kn_ta/translate/figs-exclusive/01.md

7.2 KiB

ವಿವರಣೆ

ಕೆಲವು ಭಾಷೆಯಲ್ಲಿ ಒಂದಕ್ಕಿಂತ ಹೆಚ್ಚು "ನಾವು:" ಎಂಬ ಸರ್ವನಾಮಗಳು ಇರುತ್ತವೆ. ಅಂದರೆ "ನಾನು ಮತ್ತು ನೀನು " ಅಥವಾ "ನಾವು "ಮತ್ತು "ನೀವು ":ಎರಡೂ ಸೇರಿ "ನಾವು:" ಆಗುತ್ತದೆ. ಇದನ್ನು ** ಸೇರಿಸಲ್ಪಟ್ಟ** ಸರ್ವನಾಮಗಳು ಎಂದು ಹೇಳಬಹುದು. ** ಪ್ರತ್ಯೇಕಿಸಲ್ಪಟ್ಟ** ಸರ್ವನಾಮಗಳಲ್ಲಿ ಲ್ಲಿ "ನಾನು" ಮತ್ತು "ಇತರರು " ಸೇರಿ ನಾವು ಆಗುತ್ತದೆ ಇಲ್ಲಿ ನೀನು" ಅಥವಾ "ನೀವು" ಸೇರುವುದಿಲ್ಲ."

" ಪ್ರತ್ಯೇಕಿಸಲ್ಪಟ್ಟ" ರೀತಿಯಲ್ಲಿ ಯಾರೊಂದಿಗೆ ಮಾತನಾಡುತ್ತೇವೋ ಅವರನ್ನು ಬಿಟ್ಟು ಹೇಳಲಾಗುವುದು. " ಸೇರಿಸಲ್ಪಟ್ಟ" ರೀತಿಯಲ್ಲಿ ಯಾರೊಂದಿಗೆ ಮಾತನಾಡುತ್ತೇವೋ ಆ ವ್ಯಕ್ತಿಯನ್ನು ಸೇರಿಸಿಕೊಂಡು ಹೇಳುವಂತಾದ್ದು.

ಇದು "ನಾವು ", "ನಮ್ಮ", "ನಮ್ಮದು” ಮತ್ತು "ನಾವೆಲ್ಲರೂ," ಎಂಬುದಾಗಿರುತ್ತದೆ. ಕೆಲವು ಭಾಷೆಯಲ್ಲಿ ಈ ಎರಡೂ ಪ್ರತ್ಯೇಕಿಸಿದ ಮತ್ತು ಸೇರಿಸಿದ ರೀತಿಗಳನ್ನು ಬಳಕೆ ಮಾಡುವುದು ಸಹಜವಾಗಿರುತ್ತದೆ. ಭಾಷಾಂತರ ಮಾಡುವವರು ಈ ಎರಡೂ ನಮೂನೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಸಂದರ್ಭೋಚಿತವಾಗಿ ಎಲ್ಲೆಲ್ಲಿ ಯಾವ ರೀತಿಯ "ನಾವು" ಸರ್ವನಾಮಗಳನ್ನು ಬಳಸಬೇಕೆಂದು ತಿಳಿದಿರಬೇಕು.

ಇಲ್ಲಿ ಕೊಟ್ಟಿರುವ ಚಿತ್ರಗಳನ್ನು ನೋಡಿ ಬಲಗಡೆಯಲ್ಲಿರುವ ಜನರೊಂದಿಗೆ ಭಾಷಣಮಾಡುತ್ತಿರುವವನು ಮಾತನಾಡುತ್ತಿದ್ದಾನೆ. ಹಳದಿ ಬಣ್ಣದ ಪ್ರಮುಖ ಬೆಳಕು ಯಾರು ಸೇರಿಸಲ್ಪಟ್ಟ "ನಾವು," ಮತ್ತು ಯಾರು ಪ್ರತ್ಯೇಕಿಸಲ್ಪಟ್ಟ "ನಾವು," ಎಂಬುದನ್ನು ತೋರಿಸುತ್ತದೆ.

ಏಕೆಂದರೆ ಇದು ಭಾಷಾಂತರ ಪ್ರಕರಣ.

ಸತ್ಯವೇದವನ್ನು ಮೊದಲು ಹಿಬ್ರೂ, ಅರೆಮಿಕ್ ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆಯಲಾಯಿತು.

ಇಂಗ್ಲೀಷ್ ಭಾಷೆಯಲ್ಲಿ ಇರುವಂತೆ ಈ ಭಾಷೆಗಳಲ್ಲಿ ಪ್ರತ್ಯೇಕಿಸಿದ ಮತ್ತು ಸೇರಿಸಲ್ಪಟ್ಟ "ನಾವು " ಎಂಬ ಸರ್ವನಾಮಗಳು ಇಲ್ಲ. ಭಾಷಾಂತರ ಮಾಡುವವರು ಈ ಎರಡೂ ನಮೂನೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಸಂದರ್ಭೋಚಿತವಾಗಿ ಎಲ್ಲೆಲ್ಲಿ ಯಾವ ರೀತಿಯ "ನಾವು " ಸರ್ವನಾಮಗಳನ್ನು ಬಳಸಬೇಕೆಂದು ತಿಳಿದಿರಬೇಕು.

ಸತ್ಯವೇದದಲ್ಲಿನ ಉದಾಹರಣೆಗಳು.

ನಮ್ಮಲ್ಲಿ ಐದು ರೊಟ್ಟಿ,ಎರಡು ಮೀನು ಹೊರತು ಹೆಚ್ಚೇನು ಇಲ್ಲ ನಾವುಹೋಗಿ ಇವರಿಗೆ ಆಹಾರ ಕೊಂಡು ತರಬೇಕೋ.” (ಲೂಕ 9:13 ULB).

ಅವರು ಹೇಳಿದರು. ಇಲ್ಲಿ ಈ ವಾಕ್ಯದ ಮೊದಲ ಭಾಗದಲ್ಲಿ ಶಿಷ್ಯರು ತಮ್ಮ ಬಳಿ ಎಷ್ಟು ಆಹಾರ ಇದೆ ಎಂದು ಯೇಸುವಿಗೆ ತಿಳಿಸುತ್ತಾರೆ.ಇಲ್ಲಿರುವ "ನಾವು " ಪ್ರತ್ಯೇಕಿಸಿದ ಅಥವಾ ಸೇರಿಸಲ್ಪಟ್ಟ ಎಂಬ ಎರಡೂ ಅರ್ಥ ಕೊಡುತ್ತದೆ. ಎರಡನೇ ಭಾಗದಲ್ಲಿ ಶಿಷ್ಯರು ಹೋಗಿ ಆ ಜನರಿಗಾಗಿ ಆಹಾರ ಕೊಂಡುಕೊಂಡು ಬರುವ ಬಗ್ಗೆ ಮಾತನಾಡುತ್ತಾರೆ. ಇವು "ನಾವು " ಎಂಬ ಪದ ಪ್ರತ್ಯೇಕಿಸಿದೆ, ಏಕೆಂದರೆ ಅವರೊಂದಿಗೆ ಯೇಸು ಹೋಗುತ್ತಿಲ್ಲ.ಅವರಲ್ಲಿ ಕೆಲವರು ಮಾತ್ರ ಹೋಗುವ ಬಗ್ಗೆ ಮಾತನಾಡುತ್ತಿದ್ದಾರೆ.

ತಂದೆಯ ಬಳಿಯಲ್ಲಿದ್ದುನಮಗೆ ಪ್ರತ್ಯಕ್ಷವಾದಂತಹ ನಿತ್ಯ ಜೀವವನ್ನು ನಾವು ಕಂಡು ಅದನ್ನು ಕುರಿತು ಸಾಕ್ಷಿ ಹೇಳಿ ಅದನ್ನು ನಿಮಗೆ ಪ್ರಸಿದ್ಧಿಪಡಿಸುತ್ತೇವೆ(1 ಯೊಹಾನ 1:2 ULB)

ಯೋಹಾನನು ತಾನು ಮತ್ತು ಇತರ ಅಪೋಸ್ತಲರು ಏನು ನೋಡಿದರೆಂದು ಯೇಸುವನ್ನು ನೋಡದೆ ಇರುವ ಜನರಿಗೆ ಈ ಮಾತುಗಳನ್ನು ಹೇಳುತ್ತಿದ್ದಾನೆ. ಯಾವಭಾಷೆಯಲ್ಲಿ ಪ್ರತ್ಯೇಕಿಸಿದ "ನಾವು " ಮತ್ತು "ನಮ್ಮ " ಪದಗಳ ಬಳಕೆಯನ್ನು ಮಾಡಬೇಕು.

… ಆ ಕುರುಬರು ನಾವು ಈಗಲೇ ಬೆತ್ಲೆಹೇಮಿಗೆ ಹೋಗಿ ಕರ್ತನು ನಮಗೆ " ತಿಳಿಸಿದ ಈ ಸಂಗತಿಯನ್ನು ನೋಡೋಣ ನಡೆಯಿರಿ ಎಂದು ತಮ್ಮತಮ್ಮೊಳಗೆ /u>.ಮಾತಾಡಿಕೊಂಡು ಹೊರಟರು " (ಲೂಕ 2:15 ULB)

ಆ ಕುರುಬರು ತಮ್ಮೊಳಗೆ ಒಬ್ಬರಿಗೊಬ್ಬರು ಮಾತಾಡಿಕೊಂಡರು. ಅವರು ಹೀಗೆ ಮಾತನಾಡುವಾಗ ತಮ್ಮಲ್ಲೇಇದ್ದ ಒಬ್ಬರೊಂದಿಗೆ ಒಬ್ಬರು ಮಾತನಾಡುತ್ತಾ "ನಾವು," ಈಗಲೇ ಹೋಗೋಣ ಎನ್ನುವಾಗ ಎಲ್ಲರೂ ಒಂದೇ ಎಂದಾಯಿತು. >ಒಂದಾನೊಂದು ದಿನದಲ್ಲಿ ಆತನು ತನ್ನ ಶಿಷ್ಯರ ಸಂಗಡ ಒಂದು ದೋಣಿಯನ್ನು ಹತ್ತಿ ನಾವು ಸರೋವರದ ಆಚೆ ದಡಕ್ಕೆ "ಹೋಗೋಣ" ಎಂದು ಹೇಳಿದನು. ಅವರು ದೋಣಿ ಹತ್ತಿ ಹೊರಟರು (ಲೂಕ 8:22 ULB)

ಯೇಸು "ನಾವು," ಎಂದಾಗ ಆತನು ತಾನು ಮತ್ತು ತನ್ನ ಶಿಷ್ಯರು "ನಾವು" ಒಟ್ಟಾಗಿ ಹೋಗೋಣ ಎಂದು ಹೇಳುವಾಗ ಇದು "ಸೇರಿಸಲ್ಪಟ್ಟ ನಾವು,”