kn_ta/translate/figs-go/01.md

11 KiB

ವಿವರಣೆಗಳು.

ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ "ಬಾ/ ಬನ್ನಿ" ಅಥವಾ "ಹೋಗು" ಎಂಬ ಪದಗಳನ್ನು ಮತ್ತು "ತೆಗೆದುಕೋ " ಅಥವಾ " ತೆಗೆದು ಕೊಂಡು ಬಾ " ಎಂಬ ಪದಗಳನ್ನು ಚಲನೆಯ ಬಗ್ಗೆ ಮಾತನಾಡುವಾಗ ಬಳಸುತ್ತಾರೆ. ಉದಾಹರಣೆಗೆ ಒಬ್ಬ ವ್ಯಕ್ತಿಯನ್ನು ಉದ್ದೇಶಿಸಿ ಮಾತನಾಡುವಾಗ ಹೀಗೆ ಬಳಸುತ್ತಾರೆ. ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುವವರು "ನಾನು ಬರುತ್ತಿದ್ದೇನೆ " (I'm coming) ಸ್ಪಾನಿಷ್ ಭಾಷೆಯಲ್ಲಿ "ನಾನು ಹೋಗುತ್ತಿದ್ದೇನೆ " (I'm going.) ಎಂದು ಹೇಳಬಹುದು.

ನೀವು ನಿಮ್ಮ ಭಾಷೆಯಲ್ಲಿ ಭಾಷಾಂತರ ಮಾಡುವಾಗ "ಹೋಗು" ಮತ್ತು "ಬಾ" ಮತ್ತು (ತೆಗೆದುಕೋ ಮತ್ತು ತೆಗೆದುಕೊಂಡು ಬಾ) ಎಂಬ ಪದಗಳ ಕ್ರಿಯೆಗಳು ಯಾವ ದಿಕ್ಕಿನಲ್ಲಿ ಚಲಿಸುತ್ತಿದೆ ಎಂಬುದನ್ನು ನಿಮ್ಮ ಓದುಗರು ಅರ್ಥಮಾಡಿಕೊಳ್ಳುವಂತೆ ಮಾಡಿ.

ಕಾರಣ ಇದೊಂದು ಭಾಷಾಂತರ ವಿಷಯ.

ಚಲನೆಯ ಬಗ್ಗೆ ವಿವಿಧ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ಇದೆ. ಸತ್ಯವೇದದಲ್ಲಿ ಅಥವಾ ನಿಮ್ಮ ಮೂಲ ಭಾಷೆಯಲ್ಲಿ("go") ಹೋಗು ಮತ್ತು "ಬಾ" ("come") ".ತೆಗೆದುಕೋ" ("take") ಮತ್ತು " ತೆಗೆದು ಕೊಂಡು ಬಾ " ("bring") ಎಂಬ ಪದಗಳು ನಿಮ್ಮ ಭಾಷೆಯಲ್ಲಿ ಬಳಸುವುದಕ್ಕಿಂತ ಭಿನ್ನವಾಗಿ ಇರಬಹುದು.

ಈ ಪದಗಳು ಸರಿಯಾದ ರೀತಿಯಲ್ಲಿ ಸಹಜ ಅರ್ಥದಲ್ಲಿ ನಿಮ್ಮ ಭಾಷೆಯಲ್ಲಿ ಭಾಷಾಂತರವಾಗದಿದ್ದರೆ ನಿಮ್ಮ ಓದುಗರಿಗೆ ಚಲನೆಯ ಬಗ್ಗೆ, ಯಾವ ದಿಕ್ಕಿನಲ್ಲಿ ಜನರು ಚಲಿಸುತ್ತಿದ್ದಾರೆ ಎಂದು ತಿಳಿದು ಕೊಳ್ಳುವಲ್ಲಿ ಗೊಂದಲಕ್ಕೆ ಒಳಗಾಗುತ್ತಾರೆ.

ಸತ್ಯವೇದದ ಉದಾಹರಣೆಗಳು.

ಯೆಹೋವನು ನೋಹನಿಗೆ " ನೀನು ನಿನ್ನ ಮನೆಯವರು ಈ ನಾವೆಯಲ್ಲಿ ಬಂದು ಸೇರಿರಿ ", (ಆದಿಕಾಂಡ 7:1 ULB)

ಈ ವಾಕ್ಯವನ್ನು ಓದಿದಾಗ ಕೆಲವು ಭಾಷೆಯ ಜನರು ಯೆಹೋವನು ಈ ನಾವೆಯೊಳಗೆ ಇದ್ದು ನೋಹನನ್ನು ಕರೆದನು ಎಂದು ತಿಳಿದುಕೊಳ್ಳಬಹುದು.

ಆಮೇಲೆ ನಾನು ಮಾಡಿಸಿದ ಪ್ರಮಾಣದಿಂದ ನೀನು ಬಿಡುಗಡೆಯಾಗುವಿ ನೀನು ನನ್ನ ಜನರ ಬಳಿಗೆ ಹೋದಾಗ ನಿನಗೆ ಅವರು ಹೆಣ್ಣನ್ನು ಕೊಡದಿದ್ದಾಗ. ನಾನು ಮಾಡಿಸಿದ ಪ್ರಮಾಣದಿಂದ ಬಿಡುಗಡೆಯಾಗುವಿ. (ಆದಿಕಾಂಡ 24:41 ULB)

ಇಲ್ಲಿ ಅಬ್ರಹಾಮನು ತನ್ನ ಸೇವಕನೊಂದಿಗೆ ಮಾತನಾಡುತ್ತಿದ್ದಾನೆ. ಅಬ್ರಹಾಮ ಮತ್ತು ಅವನ ಸೇವಕ ಮಾತನಾಡುತ್ತಿರುವ ಸ್ಥಳದಿಂದ ಅವನಿಗೆ ಸಂಬಂಧಿಸಿದ ಜನರು ಇರುವ ಸ್ಥಳವು ತುಂಬಾ ದೂರ ಇದ್ದಿತು.ಆದುದರಿಂದ ಅವನ ಸೇವಕನನ್ನು ಅವರ ಬಳಿಗೆ ಹೋಗು .ಎಂದು ಹೇಳುತ್ತಿದ್ದಾನೆಯೇ ಹೊರತು ಅವನ ಕಡೆಗೆ " ಬಾ " ಎಂದು ಹೇಳಲಿಲ್ಲ. ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ನೀವು ಬಂದು ಸೇರಿಸ್ವಾಧೀನ ಮಾಡಿಕೊಂಡು ವಾಸವಾಗಿರುವಾಗ. (ಧರ್ಮೋಪದೇಶ ಕಾಂಡ 17:14 ULB)

ಮೋಶೆಯು ತನ್ನ ಜನರು ಮರುಭೂಮಿಯಲ್ಲಿ ಇರುವಾಗ ಅವರಿಗೆ ಈ ರೀತಿ ಹೇಳಿದನು. ಅವರು ಇನ್ನೂ ದೇವರು ಅವರಿಗೆ ವಾಗ್ದಾನ ಮಾಡಿದ ದೇಶವನ್ನು ಸೇರಿರಲಿಲ್ಲ,. ಕೆಲವು ಭಾಷೆಯಲ್ಲಿ ಇದು ನೀವು ಆ ದೇಶಕ್ಕೆ "ಹೋದಾಗಎಂದು ಅರ್ಥಕೊಡಬಹುದು... "

ಯೋಸೇಫ ಮತ್ತು ಮರಿಯಳು ಆ ಮಗುವನ್ನು ಯೆರೂಸಲೇಮಿನ ದೇವಾಲಯಕ್ಕೆ ದೇವರಿಗೆ ಸಮರ್ಪಿಸಲು ತೆಗೆದುಕೊಂಡು ಹೋದರು . (ಲೂಕ 2:22 ULB)

ಇನ್ನೂ ಬೇರೆ ಭಾಷೆಗಳಲ್ಲಿ ಇನ್ನೂ ಸ್ಪಷ್ಟವಾಗಿ ಹೇಳಲು ಯೋಸೇಫ ಮತ್ತು ಮರಿಯಳು ಯೇಸು ಮಗುವನ್ನು ತೆಗೆದುಕೊಂಡುಅಥವಾ ಎತ್ತಿಕೊಂಡುದೇವಾಲಯಕ್ಕೆ ಹೋದರು ಎಂದು ಹೇಳಬಹುದು.

ಆಗ ಸಭಾ ಮಂದಿರದ ಅಧಿಕಾರಿಯಾದ ಯಾಯಿರನೆಂಬುವವನು ಬಂದು ಯೇಸುವಿನ ಪಾದಗಳಿಗೆ ಬಿದ್ದನು. ಯಾಯಿರನು ಯೇಸುವಿನ ಪಾದಗಳಿಗೆ ಬಿದ್ದು ತನ್ನ ಮನೆಗೆ ಬರಬೇಕೆಂದುಬೇಡಿಕೊಂಡನು. (ಲೂಕ8:41 ULB)

ಆ ಯಾಯಿರನು ಯೇಸುವಿನೊಂದಿಗೆ ಮಾತನಾಡುವಾಗ ತನ್ನ ಮನೆಯಲ್ಲಿ ಇರಲಿಲ್ಲ. ಯೇಸು ತನ್ನೊಂದಿಗೆ ಆತನ ಮನೆಗೆ ಬರಬೇಕೆಂದುಬಯಸಿದನು.

ಕೆಲವು ಸಮಯವಾದ ಮೇಲೆ,ಅವನ ಹೆಂಡತಿ ಎಲಿಜಬೇತಳು ಗರ್ಬಿಣಿಯಾದಳು, ಅವಳು ಐದು ತಿಂಗಳವರೆಗೆ ಮನೆ ಬಿಟ್ಟು ಹೊರಗೆ ಎಲ್ಲೂ ಹೋಗಲಿಲ್ಲಮನೆಯಲ್ಲೇ ಇದ್ದಳು. (ಲೂಕ 1:24 UDB)

ಕೆಲವು ಭಾಷೆಯಲ್ಲಿ ಎಲಿಜಬೇತಳು ಐದು ತಿಂಗಳವರೆಗೆ ಹೊರಗೆ ಎಲ್ಲೂ ಬರಲಿಲ್ಲ ಎಂದು ಇರಬಹುದು

ಭಾಷಾಂತರದ ತಂತ್ರಗಳು

ULB ಭಾಷಾಂತರದಲ್ಲಿ ಸೂಕ್ತವಾದ ಮತ್ತು ಸರಿಯಾದ ಪದ ಬಳಸಿದ್ದರೆ ಅದನ್ನೇ ಬಳಸಿಕೊಳ್ಳಿ. ಇಲ್ಲದಿದ್ದರೆ ಇಲ್ಲಿರುವ ಕೆಲವು ಅಂಶಗಳನ್ನು ಪರಿಗಣಿಸಬಹುದು.

  1. "ಬಾ / ಬರುವುದು," "ಹೋಗು / ಹೋಗುವುದು," "ತೆಗೆದು ಕೊಳ್ಳುವುದು / ತೆಗೆದುಕೊಂಡು ಬಾ," ಇಂತಹ ಪದಗಳು ನಿಮ್ಮ ಭಾಷೆಯಲ್ಲಿ ಸಾಮಾನ್ಯವಾಗಿ ಕಂಡುಬರಬಹುದು
  2. ಸರಿಯಾದ ಅರ್ಥ ಕೊಡುವಂತಹ ಪದ ಬಳಸಿ

ಭಾಷಾಂತರ ತಂತ್ರಗಳನ್ನು ಅಳವಡಿಸಿರುವ ಉದಾಹರಣೆಗಳು.

  1. "ಬಾ / ಬರುವುದು," "ಹೋಗು / ಹೋಗುವುದು," "ತೆಗೆದು ಕೊಳ್ಳುವುದು / ತೆಗೆದುಕೊಂಡು ಬಾ," ಇಂತಹ ಪದಗಳು ನಿಮ್ಮ ಭಾಷೆಯಲ್ಲಿ ಸಾಮಾನ್ಯವಾಗಿ ಕಂಡುಬರಬಹುದು.
  • ಆಮೇಲೆ ನಾನು ಮಾಡಿಸಿದ ಪ್ರಮಾಣದಿಂದ ನೀನು ಬಿಡುಗಡೆ ಆಗುವಿ, ನೀನು ನನ್ನ ಜನರ ಬಳಿಗೆ ಬಂದಾಗನಿನಗೆ ಅವರು ಹೆಣ್ಣನ್ನು ಕೊಡದಿದ್ದಾಗ. (ಆದಿಕಾಂಡ 24:41 ULB)
  • ಆಮೇಲೆ ನಾನು ಮಾಡಿಸಿದ ಪ್ರಮಾಣದಿಂದ ನೀನು ಬಿಡುಗಡೆಯಾಗುವಿ ನೀನು ನನ್ನ ಜನರ ಬಳಿಗೆ ಹೋದಾಗ ನಿನಗೆ ಅವರು ಹೆಣ್ಣನ್ನು ಕೊಡದಿದ್ದಾಗ.

  • >ಕೆಲವು ಸಮಯವಾದ ಮೇಲೆ,ಅವನ ಹೆಂಡತಿ ಎಲಿಜಬೇತಳು ಗರ್ಬಿಣಿಯಾದಳು, ಅವಳು ಐದು ತಿಂಗಳವರೆಗೆ ಮನೆ ಬಿಟ್ಟು ಹೊರಗೆ ಎಲ್ಲೂ ಹೋಗಲಿಲ್ಲಮನೆಯಲ್ಲೇ ಇದ್ದಳು. (ಲೂಕ 1:24 UDB)
  • ಕೆಲವು ಸಮಯವಾದ ಮೇಲೆ, ಎಲಿಜಬೇತಳು ಗರ್ಭಿಣಿಯಾದಳು ಆದರೆ ಅವಳು ಐದು ತಿಂಗಳವರೆಗೆ ಎಲ್ಲೂ ಬರಲಿಲ್ಲ.
  1. ಸರಿಯಾದ ಅರ್ಥ ಕೊಡುವಂತಹ ಪದ ಬಳಸಿ
  • ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ನೀವು ಬಂದುಸ್ವಾದೀನ ಮಾಡಿಕೊಂಡು ವಾಸವಿರುವಾಗ.. (ಧರ್ಮೋಪದೇಶ ಕಾಂಡ 17:14 ULB)
  • " ನಿಮ್ಮ ದೇವರಾದ ಯೆಹೋವನು ನಿಮಗೆ ಕೊಟ್ಟ ದೇಶದಲ್ಲಿ ಬಂದುಸೇರಿ ಸ್ವಾಧೀನಪಡಿಸಿಕೊಂಡು ವಾಸಿಸಲು ತೊಡಗಿದಾಗ.. "
  • ಯೆಹೋವನು ನೋಹನಿಗೆ " ನೀನು ನಿನ್ನ ಮನೆಯವರು ಈ ನಾವೆಯಲ್ಲಿ ಬಂದು ಸೇರಿರಿ ," (ಆದಿಕಾಂಡ 7:1 ULB)
  • " ಯೆಹೋವನು ನೋಹನನ್ನು ಕುರಿತು " ನೀನು ನಿನ್ನ " ಮನೆಯವರೆಲ್ಲರೂ ಈ ನೌಕೆಯೊಳಗೆ ಪ್ರವೇಶಿಸಿ, ಎಂದು ಹೇಳಿದನು... "
  • ಕೆಲವು ಸಮಯದ ನಂತರ ಅವನ ಹೆಂಡತಿ ಎಲಿಜಬೇತಳು ಗರ್ಬಿಣಿಯಾದಳು ಆದರೆ ಅವಳು ಹೊರಗೆ ಎಲ್ಲೂ ಐದು ತಿಂಗಳವರೆಗೆ ಹೋಗಲಿಲ್ಲ . (ಲೂಕ 1:24 UDB)
  • ಕೆಲವು ಸಮಯದ ನಂತರ ಅವನ ಹೆಂಡತಿ ಗರ್ಭಿಣಿಯಾದಳು ಆದರೆ ಅವಳು ಐದು ತಿಂಗಳವರೆಗೆ ಹೊರಗೆ ಎಲ್ಲೂ ಕಾಣಿಸಿಕೊಳ್ಳಲಿಲ್ಲ