೆ ಮಾಡಬಹುದು. ಯೇಸು ಒಬ್ಬ ಮನುಷ್ಯನನ್ನು ಕುರಿತು " ಶುದ್ಧನಾಗು " ಎಂದೊಡನೆ ಆ ಮನುಷ್ಯನು ಸ್ವಸ್ಥನಾದನು. ಆ ಮನುಷ್ಯನು ಯೇಸುವಿನ ಆಜ್ಞೆಯಂತೆ ನಡೆಯುವ ಅವಶ್ಯಕತೆ ಇಲ್ಲಿರಲಿಲ್ಲ ಅದರ ಬದಲು ಯೇಸು ತನ್ನ ಆಜ್ಞೆಯ ಮೂಲಕ ಆ ಮನುಷ್ಯನನ್ನು ಸ್ವಸ್ಥಪಡಿಸಿದನು. (ಶುದ್ಧವಾಗು ಎಂದರೆ ಸ್ವಸ್ಥವಾಗು ಎಂದರ್ಥ)

"ನನಗೆ ಮನಸ್ಸುಂಟು" ಶುದ್ಧನಾಗು ." ಅಂದನು . ಕೂಡಲೆ ಅವನು ಕುಷ್ಠದಿಂದ ಶುದ್ಧನಾದ. (ಮತ್ತಾಯ 8:3 ULB)

ಆದಿಕಾಂಡ ಮೊದಲನೇ ಅಧ್ಯಾಯದಲ್ಲಿ ದೇವರು " ಬೆಳಕಾಗಲಿ ಎಂದು ಹೇಳಲು ಬೆಳಕಾಯಿತು ." ಆತನು ಆಜ್ಞಾರೂಪದಲ್ಲಿ ಹೇಳಿದ್ದರಿಂದ ಹೀಗಾಯಿತು. ಕೆಲವು ಭಾಷೆಯಲ್ಲಿ ಉದಾಹರಣೆಗೆ ಹಿಬ್ರೂ ಭಾಷೆಯ ಸತ್ಯವೇದದಲ್ಲಿ ಆಜ್ಞೆಗಳು ಪ್ರಥಮ ಪುರುಷ ಕುರಿತಾಗಿದೆ ಇಂಗ್ಲೀಷ್ ಭಾಷೆಯಲ್ಲಿ ಈ ರೀತಿಯ ಪ್ರಯೋಗವಿಲ್ಲ ಇದರಿಂದ ಪ್ರಥಮ ಪುರುಷ ಆಜ್ಞಾವಾಕ್ಯವನ್ನು ಸಾಮಾನ್ಯ ಮಧ್ಯಮ ಪುರುಷ ಆಜ್ಞಾವಾಕ್ಯವಾಗಿ ULB:ಯಲ್ಲಿರುವಂತೆ ಪರಿವರ್ತಿಸಲಾಗುತ್ತದೆ.

ಆಗ ದೇವರು "ಬೆಳಕಾಗಲಿ ಎಂದು ಹೇಳಲು ," ಅಲ್ಲಿ ಬೆಳಕಾಯಿತು (ಆದಿಕಾಂಡ 1:3 ULB)

ಯಾವ ಭಾಷೆಯಲ್ಲಿ ಪ್ರಥಮ ಪುರುಷ ಆಜ್ಞಾವಾಕ್ಯ ಇರುತ್ತದೋ ಅವರು ಮೂಲ ಹಿಬ್ರೂ ಭಾಷೆಯನ್ನು ಬಳಸಿಕೊಂಡು ಇಂಗ್ಲೀಷಿಗೆ ಭಾಷಾಂತರಿಸುವಾಗ ಈ ರೀತಿ ಆಗಬಹುದು . . " ಬೆಳಕಾಗಲಿ ." ಎಂದು ಬಳಸಬಹುದು .

ಆಶೀರ್ವದವಾಗಿ ಕಾರ್ಯನಿರ್ವಹಿಸುವ ಆಜ್ಞಾಪೂರ್ವಕ ವಾಕ್ಯಗಳು

ಸತ್ಯವೇದದಲ್ಲಿ ದೇವರು ಆಶೀರ್ವಾದಗಳನ್ನು ಆಜ್ಞಾರೂಪದಲ್ಲೇ ಹೇಳುವುದನ್ನು ನೊಡುತ್ತೇವೆ. ಇವು ದೇವರ ಇಚ್ಛೆಯನ್ನು ವ್ಯಕ್ತಪಡಿಸುತ್ತದೆ.

ದೇವರು ಅವರನ್ನು ಆಶೀರ್ವದಿಸಿ " ನೀವು ಬಹು ಸಂತಾನವುಳ್ಳವರಾಗಿ , ಹೆಚ್ಚಿರಿ , ಭೂಮಿಯಲ್ಲಿ ತುಂಬಿಕೊಂಡು . ಅದನ್ನು ವಶಮಾಡಿಕೊಳ್ಳಿರಿ ಸಮುದ್ರದ ಮೀನುಗಳ ಮೇಲೂ ಆಕಾಶದ ಪಕ್ಷಿಗಳ ಮೇಲೂ , ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೂ ದೊರೆತನ ಮಾಡುವಿರಿ

ಆಜ್ಞಾರೂಪದ ವಾಕ್ಯಗಳು ಕೆಲವೊಮ್ಮೆ ಷರತ್ತುಗಳಂತೆ ಕೆಲಸ ನಿರ್ವಹಿಸುತ್ತವೆ.

ಆಜ್ಞಾರೂಪದ ವಾಕ್ಯಗಳು ಷರತ್ತು ಗಳನ್ನು ಕುರಿತು ಹೇಳಲು ಮತ್ತು ಯಾವ ಹಂತದಲ್ಲಿ ನಡೆಯುತ್ತದೆ ಎಂದು ತಿಳಿಸುತ್ತದೆ. ಜೀವನದಲ್ಲಿ ನಡೆಯುವ ಘಟನೆಗಳ ಬಗ್ಗೆ ಜ್ಞಾನೋಕ್ತಿಗಳಲ್ಲಿ ವಿಶೇಷವಾಗಿ ತಿಳಿಸಲಾಗಿದೆ. ಕೆಳಗೆ ಕೊಟ್ಟಿರುವ ಜ್ಞಾನೋಕ್ತಿ ವಾಕ್ಯ 4:6 ಮೂಲಭೂತವಾಗಿ ಆಜ್ಞೆ ನೀಡುವಂತದ್ದಲ್ಲ ಆದರೆ ಜನರು ಏನು ನಡೆಯಬೇಕೆಂದು ನಿರೀಕ್ಷಿಸುತ್ತಾರೋ ಅದರ ಬಗ್ಗೆ ಬೋಧಿಸುವುದು . ಉದಾಹರಣೆಗೆ ಒಂದು ವೇಳೆ/ ಆದರೆ ಅವರು ಜ್ಞಾನವನ್ನು ಬಯಸುವುದಾದರೆ ಬೋಧಿಸುವುದು .

... ಜ್ಞಾನವನ್ನು ಬಿಡದಿದ್ದರೆ ಅದು ನಿನ್ನನ್ನು ಕಾಪಾಡುವುದು . ನೀನು ಅದನ್ನು ಪ್ರೀತಿಸಿದರೆ ಅದು ನಿನ್ನನ್ನು ಸುರಕ್ಷಿತವಾಗಿ ಇರುವಂತೆ ಕಾಯುವುದು. (ಜ್ಞಾನೋಕ್ತಿಗಳು 4:6 ULB)

ಕೆಳಗೆ ಕೊಟ್ಟಿರುವ ಜ್ಞಾನೋಕ್ತಿ 22:6ರಲ್ಲಿ ಜನರು ಏನು ನಡೆಯಬೇಕೆಂದು ನಿರೀಕ್ಷಿಸುತ್ತಾರೋ ಅದು ಅವರು ತಮ್ಮ ಮಕ್ಕಳಿಗೂ ಕಲಿಸಿ ಹೇಗೆ ನಡೆದುಕೊಳ್ಳ ಬೇಕು ಎಂಬುದನ್ನುತಿಳಿಸುತ್ತಾರೆ.

ಮಕ್ಕಳು ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಬೋಧಿಸು . ಮಗುವಾಗಿದ್ದಾಗ ಕಲಿಸಿದ ವಿಷಯವು ಅವನ ಮುಪ್ಪಿನಲ್ಲೂ ಓರೆಯಾಗದೆ ಇರುವಂತೆ ಮಾಡುತ್ತದೆ (ಜ್ಞಾನೋಕ್ತಿಗಳು 22:6 ULB)

ಭಾಷಾಂತರ ಕೌಶಲ್ಯಗಳು

  1. ಸತ್ಯವೇದದಲ್ಲಿನ ಒಂದು ಕಾರ್ಯದ ಕುರಿತು ವಿವರಿಸುವಾಗ ಆಜ್ಞಾರೂಪ ವಾಕ್ಯ ಬಳಸದಿದ್ದರೆ ಅದರ ಬದಲಾಗಿ ಸರಳ / ಹೇಳಿಕೆ ವಾಕ್ಯವನ್ನು ಬಳಸಬಹುದು .
  2. ಜನರು ಏನಾದರೂ ನಡೆಯಬೇಕೆಂದು ನಿರೀಕ್ಷಿಸಿ ಉಪಯೋಗಿಸುವ ವಾಕ್ಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಆಗ ಸಂಪರ್ಕ ಕಲ್ಪಿಸುವ ಪದವನ್ನು ಬಳಸಬಹುದು. ಉದಾಹರಣೆಗೆ "ಇದರಿಂದ" "ಅದರಿಂದ" ಎಂಬ ಪದಗಳು ಇವುಗಳನ್ನು ಬಳಸುವುದರಿಂದ ಏನು ಹೇಳಿದರೋ ಅದರಂತೆ ನಡೆಯುತ್ತದೆ.
  3. ಜನರು ಆಜ್ಞಾರೂಪ ವಾಕ್ಯಗಳನ್ನು ಷರತ್ತಿನಂತೆ ಉಪಯೊಗಿಸದಿದ್ದರೆ ಅವುಗಳನ್ನು ಸರಳ ವಾಕ್ಯಗಳನ್ನಾಗಿ "ಆಗ" ಮತ್ತು "ಆದರೆ." .ಎಂಬ ಪದಗಳನ್ನು ಬಳಸಿ ಮಾಡಬಹುದು .

ಭಾಷಾಂತರ ಕೌಶಲ್ಯವನ್ನು ಅಳವಡಿಸುವ ಬಗ್ಗೆ ಉದಾಹರಣೆಗಳು

  1. ಸತ್ಯವೇದದಲ್ಲಿನ ಇದು ಒಂದು ಕ್ರಿಯೆಯ ಬಗ್ಗೆ ಆಜ್ಞಾರೂಪ ವಾಕ್ಯ ಬಳಸದಿದ್ದರೆ ಅದರ ಬದಲಾಗಿ ಸರಳ /ಹೇಳಿಕೆ ವಾಕ್ಯವನ್ನು ಬಳಸಬಹುದು
  • ಶುದ್ಧನಾಗು . (ಮತ್ತಾಯ 8:3 ULB)
  • " ನೀನು ಈಗ ಶುದ್ಧನಾದೆ "
  • " ನಾನು ಈಗ ನಿನ್ನನ್ನು ಶುದ್ಧಮಾಡಬಲ್ಲೆ * "
  • ದೇವರು " ಬೆಳಕಾಗಲಿ "ಎಂದು ಹೇಳಿದಾಗ ಬೆಳಕಾಯಿತು . (ಆದಿಕಾಂಡ 1:3 ULB)
  • ದೇವರು " ಅಲ್ಲಿ ಬೆಳಕಾಗಲಿ ಎಂದು ಹೇಳಿದನು ಅಲ್ಲಿ ಬೆಳಕಾಯಿತು
  • ದೇವರು ಅವರನ್ನು ಆಶೀರ್ವದಿಸಿ "ನೀವು ಬಹುಸಂತಾನವುಳ್ಳವರಾಗಿ , ದ್ವಿಗುಣ ಗೊಂಡು ಹೆಚ್ಚಿರಿ. ಭೂಮಿಯಲ್ಲಿ ತುಂಬಿಕೊಂಡು ,ಅದನ್ನು ವಶಮಾಡಿಕೊಳ್ಳಿರಿ ಎಲ್ಲವನ್ನು ನಿಮ್ಮ ಆಧಿಪತ್ಯಕ್ಕೆ ತನ್ನಿ ಸಮುದ್ರದ ಮೀನುಗಳ ಮೇಲೆಯೂ , ಆಕಾಶದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನ ಮಾಡಿರಿ ಎಂದನು ." (ಆದಿಕಾಂಡ 1:3 ULB)
  • ದೇವರು ಅವರನ್ನು ಆಶೀರ್ವದಿಸಿ " ನನ್ನ ಚಿತ್ತದಂತೆ ನೀವು ಬಹುಸಂತಾನ ಉಳ್ಳವರಾಗಿ , ಮತ್ತು ದ್ವಿಗುಣಗೊಂಡು ಹೆಚ್ಚಿರಿ. ಭೂಮಿಯಲ್ಲಿ ತುಂಬಿಕೊಂಡು , ಅದನ್ನು ವಶಮಾಡಿಕೊಳ್ಳಿ. ನೀವು ಎಲ್ಲವನ್ನು ನಿಮ್ಮ ಅಧಿಪತ್ಯಕ್ಕೆ ತರಬೇಕು " ಸಮುದ್ರದ ಮೀನುಗಳ ಮೇಲೆಯೂ , ಆಕಾಶದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನ ಮಾಡಿರಿ ಎಂದನು ."
  1. ಜನರು ಏನಾದರೂ ನಡೆಯಬೇಕೆಂದು ನಿರೀಕ್ಷಿಸಿ ಉಪಯೋಗಿಸುವ ವಾಕ್ಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಆಗ ಸಂಪರ್ಕ ಕಲ್ಪಿಸುವ ಪದವನ್ನು ಬಳಸಬಹುದು. ಉದಾಹರಣೆಗೆ "ಇದರಿಂದ" "ಅದರಿಂದ" ಎಂಬ ಪದಗಳು ಇವುಗಳನ್ನು ಬಳಸಬಹುದು.ಆಡಿದ ಮಾತಯಾನ ನಿಮಿತ್ತವೆ ಆ ಕಾರ್ಯ ನಡೆದಿದೆ ಎಂದು ಈ ಮೂಲಕ ತಿಳಿಸಬಹುದು.
  • ದೇವರು " ಬೆಳಕಾಗಲಿ " ಎಂದಾಗ ಅಲ್ಲಿ ಬೆಳಕಾಯಿತು " . (ಆದಿಕಾಂಡ 1:3 ULB)
  • ದೇವರು ಬೆಳಕಾಗಲಿ ಎಂದ ಆದುದರಿಂದ ಅಲ್ಲಿ ಬೆಳಕಾಯಿತು
  • ದೇವರು;" ಬೆಳಕಾಗಲಿ " ಎಂದು ಹೇಳಿದ ಪರಿಣಾಮವಾಗಿ , ಬೆಳಕಾಯಿತು
  1. ಜನರು ಆಜ್ಞಾರೂಪ ವಾಕ್ಯಗಳನ್ನು ಷರತ್ತಿನಂತೆ ಉಪಯೋಗಿಸದಿದ್ದರೆ ಅವುಗಳನ್ನು ಸರಳ ವಾಕ್ಯಗಳನ್ನಾಗಿ "ಆಗ" ಮತ್ತು "ಆದರೆ." .ಎಂಬ ಪದಗಳನ್ನು ಬಳಸಿ ಮಾಡಬಹುದು .
  • ಮಕ್ಕಳು ನಡೆಯತಕ್ಕ ದಾರಿಯನ್ನು ಅವರಿಗೆ ಬೋಧಿಸು ಅವರು ತಮ್ಮ ಮುಪ್ಪಿನಲ್ಲೂ ಅದನ್ನು ಮರೆಯದೆ ಅದರಂತೆ ನಡೆಯವರು (ಜ್ಞಾನೋಕ್ತಿ 22:6 ULB)

ಇದನ್ನು ಹೀಗೆ ಭಾಷಾಂತರಿಸ ಬಹುದು :

" ನೀವು ನಿಮ್ಮ ಮಗುವಿಗೆ ಅದು ನಡಯತಕ್ಕ ದಾರಿಯನ್ನು ಬೋಧಿಸಿದರೆ , ಆಗ ಮಗುವು ತನ್ನ ಮುಪ್ಪಿನಲ್ಲೂ ಆ ಬೋಧನೆಯನ್ನು ಮರೆಯದೆ ಸರಿದಾರಿಯಲ್ಲಿ ನಡೆಯುವುದು. ."