kn_ta/translate/figs-extrainfo/01.md

7.0 KiB

ಕೆಲವೊಮ್ಮೆಗಳಿಸಿದ ಜ್ಞಾನವನ್ನು ಮತ್ತು ಅಪ್ರಕಟ ಸಂದೇಶವನ್ನು ಪ್ರಕಟವಾಗಿ ತಿಳಿಸದೆ ಇರುವುದು ಉತ್ತಮ.

ವಿವರಣೆ

ಕೆಲವೊಮ್ಮೆಗಳಿಸಿದ ಜ್ಞಾನವನ್ನು ಮತ್ತು ಸೂಚಕ ಮಾಹಿತಿಯನ್ನು ಪ್ರಕಟವಾಗಿ ತಿಳಿಸಿದೇ ಇರುವುದು ಉತ್ತಮ. ಈ ಪುಟದಲ್ಲಿರುವ ನಿರ್ದೇಶನಗಳು ಯಾವಾಗ ಏನು ಮಾಡಬಾರದು ಎಂದು ತಿಳಿಸುತ್ತದೆ.

ಭಾಷಾಂತರ ತತ್ವಗಳು.

  • ಲೇಖಕರು ಉದ್ದೇಶಪೂರ್ವಕವಾಗಿ ಕೆಲವು ವಿಚಾರಗಳನ್ನು ಕೈಬಿಟ್ಟಿದ್ದರೆ, ಅಸ್ಪಷ್ಟವಾಗಿ ಬಿಟ್ಟಿದ್ದರೆ ಅದನ್ನು ಸರಿಪಡಿಸಲು ಪ್ರಯತ್ನಿಸದಿರಿ.
  • ಮೂಲ ಓದುಗರು ಇದನ್ನು ಅರ್ಥಮಾಡಿಕೊಳ್ಳಲಾರರು ಎಂದು ಲೇಖಕರು ಭಾವಿಸಿದ್ದರೆ ನೀವು ನಿಮ್ಮ ಓದುಗರಿಗೆ ಅದನ್ನು ಸರಿಪಡಿಸಿ ತಿಳಿಸಲು ಪ್ರಯತ್ನಿಸಿದರೆ ಅವರಿಗೆ ಅದು ವಿಸ್ಮಯವಾಗಿ ತೋರಬಹುದು ಮತ್ತು ಮೂಲ ಓದುಗರು ಏಕೆ ಅರ್ಥಮಾಡಿಕೊಳ್ಳಲು ಆಗಲಿಲ್ಲ ಎಂದು ಯೋಚಿಸಬಹುದು.
  • ಇಂತಹ ಮಾಹಿತಿಗಳನ್ನು ಹೆಚ್ಚು ಪ್ರಕಟವಾಗಿ ಹೇಳಲು ಪ್ರಯತ್ನಿಸಬೇಡಿ, ಇದರಿಂದ ಅವರು ಮುಖ್ಯ ವಿಷಯಗಳನ್ನು ಮರೆತುಬಿಡುವ ಸಾಧ್ಯತೆ ಇರುತ್ತದೆ.
  • ಮುಖ್ಯ ಉದ್ದೇಶದಿಂದ ಹೊರತಾಗಿ ಉಳಿಯುವ ಯಾವುದೇ ಸಂದೇಶವನ್ನು ಪ್ರಕಟವಾಗಿ ಹೇಳಬಾರದು ಮತ್ತು ಓದುಗರ ಗಮನವನ್ನು ಮುಖ್ಯ ಉದ್ದೇಶದಿಂದ ದೂರ ಇಡುವುದು.
  • ಗಳಿಸಿದ ಜ್ಞಾನ ಮತ್ತು ಅಪ್ರಕಟಿತ ಮಾಹಿತಿಯನ್ನು ಈಗಾಗಲೇ ನಿಮ್ಮ ಓದುಗರು ಅರ್ಥಮಾಡಿಕೊಂಡಿದ್ದರೆ ಅದನ್ನು ಪ್ರಕಟಿತ ಮಾಹಿತಿಯಾಗಿ ನೀಡಬಾರದು.

ಸತ್ಯವೇದದಲ್ಲಿನ ಉದಾಹರಣೆಗಳು.

ತಿಂದು ಬಿಡುವಂತದರಿಂದ ತಿನ್ನತಕ್ಕದ್ದು ದೊರಕಿತು ; ಕ್ರೂರವಾದುದರಿಂದ ಮಧುರವಾದುದು ಸಿಕ್ಕಿತು. (ನ್ಯಾಯಸ್ಥಾಪಕರು 14:14 ULB)

ಇದೊಂದು ಒಗಟಿನಂತಿದೆ. ಸಂಸೋನನು ಉದ್ದೇಶಪೂರ್ವಕವಾಗಿ ಈ ಒಗಟನ್ನು ತನ್ನ ಶತ್ರುಗಳು ಅರ್ಥಮಾಡಿಕೊಳ್ಳದೆ ಬಿಡಿಸಲಾರರು ಎಂದು ಅವರಿಗೆ ಹೇಳಿದನು. ತಿಂದು ಬಿಡುವಂತದ್ದು ಸಿಂಹ ಹಾಗೂ ಮಧುರವಾದುದು ಜೇನು ಎಂಬುದನ್ನು ನೀವು ನಿಮ್ಮ ಓದುಗರಿಗೆ ತಿಳಿಸಬಾರದು.

ಯೇಸು ಅವರಿಗೆ, "ಪರಿಸಾಯರ, ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ ಎಂದು ಎಚ್ಚರಿಕೆ ಹೇಳಿದನು. ಅದಕ್ಕೆ ಶಿಷ್ಯರು." ನಾವು ರೊಟ್ಟಿ ಬುತ್ತಿ ಕಟ್ಟಿಕೊಳ್ಳದೆ ಬಂದೆವಲ್ಲ " ಎಂದು ತಮ್ಮ ತಮ್ಮೊಳಗೆ ಮಾತನಾಡಿಕೊಂಡರು … (ಮತ್ತಾಯ 16:6,7 ULB)

ಇಲ್ಲಿ ಇರುವ ಸೂಚ್ಯವಾಗಿರುವ ಅರ್ಥವೇನೆಂದರೆ ಶಿಷ್ಯರು ಪರಿಸಾಯರ ಮತ್ತು ಸದ್ದುಕಾಯರ ಸುಳ್ಳುಬೋಧನೆಗಳಿಗೆ ಮರುಳಾಗದೆ ಎಚ್ಚರವಾಗಿರಬೇಕೆಂದು ಅರ್ಥ. ಆದರೆ ಯೇಸುವಿನ ಶಿಷ್ಯರಿಗೆ ಇದು ಅರ್ಥವಾಗಲಿಲ್ಲ. ಅವರು ಯೇಸು ನಿಜವಾದ ಹುಳಿರೊಟ್ಟಿಯ ಬಗ್ಗೆ ಮಾತನಾಡುತ್ತಿದ್ದಾನೆ ಎಂದುಕೊಂಡರು. ಆದುದರಿಂದ "ಹುಳಿ ರೊಟ್ಟಿ " ಎಂಬುದು ಸುಳ್ಳುಬೋಧನೆ ಎಂಬುದನ್ನು ಪ್ರಕಟವಾಗಿ ತಿಳಿಸಬೇಕೆಂಬುದು ಅಷ್ಟು ಸೂಕ್ತವಾಗಿ ಕಂಡುಬರುವುದಿಲ್ಲ. ಯೇಸು ಮತ್ತಾಯ 16:11 ರಲ್ಲಿ ಹೇಳುವಂತೆ ಕೇಳಿ ತಿಳಿಯುವವರೆಗೆ ಯೇಸು ಏನು ಹೇಳಿದ ಎಂಬುದನ್ನು ಆತನ ಶಿಷ್ಯರು ಅರ್ಥಮಾಡಿಕೊಳ್ಳಲಿಲ್ಲ.

"ನಾನು ರೊಟ್ಟಿಯ ಬಗ್ಗೆ ಮಾತನಾಡಲಿಲ್ಲ ಎಂಬುದು ನಿಮಗೆ ಹೇಗೆ ತಿಳಿಯದೆ ಹೋಯಿತು? ಎಚ್ಚರಿಕೆ ಪರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ" ಎಂದು ಅಂದನು. ಆಗ ಅವರಿಗೆ ಯೇಸು ನಿಜವಾದ ಹುಳಿಹಿಟ್ಟಿನ ಬಗ್ಗೆ ಹೇಳುತ್ತಿಲ್ಲ, ಆದರೆ ಪರಿಸಾಯರ ಮತ್ತು ಸದ್ದುಕಾಯರ ಬೋಧನೆಗಳಿಂದ ದೂರವಾಗಿದ್ದು ಎಚ್ಚರವಾಗಿರಿ ಎಂದು ಹೇಳುತ್ತಿದ್ದಾನೆ ಎಂದು ಅರ್ಥ ಮಾಡಿಕೊಂಡರು. (ಮತ್ತಾಯ 16:11,12 ULB)

ಯೇಸು ತಾನು ನಿಜವಾದ ಹುಳಿರೊಟ್ಟಿಯ ಬಗ್ಗೆ ಹೇಳಲಿಲ್ಲ, ಪರಿಸಾಯರ ಮತ್ತು ಸದ್ದುಕಾಯರ ಬೋಧನೆಬಗ್ಗೆ ಎಚ್ಚರವಾಗಿರಲು ಹೇಳಿದ್ದು ಎಂದು ಹೇಳಿದ ಮೇಲೆ ಅರ್ಥಮಾಡಿಕೊಂಡರು. ಆದುದರಿಂದ ಸೂಚ್ಯವಾಗಿರುವ ಮಾಹಿತಿಯನ್ನು ಪ್ರಕಟವಾಗಿ ಹೇಳುವುದು ಮತ್ತಾಯ 16:6.ರಲ್ಲಿ ಹೇಳಿರುವುದು ಸರಿಯಲ್ಲ.

ಭಾಷಾಂತರ ತಂತ್ರಗಳು.

ಈ ಪುಟದಲ್ಲಿ ಯಾವುದೇ ಭಾಷಾಂತರ ತಂತ್ರಗಳಿಲ್ಲ.

ಭಾಷಾಂತರ ತಂತ್ರಗಳ ಅಳವಡಿಕೆಗೆ ಉದಾಹರಣೆಗಳು

ಈ ಪುಟದಲ್ಲಿ ಯಾವುದೇ ಭಾಷಾಂತರ ತಂತ್ರಗಳ ಅಳವಡಿಕೆಗೆ ಉದಾಹರಣೆಗಳು ಇಲ್ಲ.