kn_ta/translate/figs-explicitinfo/01.md

14 KiB

ವಿವರಣೆ

ಕೆಲವು ಭಾಷೆಯಲ್ಲಿ ಕೆಲವು ವಿಷಯಗಳನ್ನು ಸಹಜವಾಗಿ ಇರುವಂತೆಯೇ ತಿಳಿಸುತ್ತಾರೆ. ಆದರೆ ಬೇರೆ ಭಾಷೆಗೆ ಭಾಷಾಂತರಿಸಿದಾಗ ಅದು ಬೇರೆ ರೀತಿಯ ಅರ್ಥವನ್ನು ನೀಡಬಹುದು. ಇದಕ್ಕೆ ಕಾರಣ ಕೆಲವು ಭಾಷೆಯಲ್ಲಿ ಕೆಲವು ವಿಷಯಗಳನ್ನು ಸ್ಪಷ್ಟವಾಗಿ ತಿಳಿಸಬಹುದು ಇನ್ನೂ ಕೆಲವು ಭಾಷೆಯಲ್ಲಿ ಇದೇ ವಿಷಯಗಳನ್ನು ಸೂಚ್ಯವಾಗಿ ಧ್ವನಿಸುವಂತೆ ತಿಳಿಸಬಹುದು.

ಇದಕ್ಕೆ ಕಾರಣ ಇದೊಂದು ಭಾಷಾಂತರ ಪ್ರಕರಣ.

ನೀವು ಭಾಷಾಂತರ ಮಾಡುವಾಗ ಮೂಲ ಭಾಷೆಯಲ್ಲಿ ಇರುವ ಮಾಹಿತಿಯನ್ನು ಭಾಷಾಂತರ ಮಾಡುವ ಭಾಷೆಯಲ್ಲಿ ಹೆಚ್ಚು ಸ್ಪಷ್ಟವಾಗಿ (ವಾಚ್ಯವಾಗಿ) ತಿಳಿಸಿದರೆ ಅದು ಅಸಹಜವಾಗಿ, ಅಪ್ರಬುದ್ಧವಾಗಿ ಅರ್ಥಕೊಡಬಹುದು. (ಇದು ಸಾಮಾನ್ಯವಾಗಿ ಭಾಷಾಂತರವಾದ ಭಾಷೆಯಲ್ಲಿ ವಿವರವಾಗಿ ಮಾಹಿತಿ ನೀಡದಿದ್ದರೆ ಆಗುವ ಪ್ರಮಾದ). ಅದರ ಬದಲು ಭಾಷಾಂತರವಾಗುವ ಭಾಷೆಯಲ್ಲಿ ಸೂಕ್ತವಾದ ಪದಗಳನ್ನು ಬಳಸಿ ಮೂಲಮಾಹಿತಿಯ ಅರ್ಥ ಧ್ವನಿಸುವಂತೆ ಮಾಡಬೇಕು.

ಸತ್ಯವೇದದಲ್ಲಿನ ಕೆಲವು ಉದಾಹರಣೆಗಳು

ಮತ್ತು ಅಭಿಮಲೇಕನು ಅಲ್ಲಿಗೆ ಯುದ್ಧಮಾಡುತ್ತಾ ಬಂದು ಬುರುಜಿನ ಬಾಗಿಲಿಗೆ ಬೆಂಕಿಹೊತ್ತಿಸಬೇಕೆಂದು ಅದರ ಸಮೀಪಕ್ಕೆ ಹೋದಾಗ. (ನ್ಯಾಯಸ್ಥಾಪಕರು 9:52 ESV)

ಹಿಬ್ರೂ ಭಾಷೆಯ ಸತ್ಯವೇದದಲ್ಲಿ ವಾಕ್ಯದ ಪ್ರಾರಂಭದಲ್ಲಿ “ಮತ್ತು” ಎಂಬ ಸಂಯುಕ್ತ ಪದವನ್ನು ಬಳಸಿ ಪ್ರಾರಂಭಿಸುವುದು ಸಹಜವಾಗಿರುತ್ತದೆ. ಹೀಗೆ ಬಳಸುವುದರಿಂದ ಹಿಂದಿನ ವಾಕ್ಯದೊಂದಿಗೆ ಸಂಬಂಧ ಬೆಸೆಯುತ್ತದೆ. ಆದರೆ ಇಂಗ್ಲೀಷಿನಲ್ಲಿ ಇಂತಹ ಬಳಕೆ ವ್ಯಾಕರಣ ಸಮ್ಮತವಲ್ಲ, ಓದುಗರಿಗೆ ಅರ್ಥಮಾಡಿಕೊಳ್ಳಲು ಶ್ರಮವೆನಿಸಬಹುದು ಮತ್ತು ಲೇಖಕರು ಅಷ್ಟೇನು ವಿದ್ಯಾವಂತರಲ್ಲ ಎಂಬ ಅಭಿಪ್ರಾಯ ಮೂಡಿಸಬಹುದು.

ಆದುದರಿಂದ ಇಂಗ್ಲೀಷಿನಲ್ಲಿ ಎರಡೂ ವಾಕ್ಯಗಳನ್ನು ಬೆಸೆಯಲು ಪ್ರಾರಂಭದಲ್ಲೇ ಬಳಸುವ ಸಂಯುಕ್ತ ಪದದ ಬಳಕೆಯನ್ನು ಬಿಡುವುದ ಒಳ್ಳೆಯದು. ಹಿಬ್ರೂ ಸತ್ಯವೇದದ ಪ್ರಕಾರ ಬೆಂಕಿಯೊಂದಿಗೆ ಉರಿದು ಹೋಯಿತು ಎಂಬುದು ಸಹಜವಾಗಿ ಹೇಳುವ ಮಾತು. ಇಂಗ್ಲೀಷಿನಲ್ಲಿ ಬೆಂಕಿಯೆಂಬ ಪದ ಕ್ರಿಯೆಯೊಂದಿಗೆ ಸೇರಿಕೊಂಡಿರುವುದರಿಂದ ಎರಡನ್ನೂಸ್ಪಷ್ಟವಾಗಿ ಹೇಳಲು ಬರುವುದಿಲ್ಲ ಇಲ್ಲಿ ಉರಿದು ಹೋಯಿತು ಎಂದು ಹೇಳಿದರೆ ಸಾಕು. ಬೆಂಕಿ ಎಂಬ ಪದವನ್ನು ಅಪ್ರಕಟ / ಗೌಣವಾಗಿ ಇದ್ದರೆ ಸಾಕು.

ಆ ಶತಾಧಿಪತಿಯು ಪ್ರಭುವೇ, , ನೀನು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನಗಿಲ್ಲ…” (ಮತ್ತಾಯ 8:8 ULB)

ಸತ್ಯವೇದದ ಭಾಷೆಯಲ್ಲಿ ಅಪರೋಕ್ಷ ಉದ್ಧರಣಾ ವಾಕ್ಯಗಳನ್ನು ಎರಡು ಕ್ರಿಯಾಪದಗಳೊಂದಿಗೆ ಬಳಸುವುದು ಸಹಜ. ಒಂದು ಕ್ರಿಯಾಪದ ಉದ್ದೇಶಿಸಿ ಮಾತನಾಡುವುದನ್ನು ಸೂಚಿಸುತ್ತದೆ. ಇನ್ನೊಂದು ಕ್ರಿಯಾಪದ ಮಾತನಾಡುವವನ ಪದಗಳನ್ನು ಸೂಚಿಸುತ್ತದೆ. ಇಂಗ್ಲೀಷ್ ಮಾತನಾಡುವವರು ಈ ರೀತಿಯ ಎರಡೂ ಕ್ರಿಯಾಪದಗಳ ಬಳಕೆ ಮಾಡುವುದನ್ನು ಅಸಹಜ ಮತ್ತು ಗೊಂದಲಮಯ ಎಂದು ಭಾವಿಸುತ್ತಾರೆ ಇಂಗ್ಲೀಷ್ ಮಾತನಾಡುವವರಿಗೆ ಮಾತನಾಡುವುದು ಮತ್ತು ಉತ್ತರಿಸುವುದು ಎರಡನ್ನೂ ಒಟ್ಟಾಗಿ ಸೇರಿಸಿ ಹೇಳುವುದು ಸುಲಭ. ಇಂಗ್ಲೀಷಿನಲ್ಲಿ ಎರಡು ಕ್ರಿಯಾಪದಗಳನ್ನು ಒಂದು ವಾಕ್ಯದಲ್ಲಿ ಬಳಸಿದರೆ ಒಂದು ಅರ್ಥಕೊಡುವ ಬದಲು ಎರಡು ಭಿನ್ನ ಕ್ರಿಯೆ ಬಗ್ಗೆ ಹೇಳಿದಂತೆ ಧ್ವನಿಸುತ್ತದೆ. ಆದುದರಿಂದ ಇಂಗ್ಲೀಷಿನಲ್ಲಿ ಒಂದೇ ಕ್ರಿಯಾಪದ ಬಳಸುವುದು ಉತ್ತಮ.

ಭಾಷಾಂತರ ತಂತ್ರಗಳು

  1. ಮೂಲಭಾಷೆಯಲ್ಲಿರುವ ಮಾಹಿತಿ ಸ್ಪಷ್ಟವಾಗಿ ಹೇಳುವಂತಾದರೆ ಭಾಷಾಂತರಿಸುವ ಭಾಷೆಯಲ್ಲಿ ಸಹಜವಾಗಿ ಹೊಂದಿಕೊಳ್ಳುವಂತಿದ್ದರೆ ಆಗ ಸ್ಪಷ್ಟವಾಗಿರುವ ಮಾಹಿತಿಯನ್ನು ಹಾಗೆಯೇ ಉಳಿಸಿಕೊಂಡು ಭಾಷಾಂತರಿಸಬೇಕು.
  2. ಭಾಷಾಂತರ ಮಾಡುವ ಭಾಷೆಯಲ್ಲಿ ಸ್ಪಷ್ಟವಾಗಿ ಹೇಳುವ ಮಾಹಿತಿಯು ಸರಿಯಾದ ಅರ್ಥಕೊಡಲು, ಸಹಜತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗದಿದ್ದರೆ, ಅನಾವಶ್ಯಕ ಎನಿಸಿದರೆ ಅಥವಾ ಗೊಂದಲವಾಗಿದ್ದರೆ ಅದನ್ನು ಗೌಣವಾಗಿ / ಸೂಚ್ಯವಾಗಿ ಉಳಿಸಬೇಕು. ಪ್ರಸ್ತುತ ಇರುವ ವಿಷಯಕ್ಕೆ ಸರಿಯಾಗಿ ಹೊಂದಿಕೊಳ್ಳುವಂತಿದ್ದರೆ ಓದುಗರು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾದರೆ ಈ ರೀತಿ ಮಾಡುವುದು ಒಳ್ಳೆಯದು. ನೀವು ಓದುಗರನ್ನು ಓದಿರುವ ಕೆಲವು ವಾಕ್ಯಭಾಗಗಳನ್ನು ಹೆಸರಿಸಿ ಪ್ರಶ್ನೆಕೇಳುವುದರ ಮೂಲಕ ದೃಢಪಡಿಸಿಕೊಳ್ಳಬಹುದು.

ಭಾಷಾಂತರ ತಂತ್ರಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.

  1. ಮೂಲಭಾಷೆಯಲ್ಲಿರುವ ಮಾಹಿತಿ ಸ್ಪಷ್ಟವಾಗಿ ಹೇಳುವಂತಾದರೆ ಭಾಷಾಂತರಿಸುವ ಭಾಷೆಯಲ್ಲಿ ಸಹಜವಾಗಿ ಹೊಂದಿಕೊಳ್ಳುವಂತಿದ್ದರೆ ಆಗ ಪ್ರಕಟವಾಗಿರುವ ಮಾಹಿತಿಯನ್ನು ಹಾಗೆಯೇ ಉಳಿಸಿಕೊಂಡು ಭಾಷಾಂತರಿಸಬೇಕು
  • ಈ ತಂತ್ರವನ್ನು ಬಳಸಿದರೆ ವಾಕ್ಯಭಾಗದಲ್ಲಿ ಯಾವ ಬದಲಾವಣೆಗಳು ಆಗದಿರುವುದರಿಂದ ಯಾವ ಉದಾಹರಣೆಗಳನ್ನು ಇಲ್ಲಿ ಕೊಟ್ಟಿಲ್ಲ.
  1. ಭಾಷಾಂತರ ಮಾಡುವ ಭಾಷೆಯಲ್ಲಿ ಪ್ರಕಟವಾಗಿ ಹೇಳುವ ಮಾಹಿತಿಯು ಸರಿಯಾದ ಅರ್ಥಕೊಡಲು, ಸಹಜತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗದಿದ್ದರೆ, ಅನಾವಶ್ಯಕ ಎನಿಸಿದರೆ ಅಥವಾ ಗೊಂದಲವಾಗಿದ್ದರೆ ಅದನ್ನು ಸೂಚ್ಯವಾಗಿ ಉಳಿಸಬೇಕು. ಪ್ರಸ್ತುತ ಇರುವ ವಿಷಯಕ್ಕೆ ಸರಿಯಾಗಿ ಹೊಂದಿಕೊಳ್ಳುವಂತಿದ್ದರೆ ಓದುಗರು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾದರೆ ಈ ರೀತಿ ಮಾಡುವುದು ಒಳ್ಳೆಯದು. ನೀವು ಓದುಗರನ್ನು ಓದಿರುವ ಕೆಲವು ವಾಕ್ಯಭಾಗಗಳನ್ನು ಹೆಸರಿಸಿ ಪ್ರಶ್ನೆಕೇಳುವುದರ ಮೂಲಕ ದೃಢಪಡಿಸಿಕೊಳ್ಳಬಹುದು
  • ಮತ್ತು ಅಭಿಮಲೇಕನು ಬುರುಜಿನ ಬಾಗಿಲಿನವರೆಗೆ ಬಂದು ಯುದ್ಧಮಾಡಿ ಅದರ ಬಾಗಿಲಿನ ಹತ್ತಿರ ಬಂದು ಬೆಂಕಿಯಿಂದ ಸುಡಲು ನೋಡಿದ (ನ್ಯಾಯಸ್ಥಾಪಕರು 9:52 ESV)
  • ಅಭಿಮಲೇಕನು ಬುರುಜಿನ ಬಳಿ ಬಂದು ಅವರೊಂದಿಗೆ ಯುದ್ಧಮಾಡಿದನು, ಬುರುಜಿನ ಬಾಗಿಲಿಗೆ ಬೆಂಕಿ ಹೊತ್ತಿಸಲು ಬೆಂಕಿ ಹೊತ್ತಿಸಲು . ಬಾಗಿಲಿನ ಬಳಿ ಬಂದನು. ಅಥವಾ…ಅದಕ್ಕೆ ಬೆಂಕಿ ಹಚ್ಚಲು . ಇಂಗ್ಲೀಷಿನಲ್ಲಿ ಒಂದು ವಾಕ್ಯದ ಅರ್ಥಕ್ರಿಯೆ ಹಿಂದಿನ ವಾಕ್ಯದ ಅರ್ಥ, ಕ್ರಿಯೆಯನ್ನು ಅನುಸರಿಸುತ್ತದೆ. ಇದನ್ನು “ಮತ್ತು” ಎಂಬ ಸಂಯುಕ್ತ ಪದದಿಂದ ಪ್ರಾರಂಭಿಸುವ ಅಗತ್ಯವಿಲ್ಲ. ಅದನ್ನು ಬಿಟ್ಟು ವಾಕ್ಯಮಾಡಬಹುದು. ಇದರೊಂದಿಗೆ ಇಲ್ಲಿನ ವಾಕ್ಯದಲ್ಲಿರುವ “ಬೆಂಕಿ.” ಎಂಬ ಪದವನ್ನು ಸಹ ಬಿಟ್ಟು ವಾಕ್ಯ ಮಾಡಬಹುದು. ಏಕೆಂದರೆ “ಹೊತ್ತಿಸಲು.” “ಸುಡಲು.” ಎಂಬ ಪದವನ್ನು ಬಳಿಸಿದರೆ ಸಾಕು. ಅದು ಬೆಂಕಿಯಿಂದಲೇ ಎಂಬುದು ಅರ್ಥವಾಗುತ್ತದೆ.ಆದುದರಿಂದ ಬೆಂಕಿ ಇಲ್ಲಿ ಗೌಣ, ಅಪ್ರಕಟ. “ಸುಡುವುದು ” ಎಂಬ ಪದಕ್ಕೆ ಪರ್ಯಾಯವಾಗಿ “ಬೆಂಕಿ ಹೊತ್ತಿಸುವುದು.” ಇಂಗ್ಲೀಷಿನಲ್ಲಿ “ಸುಡುವುದು “ ಮತ್ತು “ಬೆಂಕಿ“ ಎಂಬ ಎರಡೂ ಪದಗಳನ್ನು ಒಟ್ಟಿಗೆ ಬಳಸುವಂತಿಲ್ಲ ಆದುದರಿಂದ ಇದರಲ್ಲಿ ಒಂದನ್ನು ಬಿಡಬಹುದು. ಓದುಗರನ್ನು ಸೂಚ್ಯವಾಗಿರುವ ಪದದ ಅರ್ಥವನ್ನು ಅವರಿಗೆ ತಿಳಿಯಿತೆ ಎಂದು ಅವರನ್ನು “ ಬಾಗಿಲು ಹೇಗೆ ಸುಟ್ಟುಹೋಯಿತು” ಎಂದು ಪ್ರಶ್ನಿಸಿ ತಿಳಿದುಕೊಳ್ಳಬಹುದು. ಅವರು ಬೆಂಕಿಯಿಂದ ಸುಟ್ಟಿತು ಎಂದು ಉತ್ತರಿಸಿದರೆ ಸೂಚ್ಯವಾಗಿರುವ ಪದ ಅರ್ಥಮಾಡಿಕೊಂಡಿದ್ದಾರೆ ಎಂದು ತಿಳಿಯುತ್ತದೆ. ನೀವು ಎರಡನೇ ಪ್ರಯತ್ನ ಎಂದು ಅವರನ್ನು ಬಾಗಿಲಿಗೆ ಬೆಂಕಿ ಬಿದ್ದರೆ ಏನಾಗುತ್ತದೆ ? ಎಂದು ಪ್ರಶ್ನಿಸಬಹುದು. ಓದುಗರು “ಸುಟ್ಟುಹೋಗುತ್ತದೆ” ಎಂದು ಉತ್ತರಿಸಿದರೆ ಅವರಿಗೆ ಸೂಚ್ಯವಾಗಿ ತಿಳಿಸಿದ ಪದ ಅರ್ಥವಾಗುತ್ತದೆ ಎಂದು ತಿಳಿಯುತ್ತದೆ.
  • ಶತಾಧಿಪತಿಯು ಯೇಸುವನ್ನು ಕುರಿತು” ಪ್ರಭುವೇ ನೀನು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನಗಿಲ್ಲ ಎಂದು ಹೇಳಿದ” (ಮತ್ತಾಯ 8:8 ULB)
  • ಪ್ರಭುವೇ ನನ್ನ ಮನೆಗೆ ನೀನು ಬರುವಷ್ಟು ಯೋಗ್ಯತೆ ನನಗಿಲ್ಲ ” ಎಂದು ಶತಾಧಿಪತಿ ಉತ್ತರಿಸಿದ , "ಇಂಗ್ಲೀಷಿನಲ್ಲಿ ಶತಾಧಿಪತಿ ಯೇಸುವಿನೊಂದಿಗೆ ಮಾತನಾಡಿದ ಎಂದು ಹೇಳುವುದನ್ನು ಉತ್ತರಿಸಿದ ಎಂಬ ಪದವನ್ನು ಉಪಯೋಗಿಸಿ ” ಹೇಳಿದ ” ಪದ ಬಿಡಲಾಗಿದೆ. ಶತಾಧಿಪತಿ ಹೇಗೆ ಉತ್ತರಿಸಿದ ? ಎಂದು ಪ್ರಶ್ನಿಸಿ ಯೇಸುವಿನೊಂದಿಗೆ ಶತಾಧಿಪತಿ ಮಾತನಾಡಿದ ಎಂದು ಅರ್ಥಮಾಡಿಕೊಂಡಿರುವುದನ್ನು ತಿಳಿದುಕೊಳ್ಳಿ. ಅವನು ಯೇಸುವಿನೊಂದಿಗೆ ಮಾತಾಡಿದ ಎಂದು ತಿಳಿದುಕೊಂಡರೆ ಅದೇ ಅಪ್ರಕಟ ವಿಚಾರಗಳನ್ನು ಓದುಗರು ಅರ್ಥಮಾಡಿಕೊಳ್ಳಬಲ್ಲರು ಎಂದು ತಿಳಿಯುತ್ತದೆ.