kn_ta/translate/figs-gendernotations/01.md

11 KiB

ಸತ್ಯವೇದದ ಕೆಲವು ಭಾಗಗಳಲ್ಲಿ, "ಪುರುಷರು", "ಸಹೋದರರು", "ಪುತ್ರರು "ಎಂಬ ಪದಗಳು ಪುರುಷರಿಗೆ ಸಂಬಂಧಿಸಿದ ಪದಗಳಾಗಿ ಬಳಕೆಯಾಗಿವೆ. ಇನ್ನೂ ಕೆಲವು ಭಾಗಗಳಲ್ಲಿ ಇಂತಹ ಪದಗಳು ಪುರುಷರು ಮತ್ತು ಮಹಿಳೆಯರನ್ನು ಉದ್ದೇಶಿಸಿ ಹೇಳುವರು. ಮೂಲ ಲೇಖಕರು ಪುರುಷರು ಮತ್ತು ಮಹಿಳೆಯರನ್ನು ಕುರಿತು ಒಂದೇ ಪದವನ್ನು ಬಳಸಿ ಇಬ್ಬರಿಗೂ ಸಮಾನಪದ ಬಳಸಿದಾಗ ಭಾಷಾಂತರಗಾರರು ಅದರಂತೆ ಬರೆಯಬೇಕೆ ಹೊರತು "ಪುರುಷ" ಎಂಬ ಪದ ಮಾತ್ರ ಬಳಸಬಾರದು.

ವಿವರಣೆಗಳು.

ಕೆಲವು ಭಾಷೆಯಲ್ಲಿ ಪುರುಷ ಮತ್ತು ಮಹಿಳೆಯರನ್ನು ಕುರಿತು ಹೇಳುವಾಗ ಸಾಮಾನ್ಯವಾಗಿ ಪುರುಷ ಎಂಬ ಒಂದೇ ಪದವನ್ನು ಬಳಸುತ್ತಾರೆ. ಉದಾಹರಣೆಗೆ ಸತ್ಯವೇದದಲ್ಲಿ ಕೆಲವೊಮ್ಮೆ 'ಸಹೋದರರು ' ಎಂದು ಸಹೋದರರು ಮತ್ತು ಸಹೋದರಿಯರಿಗೆ ಸೇರಿಸಿ ಹೇಳುವುದಿದೆ. ಇನ್ನೂ ಕೆಲವು ಭಾಷೆಯಲ್ಲಿ "ಪುರುಷ" ಸರ್ವನಾಮಗಳಾದ "ಅವನು" "ಅವನ" ಎಂಬ ಪದಗಳನ್ನು ಸಮಾನವಾಗಿ ಪುರುಷ ಮತ್ತು ಮಹಿಳೆಯರನ್ನು ಉದ್ದೇಶಿಸಿ ಹೇಳುವಾಗ ಬಳಸುತ್ತಾರೆ ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ "ಅವನ" ಎಂಬ ಪದ ಕೇವಲ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ.

ಜ್ಞಾನವಂತ ಮಗು ಅವನ ತಂದೆಗೆ ಸಂತೋಷ ತರುತ್ತಾನೆ. ಅಜ್ಞಾನಿಯಾದ ಮಗು ಅವನ ತಾಯಿಗೆ ದುಃಖತರುತ್ತಾನೆ. (ಜ್ಞಾನೋಕ್ತಿಗಳು 10:1 ULB)

ಇದಕ್ಕೆ ಕಾರಣ ಭಾಷಾಂತರ ತೊಡಕು

  • ಕೆಲವು ಸಂಸ್ಕೃತಿಯಲ್ಲಿ "ಪುರುಷ", "ಸಹೋದರ" ಮತ್ತು, "ಮಗ " ಇಂತಹ ಪದಗಳು ಪುರುಷರನ್ನು ಉದ್ದೇಶಿಸಿ ಬಳಸಲಾಗುತ್ತದೆ. ಕೆಲವೊಮ್ಮೆ ಇಂತಹ ಸಮಾನ ಸಾಮಾನ್ಯ ಪದಗಳನ್ನು ಬಳಸಿದಾಗ ಜನರು ಇದನ್ನು ಪುರುಷರಿಗೆ ಮಾತ್ರ ಅನ್ವಯಿಸಿಕೊಂಡು ಮಹಿಳೆಯರಿಗೆ ಅನ್ವಯಿಸುವುದಿಲ್ಲ ಎಂದು ತಿಳಿಯುವ ಸಾಧ್ಯತೆ ಇರುತ್ತದೆ.
  • ಕೆಲವು ಸಂಸ್ಕೃತಿಯಲ್ಲಿ "ಪುಲ್ಲಿಂಗ" ಪುರುಷ ಸರ್ವನಾಮಗಳಾದ "ಅವನು" "ಅವನ" ಎಂಬ ಪದಗಳು ಪುರುಷರಿಗೆ ಮಾತ್ರ ಅನ್ವಯಿಸುತ್ತದೆ. ಪುರುಷ ಸರ್ವನಾಮಗಳು ಪುರುಷರಿಗೆ ಮಾತ್ರ ಮೀಸಲು ಸಮಾನ ಸಾಮಾನ್ಯಪದವಾಗಿ ಸ್ತ್ರೀಯರಿಗೆ ಅನ್ವಯಿಸುವುದಿಲ್ಲ.

ಭಾಷಾಂತರ ತತ್ವಗಳು

ಯಾವುದೇ ಹೇಳಿಕೆ ಪುರುಷ ಮತ್ತು ಮಹಿಳೆಯರ ಬಗ್ಗೆ ಅನ್ವಯಿಸಿದ್ದರೆ ಅದನ್ನು ಇಬ್ಬರಿಗೂ ಅನ್ವಯಿಸುವಂತದ್ದು.

ಸತ್ಯವೇದದಲ್ಲಿನ ಕೆಲವು ಉದಾಹರಣೆಗಳು.

ಸಹೋದರರೇ, ಮೆಕದೋನ್ಯದ ಸಭೆಗಳಲ್ಲಿ ದೇವರ ಕೃಪೆಯು ತೋರಿದ ಬಗೆಯನ್ನು ನಿಮಗೆ ತಿಳಿಸಲು ನಾನು ಬಯಸುತ್ತೇನೆ. (2 ಕೋರಿಂಥ 8:1 ULB)

ಈ ವಾಕ್ಯವು ಕೋರಿಂಥಸಭೆಯ ವಿಶ್ವಾಸಿಗಳನ್ನು ಕುರಿತು ಹೇಳುವಂತದ್ದು, ಇವರಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಇದ್ದಾರೆ.

ಯೇಸು ತನ್ನ ಶಿಷ್ಯರಿಗೆ ಹೇಳಿದ್ದೇನೆಂದರೆ, " ಯಾರಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ, ಅವನುತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು, ಹೊತ್ತುಕೊಂಡುನನ್ನ ಹಿಂದೆ ಬರಲಿ ". (ಮತ್ತಾಯ 16:24-26 ULB)

ಯೇಸು ಈ ವಾಕ್ಯವನ್ನು ಹೇಳುವಾಗ ಪುರುಷನನ್ನುಮಾತ್ರ ಉದ್ದೇಶಿಸಿ ಹೇಳಲಿಲ್ಲ. ಇಲ್ಲಿ ಪುರುಷ ಮತ್ತು ಮಹಿಳೆ.ಇಬ್ಬರನ್ನು ಉದ್ದೇಶಿಸಿ ಹೇಳಿರುವ ಮಾತು.

** ಎಚ್ಚರಿಕೆ**: ಕೆಲವೊಮ್ಮೆ ಕೆಲವು ಪುರುಷರ ಕುರಿತಾದ ಪದಗಳು ಪುರುಷರನ್ನು ಮಾತ್ರ ಉದ್ದೇಶಿಸಿ ಹೇಳುವಂತದ್ದಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಜನರನ್ನು ಇಂತಹ ಪದಗಳು ಮಹಿಳೆಯರಿಗೂ ಅನ್ವಯಿಸುತ್ತದೆ ಎಂದು ತಿಳಿದುಕೊಳ್ಳುವಂತೆ ಮಾಡಬಾರದು. ಕೆಳಗಿನ ಪದಗಳು ವಿಶೇಷವಾಗಿ ಪುರುಷರನ್ನೇ ಉದ್ದೇಶಿಸಿ ಹೇಳುವ ಪದಗಳು.

ಒಬ್ಬ ಮನುಷ್ಯನು ಮಕ್ಕಳಿಲ್ಲದೆ ಸತ್ತರೆ, ಅವನ ತಮ್ಮನುಅಣ್ಣನ ಹೆಂಡತಿಯನ್ನುಮದುವೆ ಮಾಡಿಕೊಂಡುಅಣ್ಣನಿಗೆ ಸಂತಾನವನ್ನು .'ಪಡೆಯಬೇಕೆಂದುಮೋಶೆ ಹೇಳಿದ್ದಾನೆ. (ಮತ್ತಾಯ 22:24 ULB)

ಭಾಷಾಂತರ ಕೌಶಲ್ಯಗಳು

ಪುರುಷರನ್ನು ಗುರುತಿಸುವ ಪದಗಳಾದ "ಪುರುಷ", "ಸಹೋದರ", "ಅವನು " ಎಂಬ ಪದಗಳು ವಿಶೇಷ ಸಂದರ್ಭದಲ್ಲಿ ಮಹಿಳೆಯರಿಗೂ ಅನ್ವಯಿಸುತ್ತದೆ ಎಂದು ಜನರು ಅರ್ಥಮಾಡಿಕೊಂಡರೆ ಆಗ ಇಂತಹ ಪದಗಳನ್ನು ಬಳಸಬಹುದು. ಅದರ ಬದಲು ಇಲ್ಲಿ ಕೆಳಗೆ ಕೆಲವು ಪದಗಳು ಮಹಿಳೆಯನ್ನು ಉದ್ದೇಶಿಸಿ ಹೇಳುವಂತದ್ದನ್ನು ಭಾಷಾಂತರ ಮಾಡುವಾಗ ಬಳಸಬಹುದು.

  1. ಪುರುಷ ಮತ್ತು ಮಹಿಳೆ ಇಬ್ಬರನ್ನು ಒಳಗೊಂಡಂತೆ ಬಳಸಬಹುದಾದ ಒಂದೇ ನಾಮಪದವನ್ನು ಬಳಸಬಹುದು.
  2. ಪುರುಷನನ್ನು ಕುರಿತು ಹೇಳುವ ಪದ ಮತ್ತು ಮಹಿಳೆಯನ್ನು ಕುರಿತು ಹೇಳುವ ಪದಗಳಿದ್ದರೆ ಬಳಸಬಹುದು.
  3. ಪುರುಷ ಮತ್ತು ಮಹಿಳೆಯರ ಬಗ್ಗೆ ಉಪಯೋಗಿಸುವಾಗ ಸರ್ವನಾಮಗಳನ್ನು ಬಳಸಬಹುದು.

ಭಾಷಾಂತರ ತಂತ್ರಗಳನ್ನು ಅಳವಡಿಸಿರುವ ಉದಾಹರಣೆಗಳು.

  1. ಪುರುಷ ಮತ್ತು ಮಹಿಳೆ ಇಬ್ಬರನ್ನು ಒಳಗೊಂಡಂತೆ ಬಳಸಬಹುದಾದ ನಾಮಪದವನ್ನು ಬಳಸಬಹುದು.
  • ಮೂಢನಂತೆ ಜ್ಞಾನಿಯೂಸಾಯುವನು. (ಪ್ರಸಂಗಿ 2:16 ULB)
  • ಮೂಢವ್ಯಕ್ತಿ ಸಾಯುವಂತೆ ಜ್ಞಾನಿಯೂ ಸಾಯುವನು".
  • "ಜ್ಞಾನಿಗಳಾದ ಜನರು ಮೂಢಜನರಂತೆ ಸಾಯುವರು ".
  1. ಪುರುಷನನ್ನು ಕುರಿತು ಹೇಳುವ ಪದ ಮತ್ತು ಮಹಿಳೆಯನ್ನು ಕುರಿತು ಹೇಳುವ ಪದಗಳಿದ್ದರೆ ಬಳಸಬಹುದು
  • ಸಹೋದರರೇ, ಅಸ್ಯಸೀಮೆಯಲ್ಲಿ ನಮಗೆ , ಸಂಭವಿಸಿದ ಸಂಕಟವನ್ನು ನೀವು ತಿಳಿದುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. (2 ಕೊರಿಂಥ 1:8) –ಪೌಲನು ಕೊರಿಂಥದ ಪುರುಷ ಮತ್ತು ಮಹಿಳೆಯರಿಬ್ಬರಿಗೂ ಬರೆದ ಪತ್ರವಿದು.
  • ಸಹೋದರ ಮತ್ತು ಸಹೋದರಿಯರೇ ,ನಮಗೆ, ಅಸ್ಯಸೀಮೆಯಲ್ಲಿ ಸಂಭವಿಸಿದ ಸಂಕಟವನ್ನುನೀವು ತಿಳಿದುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. (2 ಕೊರಿಂಥ 1:8)
  1. ಪುರುಷ ಮತ್ತು ಮಹಿಳೆಯರ ಬಗ್ಗೆ ಉಪಯೋಗಿಸುವಾಗ ಸರ್ವನಾಮಗಳನ್ನು ಬಳಸಬಹುದು.
  • " ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ, ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕಂಡು ನನ್ನ ಹಿಂದೆ ಬರಲಿ." (ಮತ್ತಾಯ 16:24 ULB) ಇಂಗ್ಲೀಷ್ ಭಾಷೆಯವರು, ಇಲ್ಲಿ ಪುಲ್ಲಿಂಗ ಸರ್ವನಾಮಗಳನ್ನು ಏಕವಚನದಲ್ಲಿ ಬಳಸಬಹುದು. ಉದಾಹರಣೆಗೆ "ಅವನು," "ಅವನ," "ಅವನೊಂದಿಗೆ," ಇದರ ಬಹುವಚನರೂಪದಲ್ಲಿ ಬರುವ ಸರ್ವನಾಮಗಳು "ಅವರು," "ಅವರ," "ಅವರೊಂದಿಗೆ,"ಇವುಗಳಲ್ಲಿ ಲಿಂಗಭೇದ ಇರುವುದಿಲ್ಲ ಇಲ್ಲಿ ಕೇವಲ ಪುರುಷರು ಮಾತ್ರವಲ್ಲ ಎಲ್ಲಾ ಜನರಿಗೂ ಅನ್ವಯಿಸುತ್ತದೆ.
  • " ನಿಮಗೆ ನನ್ನನನ್ನ ಹಿಂದೆ ಬರಲು * " ಮನಸ್ಸಿದ್ದರೆ ನಿಮ್ಮನ್ನುನಿರಾಕರಿಸಿ ನಿಮ್ಮ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬನ್ನಿ