kn_ta/translate/figs-hypo/01.md

17 KiB

"ಸೂರ್ಯನು ಪ್ರಕಾಶಿಸುವುದನ್ನು ನಿಲ್ಲಿಸಿದರೆ…", "ಸೂರ್ಯನು ಪ್ರಕಾಶಿಸುವುದನ್ನು ನಿಲ್ಲಿಸಿಬಿಟ್ಟರೆ ಏನಾಗುತ್ತದೆ? "ಒಂದು ವೇಳೆ ಸೂರ್ಯನು ಪ್ರಕಾಶಿಸುವುದನ್ನು ನಿಲ್ಲಿಸಿದರೇನು…", ಮತ್ತು ಸೂರ್ಯನು ಪ್ರಕಾಶಿಸುವುದನ್ನು ನಿಲ್ಲಿಸದಿದ್ದರೆ…" ಎಂಬ ಈ ನುಡಿಗಟ್ಟುಗಳನ್ನು ಗಮನಿಸಿರಿ. ಕಲ್ಪಿತ ಸನ್ನಿವೇಶಗಳನ್ನು ತಿಳಿಸಲು ನಾವು ಹೀಗೆ ಅಭಿವ್ಯಕ್ತಿ ಪಡಿಸುತ್ತೇವೆ, ಏನಾದರೂ ನಡೆಯಬಹುದು ಎಂದು ಕಲ್ಪಿಸಿಕೊಳ್ಳುವುದು, ಇಲ್ಲವೆ ಮುಂದೆ ಭವಿಷ್ಯದಲ್ಲಿ ಏನು ನಡೆಯಬಹುದು ಅಥವಾ ನಡೆಯದೆಯೂ ಇರಬಹುದು ಎಂದು ಕಲ್ಪನೆಮಾಡುವುದು. ನಾವು ಇವುಗಳನ್ನು ವಿಷಾದ ವ್ಯಕ್ತಪಡಿಸಲು ಅಥವಾ ಶುಭಹಾರೈಸಲು ಬಳಸುತ್ತೇವೆ. ಇಂತಹ ಸನ್ನಿವೇಶಗಳು ಸತ್ಯವೇದದಲ್ಲಿ ಪದೇಪದೇ ಬರುತ್ತವೆ. ನೀವು (ಭಾಷಾಂತರಗಾರರು) ಇಂತಹ ಸನ್ನಿವೇಶಗಳನ್ನು ಭಾಷಾಂತರಿಸುವಾಗ ಜನರಿಗೆ ಈ ಘಟನೆಗಳು ನಿಜವಾಗಲೂ ನಡೆದಿಲ್ಲ ಎಂಬುದನ್ನು ತಿಳಿಸುವ ಹಾಗೆ ಗಮನವಹಿಸಬೇಕು ಮತ್ತು ಇಂತಹ ಸನ್ನಿವೇಶಗಳನ್ನು ಏಕೆ ಕಲ್ಪಿಸಿಕೊಳ್ಳಲಾಯಿತು ಎಂಬುದನ್ನು ಅರ್ಥಮಾಡಿಕೊಳ್ಳುವಂತಿರಬೇಕು.

ವಿವರಣೆಗಳು

ಕಲ್ಪಿತ ಸನ್ನಿವೇಶಗಳು ನಿಜವಲ್ಲದ ಸನ್ನಿವೇಶಗಳಾಗಿವೆ. ಇವುಗಳು ಭೂತಕಾಲ, ವರ್ತಮಾನ ಕಾಲ ಮತ್ತು ಭವಿಷ್ಯತ್ ಕಾಲದಲ್ಲಿರಬಹುದು. ಕಲ್ಪಿತ ಸನ್ನಿವೇಶಗಳು ಭೂತಕಾಲ ಅಥವಾ ವರ್ತಮಾನಕಾಲದಲ್ಲಿ ನಡೆಯಲಿಲ್ಲ, ಮತ್ತು ಭವಿಷ್ಯತ್ ಕಾಲದಲ್ಲೂ ನಡೆಯುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ.

ಕೆಲವೊಮ್ಮೆ ಜನರು ಯಾವುದಾದರೂ ಒಂದು ಸನ್ನಿವೇಶವನ್ನು ಕುರಿತು ಹೇಳುವಾಗ ಇಂತಹ ಪರಿಸ್ಥಿತಿ ಎದುರಾದಾಗ ಏನಾಗುತ್ತಿತ್ತು? ಎಂದು ಹೇಳುತ್ತಾರೆ, ಆದರೆ ಬಹುಶಃ ಇದು ನಡೆದಿಲ್ಲ ಅಥವಾ ನಡೆಯುವುದಿಲ್ಲ ಎಂಬುದು ಅವರಿಗೆ ತಿಳಿದಿದೆ. (ನುಡಿಗಟ್ಟುಗಳು "ಒಂದು ವೇಳೆ" ಅಥವಾ "ರೆ" ಇದ್ದರೆ ಎಂಬ ಪದಗಳಿಂದ ಪ್ರಾರಂಭವಾಗಬಹುದು ಅಥವಾ ಕೂಡಿರಬಹುದು)

  • ಅವನು ನೂರು ವರ್ಷ ವಯಸ್ಸಿನವನಾಗಿ ಜೀವಿಸುವವನಾಗಿದ್ದರೆ, ಅವನು ತನ್ನ ಮೊಮ್ಮಗನ ಮೊಮ್ಮಗನನ್ನು ನೋಡುತ್ತಿದ್ದನು. (ಆದರೆ ಅವನು ನೋಡಲಿಲ್ಲ.)
  • ಅವನು ನೂರು ವರ್ಷ ವಯಸ್ಸಿನವನಾಗಿದ್ದರೆ, ಅವನು ಇಂದಿಗೂ ಜೀವಂತವಾಗಿರುತ್ತಿದ್ದನು. (ಆದರೆ ಅವನು ಜೀವಂತವಾಗಿಲ್ಲ.)
  • ಅವನು ನೂರು ವರ್ಷ ವಯಸ್ಸಿನವನಾಗಿ ಜೀವಿಸುವವನಾಗಿದ್ದರೆ, ಅವನು ತನ್ನ ಮೊಮ್ಮಗನ ಮೊಮ್ಮಗನನ್ನು ನೋಡುತ್ತಿದ್ದನು. (ಆದರೆ ಬಹುಶಃ ಅವನು ನೋಡುವುದಿಲ್ಲ.)

ಕೆಲವೊಮ್ಮೆ ಜನರು ನಡೆಯದೆ ಇರುವ ಘಟನೆಯ ಅಥವಾ ಮುಂದೆ ನಡೆಯಬಹುದು ಎಂದು ನಿರೀಕ್ಷಿಸಲಾಗದ ಘಟನೆಯ ಬಗ್ಗೆ ತಮ್ಮ ಬಯಕೆಯನ್ನು ವ್ಯಕ್ತಪಡಿಸುತ್ತಾರೆ.

  • ಅವನು ಬಂದಿದ್ದರೆ ಚೆನ್ನಾಗಿರುತ್ತಿತ್ತು ಎಂದು ನಾನು ಬಯಸುತ್ತೇನೆ.
  • ಅವನು ಇಲ್ಲಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ನಾನು ಬಯಸುತ್ತೇನೆ.
  • ಅವನು ಬರಲಿ ಎಂದು ನಾನು ಬಯಸುತ್ತೇನೆ.

ಕೆಲವೊಮ್ಮೆ ಜನರು ನಡೆಯದೆ ಇರುವ ಘಟನೆಯ ಅಥವಾ ಮುಂದೆ ನಡೆಯಬಹುದು ಎಂದು ನಿರೀಕ್ಷಿಸಲಾಗದ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾರೆ.

  • ಅವನು ಇಲ್ಲಿ ಬಂದಿದ್ದರೆ.
  • ಅವನು ಇಲ್ಲಿ ಇದ್ದಿದ್ದರೆ.
  • ಅವನು ಇಲ್ಲಿಗೆ ಬರಬಹುದಾಗಿದ್ದರೆ.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

  • ಭಾಷಾಂತರಗಾರರು ಸತ್ಯವೇದದಲ್ಲಿ ಬರುವ ವಿಭಿನ್ನ ರೀತಿಯ ಕಲ್ಪಿತ ಸನ್ನಿವೇಶಗಳನ್ನು ಗುರುತಿಸುವುದನ್ನು ಕಲಿತುಕೊಳ್ಳಬೇಕು ಮತ್ತು ಅವುಗಳು ನಿಜವಲ್ಲ ಎಂದು ಅರಿತುಕೊಳ್ಳಬೇಕು.
  • ಭಾಷಾಂತರಗಾರರು ವಿವಿಧ ರೀತಿಯ ಕಲ್ಪಿತ ಸನ್ನಿವೇಶಗಳ ಬಗ್ಗೆ ತಮ್ಮ ಭಾಷೆಯಲ್ಲಿ ಹೇಳುವುದಕ್ಕಿರುವ ವಿಧಾನಗಳನ್ನು ತಿಳಿದುಕೊಳ್ಳಬೇಕು.

ಸತ್ಯವೇದದಲ್ಲಿನ ಉದಾಹರಣೆಗಳು

ಭೂತಕಾಲದ ಕಲ್ಪಿತ ಸನ್ನಿವೇಶಗಳು

"ಅಯ್ಯೋ ಖೋರಾಜಿನೇ! ಅಯ್ಯೋ ಬೆತ್ಸಾಯಿದವೇ! ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ ಅಲ್ಲಿಯವರು ಆಗಲೇ ಗೋಣಿತಟ್ಟು ಹೊದ್ದುಕೊಂಡು ಬೂದಿಯಲ್ಲಿ ಕೂತುಕೊಂಡು ಪಶ್ಚಾತ್ತಾಪ ಪಡುತ್ತಿದ್ದರು." (ಮತ್ತಾಯ 11:21 ULT)

ಇಲ್ಲಿ ಮತ್ತಾಯ 11:21 ರಲ್ಲಿ ಯೇಸು ಹೇಳಿದ್ದೇನೆಂದರೆ ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ಯೇಸು ಮಾಡಿದ ಮಹತ್ಕಾರ್ಯಗಳನ್ನು ಏನಾದರೂ ನೋಡಿದ್ದರೆ ಅವರು ಆಗಲೇ ಪಶ್ಚಾತ್ತಾಪದಿಂದ ದೇವರ ಕಡೆಗೆ ತಿರುಗಿಕೊಳ್ಳುತ್ತಿದ್ದರು. ಆದರೆ ಇಲ್ಲಿ ತೂರ್ ಮತ್ತು ಸೀದೋನ್ ಪಟ್ಟಣದ ಜನರು ಆತನ ಮಹತ್ಕಾರ್ಯಗಳನ್ನು ನೋಡಿರಲಿಲ್ಲ ಮತ್ತು ಪಶ್ಚಾತ್ತಾಪಪಡಲಿಲ್ಲ. ಇಲ್ಲಿ ಯೇಸು ತನ್ನ ಮಹತ್ಕಾರ್ಯಗಳನ್ನು ನೋಡಿದರೂ ಪಶ್ಚಾತ್ತಾಪ ಪಡದೆ ಇದ್ದ ಖೋರಾಜಿನ್ ಮತ್ತು ಬೆತ್ಸಾಯಿದ ಪಟ್ಟಣಗಳ ಜನರು ಬಗ್ಗೆ ಹೇಳುತ್ತಾ ಅವರನ್ನು ಗದರಿಸುತ್ತಿದ್ದಾನೆ.

ಆಗ ಮಾರ್ಥಳು ಯೇಸುವಿಗೆ, "ಕರ್ತನೇ ನೀನು ಇಲ್ಲಿ ಇದ್ದಿದ್ದರೆ ನನ್ನ ತಮ್ಮನು ಸಾಯುತ್ತಿರಲಿಲ್ಲ" ಎಂದು ಹೇಳಿದಳು. (ಯೊಹಾನ 11:21 ULT)

ಮಾರ್ಥಳು ಯೇಸು ಬೇಗ ಬಂದಿದ್ದರೆ ನನ್ನ ತಮ್ಮನ ಸಾವು ಆಗುತ್ತಿರಲಿಲ್ಲ ಎಂಬ ಬಯಕೆಯನ್ನು ವ್ಯಕ್ತ ಪಡಿಸಲು ಇದನ್ನು ಹೇಳಿದಳು. ಯೇಸು ಬೇಗ ಬರಲಿಲ್ಲ ಮತ್ತು ಅವಳ ತಮ್ಮನು ಸತ್ತುಹೋದನು.

ವರ್ತಮಾನಕಾಲದ ಕಲ್ಪಿತ ಸನ್ನಿವೇಶಗಳು

ಹಳೇ ಬುದ್ದಲಿಗಳಲ್ಲಿ ಯಾರೂ ಹೊಸ ದ್ರಾಕ್ಷಾರಸವನ್ನು ಹಾಕಿಡುವುದಿಲ್ಲ. ಹಾಗೆ ಹಾಕಿದರೆ ಆ ಹೊಸ ದ್ರಾಕ್ಷಾರಸವು ಬುದ್ದಲಿಗಳನ್ನು ಒಡೆದು ಚೆಲ್ಲಿಹೋಗುವುದಲ್ಲದೆ ಬುದ್ದಲಿಗಳೂ ಕೆಟ್ಟುಹೋಗುತ್ತವೆ. (ಲೂಕ 5:37 ULT)

ಯೇಸು ಇಲ್ಲಿ ಹಳೇ ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸ ಹಾಕಿಟ್ಟರೆ ಏನಾಗುತ್ತದೆ ಎಂದು ಹೇಳಿದ್ದಾನೆ. ಆದರೆ ಈ ರೀತಿ ಯಾರೂ ಮಾಡುವುದಿಲ್ಲ. ಆತನು ಈ ಕಲ್ಪಿತ ಸನ್ನಿವೇಶವನ್ನು ಹೊಸ ವಸ್ತುಗಳನ್ನು ಹಳೇ ವಸ್ತುವಿನೊಂದಿಗೆ ಸೇರಿಸುವುದು ಸೂಕ್ತವಲ್ಲ ಎಂದು ಹೇಳಲು ಉದಾಹರಣೆಯಾಗಿ ಬಳಸಿದನು. ಸಂಪ್ರದಾಯ ಬದ್ಧವಾಗಿ ಆತನ ಶಿಷ್ಯರು ಏಕೆ ಉಪವಾಸಮಾಡುತ್ತಿಲ್ಲ ಎಂಬುದನ್ನು ಅರ್ಥಮಾಡಿಸಲು ಆತನು ಇದನ್ನು ಮಾಡಿದನು.

ಯೇಸು ಅವರಿಗೆ, ನಿಮ್ಮಲ್ಲಿ ಯಾರಿಗಾದರೂ ಒಂದೇ ಒಂದು ಕುರಿ ಇದ್ದು ಅದು ಸಬ್ಬತ್ ದಿನದಲ್ಲಿ ಗುಂಡಿಯೊಳಗೆ ಬಿದ್ದರೆ ಅವನು ಅದನ್ನು ಹಿಡಿದು ಮೇಲಕ್ಕೆ ಎತ್ತದೇ ಇರುವನೇ? ಎಂದು ಹೇಳಿದನು. (ಮತ್ತಾಯ 12:11 ULT)

ಯೇಸು ಆ ಧಾರ್ಮಿಕ ನಾಯಕನನ್ನು ಕುರಿತು ಅವರ ಬಳಿ ಇರುವ ಒಂದೇ ಕುರಿ ಕುಣಿಯಲ್ಲಿ ಬಿದ್ದರೆ ಅದನ್ನು ಸಬ್ಬತ್ ದಿನವೆಂದು ಎತ್ತದೆ ಬಿಡುವರೇ ಎಂದು ಕೇಳಿದನು. ಆತನು ಇಲ್ಲಿ ಅವರ ಕುರಿ ಕುಣಿಯಲ್ಲಿ ಬೀಳುವುದು ಎಂದು ಹೇಳುತ್ತಿಲ್ಲ. ಸಬ್ಬತ್ ದಿನದಂದು ಒಬ್ಬ ರೋಗಿಯನ್ನು ಸ್ವಸ್ಥಮಾಡಿದ್ದಕ್ಕೆ ಅವರು ಅತನನ್ನು ಅಪಾದಿಸಿದ್ದು ತಪ್ಪು ಎಂದು ಅವರಿಗೆ ತೋರಿಸಲು ಈ ಕಲ್ಪಿತ ಸನ್ನಿವೇಶವನ್ನು ಆತನು ಬಳಸಿದನು.

ಭವಿಷ್ಯದಲ್ಲಿನ ಕಲ್ಪಿತ ಸನ್ನಿವೇಶಗಳು

ಆ ದಿನಗಳನ್ನು ಕಡಿಮೆ ಮಾಡದಿದ್ದರೆ ಒಂದು ನರಪ್ರಾಣಿಯು ಉಳಿಯುವುದಿಲ್ಲ; ಆದರೆ ತಾನು ಆಯ್ಕೆಮಾಡಿಕೊಂಡವರಿಗಾಗಿ ಆ ದಿನಗಳನ್ನು ಕಡಿಮೆ ಮಾಡುವೆನು. (ಮತ್ತಾಯ 24:22 ULT)

ಭವಿಷ್ಯತ್‌ ಕಾಲದಲ್ಲಿ ತುಂಬಾ ಕೆಟ್ಟ ಕಾರ್ಯಗಳು ನಡೆಯುತ್ತವೆ ಎಂದು ಯೇಸು ಹೇಳುತ್ತಿದ್ದನು. ಯೇಸು ಅಂತಹ ಕಷ್ಟದ ದಿನಗಳು ದೀರ್ಘಕಾಲದವರೆಗೆ ಇರುವುದಾದರೆ ಏನಾಗುತ್ತಿತ್ತು ಎಂದು ಆತನು ಹೇಳಿದನು. ಆ ದಿನಗಳು ಎಷ್ಟು ಕೆಟ್ಟದ್ದಾಗಿರುವವು, ಅವು ದೀರ್ಘಕಾಲದವರೆಗೆ ಮುಂದುವರೆದರೆ ಯಾರೂ ರಕ್ಷಿಸಲ್ಪಡುವುದಿಲ್ಲ ಎಂದು ಹೇಳಲು ಆತನು ಇದನ್ನು ಮಾಡಿದನು. ಆದರೆ ಆಯ್ದುಕೊಂಡವರು (ಆತನು ಆರಿಸಿಕೊಂಡವರು) ರಕ್ಷಿಸಲ್ಪಡುವುದಕ್ಕಾಗಿ ದೇವರು ಆ ಕಷ್ಟದ ದಿನಗಳನ್ನು ಕಡಿಮೆ ಮಾಡುತ್ತಾನೆ ಎಂದು ಆತನು ಸ್ಪಷ್ಟಪಡಿಸಿದನು.

ಕಲ್ಪಿತ ಸನ್ನಿವೇಶದ ಬಗ್ಗೆ ಭಾವನೆಯನ್ನು ವ್ಯಕ್ತಪಡಿಸುವುದು

ಜನರು ಕೆಲವೊಮ್ಮೆ ವಿಷಾದ ಮತ್ತು ಹಾರೈಕೆಗಳನ್ನು ವ್ಯಕ್ತಪಡಿಸುವ ಸಲುವಾಗಿ ಕಲ್ಪಿತ ಸನ್ನಿವೇಶಗಳ ಬಗ್ಗೆ ಮಾತನಾಡುತ್ತಾರೆ. ಭೂತಕಾಲದ ಕುರಿತಾದ ವಿಷಾದಗಳನ್ನು ಮತ್ತು ವರ್ತಮಾನ ಹಾಗೂ ಭವಿಷ್ಯದ ಕುರಿತಾದ ಹಾರೈಕೆಗಳನ್ನು ವ್ಯಕ್ತಪಡಿಸುತ್ತಾರೆ.

"ನಾವು ಐಗುಪ್ತ ದೇಶದಲ್ಲಿದ್ದಾಗ ಯೆಹೋವನ ಕೈಯಿಂದ ಸತ್ತಿದ್ದರೆ ಎಷ್ಟೋ ಮೇಲಾಗಿತ್ತು. ಆಗ ಮಾಂಸಪಾತ್ರೆಗಳ ಬಳಿಯಲ್ಲಿ ಕೂತು ಹೊಟ್ಟೆತುಂಬಾ ಊಟಮಾಡುತ್ತಿದ್ದೆವಲ್ಲಾ. ಈ ಸಮೂಹವನ್ನೆಲ್ಲಾ ಹಸಿವೆಯಿಂದ ಸಾಯಿಸಬೇಕೆಂದು ನೀವು ಈ ಅರಣ್ಯದೊಳಗೆ ನಮ್ಮನ್ನು ಕರಕೊಂಡು ಬಂದಿರಷ್ಟೆ" ಎಂದು ಇಸ್ರಾಯೇಲ್ಯರು ಅವರಿಗೆ ಹೇಳಿದರು. (ವಿಮೋಚನಾ ಕಾಂಡ 16:3 ULT)

ಇಲ್ಲಿ ಇಸ್ರಾಯೇಲರು ತಾವು ಹಸಿವೆಯಿಂದ ಈ ಅರಣ್ಯದಲ್ಲಿ ಸತ್ತು ಹೋಗಬಹುದು ಭಯಪಟ್ಟರು ಮತ್ತು ಐಗುಪ್ತ ದೇಶದಲ್ಲೇ ಇದ್ದಿದ್ದರೆ ಹೊಟ್ಟೆತುಂಬಾ ತಿಂದಾದರೂ ಸಾಯಬಹುದಿತ್ತು ಎಂದು ಹಾರೈಸಿದರು. ಅವರು ದೂರು ಹೇಳುತ್ತಾ, ಇದು ನಡೆಯಲಿಲ್ಲವಲ್ಲಾ ಎಂಬ ವಿಷಾದವನ್ನು ವ್ಯಕ್ತಪಡಿಸುತ್ತಿರುವರು.

ನೀನು ಮಾಡಿರುವಂಥದ್ದನ್ನು ನಾನು ಬಲ್ಲೆನು, ನೀನು ತಣ್ಣಗೂ ಅಲ್ಲ, ಬೆಚ್ಚಗೂ ಅಲ್ಲ, ನೀನು ತಣ್ಣಗಾಗಲೀ ಬೆಚ್ಚಗಾಗಲೀ ಇದ್ದಿದ್ದರೆ ಒಳ್ಳೆಯದಿತ್ತು ಎಂದು ನಾನು ಬಯಸುತ್ತೇನೆ! (ಪ್ರಕಟಣೆ3:15 ULT)

ಜನರು ತಣ್ಣಗಾಗಲೀ, ಬೆಚ್ಚಗಾಗಲೀ ಇರಲಿ ಎಂದು ಯೇಸು ಬಯಸಿದನು, ಆದರೆ ಅವರು ಎರಡೂ ಆಗಿರಲಿಲ್ಲ. ಆತನು ಅವರನ್ನು ಗದರಿಸುತ್ತಾ, ಇದರ ಬಗ್ಗೆ ಕೋಪವನ್ನು ವ್ಯಕ್ತಪಡಿಸುತ್ತಿರುವನು.

ಭಾಷಾಂತರದ ಕಾರ್ಯತಂತ್ರಗಳು

ನಿಮ್ಮ ಭಾಷೆಯನ್ನು ಮಾತನಾಡುವ ಜನರು ಈ ಕೆಳಗಿನವುಗಳನ್ನು ಹೇಗೆ ವ್ಯಕ್ತಪಡಿಸುವರು ಎಂಬುದನ್ನು ಕಂಡುಕೊಳ್ಳಿರಿ:

  • ಏನಾದರೂ ಒಂದು ನಡೆಯಬೇಕಿತ್ತು, ಆದರೆ ನಡೆಯಲಿಲ್ಲ.
  • ಕೆಲವೊಂದು ಈಗ ಸತ್ಯವಾದುದು ಎಂದು ತಿಳಿದುಬಂದರೂ ಅದು ನಿಜವಾದುದಲ್ಲ.
  • ಭವಿಷ್ಯದಲ್ಲಿ ಏನಾದರೂ ನಡೆಯಬಹುದು ಎಂದರೂ ಏನಾದರೂ ಬದಲಾವಣೆ ಆಗುವವರೆಗೂ ಆಗುವುದಿಲ್ಲ.
  • ಅವರು ಏನನ್ನೋ ಬಯಸಿದರೂ ಆದರೆ ಅದು ನಡೆಯಲಿಲ್ಲ.
  • ಏನೂ ನಡೆಯಲಿಲ್ಲವೆಂದು ಅವರು ವಿಷಾದಿಸುತ್ತಾರೆ.

ಇಂತಹ ಕಾರ್ಯಗಳನ್ನು ತೋರಿಸುವ ನಿಮ್ಮ ಭಾಷೆಯ ವಿಧಾನಗಳನ್ನು ಬಳಸಿಕೊಳ್ಳಿರಿ.

ನೀವು ಈ ವಿಡಿಯೋವನ್ನು ಸಹ ವೀಕ್ಷಿಸಿ ಬಯಸಬಹುದು http://ufw.io/figs_hypo.