kn_ta/translate/figs-doublenegatives/01.md

12 KiB

ಒಂದು ಉಪವಾಕ್ಯದಲ್ಲಿ ಎರಡು ಪದಗಳಿದ್ದು ಆ ಎರಡೂ ಪದಗಳು "ಇಲ್ಲ/ನಕಾರ" ಎಂಬ ಅರ್ಥವನ್ನು ವ್ಯಕ್ತಪಡಿಸುವಾಗ ದ್ವಿಗುಣ ನಕಾರಾತ್ಮಕವು ಬರುತ್ತದೆ. ದ್ವಿಗುಣ ನಕಾರಾತ್ಮಕ ಪದಗಳ ಅರ್ಥಗಳು ಬೇರೆ ಬೇರೆ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ಬರುತ್ತವೆ. ಒಂದು ವಾಕ್ಯದಲ್ಲಿ ದ್ವಿಗುಣ ನಕಾರಾತ್ಮಕ ಸೂಚಿಸುವ ಪದಗಳಿದ್ದರೆ ಅವುಗಳನ್ನು ಸರಿಯಾಗಿ, ನಿರ್ದಿಷ್ಟವಾಗಿ ಭಾಷಾಂತರಿಸಲು ಸತ್ಯವೇದದಲ್ಲಿನ ದ್ವಿಗುಣ ನಕಾರಾತ್ಮಕ ಪದಗಳ ಅರ್ಥವೇನು ಮತ್ತು ಈ ವಿಚಾರವನ್ನು ನಿಮ್ಮ ಭಾಷೆಯಲ್ಲಿ ಹೇಗೆ ವ್ಯಕ್ತಪಡಿಸಬೇಕು ಎಂಬುದು ನೀವು ತಿಳಿದುಕೊಳ್ಳಬೇಕು.

ವಿವರಣೆ

ನಕಾರಾತ್ಮಕ ಪದಗಳು "ಇಲ್ಲ" ಎಂಬ ಅರ್ಥವನ್ನು ಸೂಚಿಸುತ್ತವೆ. ಆಂಗ್ಲ ಮತ್ತು ಕನ್ನಡದಲ್ಲಿನ ಉದಾಹರಣೆಗಳು "ಇಲ್ಲ (no)," "ಇಲ್ಲ/ಬಾರದು (not)," "ಯಾವುದು ಇಲ್ಲ (none)," "ಯಾರೂ ಇಲ್ಲ (no one)," "ಏನೂ ಇಲ್ಲ (nothing)," "ಎಲ್ಲೂ ಇಲ್ಲ (nowhere)," "ಎಂದಿಗೂ ಇಲ್ಲ (never)," "ಇದೂ ಅಲ್ಲ (nor)," "ಅದೂ ಅಲ್ಲ (neither)," ಮತ್ತು "ರಹಿತವಾಗಿ (without)." ಕೆಲವು ಪದಗಳಿಗೆ ಪೂರ್ವ ಪ್ರತ್ಯಯಗಳು ಅಥವಾ ಉತ್ತರ ಪ್ರತ್ಯಯಗಳು ಇರುತ್ತವೆ, ಅವು "ಇಲ್ಲ/ನಕಾರ" ಎಂಬರ್ಥವನ್ನು ಕೊಡುತ್ತವೆ, ಆ ಪದಗಳನ್ನು ಈ ಕೆಳಗೆ ಗುರುತಿಸಲಾಗಿದೆ: "ಸಂತೋಷವಿಲ್ಲದ ಮತ್ತು "ಸಾಧ್ಯವಿಲ್ಲದ," ಮತ್ತು "ಉಪಯೋಗವಿಲ್ಲದ." ಬೇರೆ ಕೆಲವು ಪದಗಳೂ ಸಹ ನಕಾರಾತ್ಮಕ ಅರ್ಥವುಳ್ಳವುಗಳಾಗಿವೆ, ಅವುಗಳು ಯಾವುವೆಂದರೆ, "ಕೊರತೆ" ಅಥವಾ "ತಿರಸ್ಕರಿಸು," ಅಥವಾ "ಕಾದಾಡು" ಅಥವಾ "ದುಷ್ಟ."

ಒಂದು ಉಪವಾಕ್ಯದಲ್ಲಿ ಎರಡು ಪದಗಳಿದ್ದು ಅವೆರಡೂ ನಕಾರಾತ್ಮಕ ಅರ್ಥವನ್ನು ವ್ಯಕ್ತಪಡಿಸುವಾಗ ದ್ವಿಗುಣ ನಕಾರಾತ್ಮಕವು ಬರುತ್ತದೆ.

ನಮಗೆ ಹಕ್ಕು ಇಲ್ಲ ಎಂದು ಅಲ್ಲ... (2 ಥೆಸಲೋನಿಕ 3:9 ULT)

ಇಂತಹ ಉತ್ತಮ ಭರವಸೆಯು ಪ್ರತಿಜ್ಞೆ ರಹಿತವಾದ್ದದು ಅಲ್ಲ... (ಇಬ್ರಿಯರಿಗೆ 7:20 ULT)

ದುಷ್ಟ ಜನರು ಶಿಕ್ಷೆ ಹೊಂದದೇ ಇರುವುದಿಲ್ಲ ಖಂಡಿತ (ಜ್ಞಾನೋಕ್ತಿಗಳು 11:21 ULT)

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

ದ್ವಿಗುಣ ನಕಾರಾತ್ಮಕಗಳು ಬೇರೆ ಬೇರೆ ಭಾಷೆಗಳಲ್ಲಿ ವಿವಿಧ ಅರ್ಥವುಳ್ಳಗಳಾಗಿರುತ್ತವೆ.

  • ಸ್ಪಾನಿಷ್ ಭಾಷೆಯಂತಹ ಕೆಲವು ಭಾಷೆಗಳಲ್ಲಿ, ದ್ವಿಗುಣ ನಕಾರಾತ್ಮಕಗಳು ನಕಾರಾತ್ಮಕತೆಗೆ ಒತ್ತುಕೊಡುತ್ತವೆ. ಇಲ್ಲಿರುವ ಸ್ಪಾನಿಷ್ ಭಾಷೆಯ ವಾಕ್ಯವು No ví a nadie ಇದರ ಅರ್ಥ "ನಾನು ಯಾರನ್ನೂ ನೋಡಲಿಲ್ಲ (I did not see no one)". ಈ ವಾಕ್ಯದಲ್ಲಿ 'no' ಇಲ್ಲ ಕ್ರಿಯಾಪದದ ಅರ್ಥ 'ಯಾರೂ ಇಲ್ಲ' ಎಂಬ ನಕಾರ ಪದಗಳು. ಎರಡು "ನಕಾರ" ಪದ ಇಲ್ಲಿ "ನಾನು ಯಾರನ್ನೂ ನೋಡಲಿಲ್ಲ" ಎಂಬುದನ್ನು ಸೂಚಿಸುತ್ತದೆ.
  • ಕೆಲವು ಭಾಷೆಯಲ್ಲಿ, ಎರಡನೇ "ನಕಾರ" ಪದವು ಮೊದಲನೇ "ನಕಾರ" ಪದವನ್ನು ಹೊಡೆದು ಹಾಕಿ ಸಕಾರಾತ್ಮಕ ವಾಕ್ಯವನ್ನು ರಚಿಸುತ್ತದೆ. "ಅವನು ಬುದ್ಧಿಹೀನನು ಅಲ್ಲ" ಎಂದರೆ "ಅವನು ಬುದ್ಧಿವಂತ" ಎಂದರ್ಥ.
  • ಕೆಲವು ಭಾಷೆಯಲ್ಲಿ ದ್ವಿಗುಣ ನಕಾರಾತ್ಮಕಗಳು ಸಕಾರಾತ್ಮಕ ವಾಕ್ಯಗಳನ್ನು ರಚಿಸುತ್ತವೆ, ಆದರೆ ಇದು ಅಷ್ಟೊಂದು ದೃಢವಾದ ವಾಕ್ಯವಾಗಿ ಇರುವುದಿಲ್ಲ. "ಅವನು ಬುದ್ಧಿಹೀನನು ಅಲ್ಲ" ಎಂದರೆ "ಅವನು ಸ್ವಲ್ಪಮಟ್ಟಿಗೆ ಬುದ್ಧಿವಂತ" ಎಂಬರ್ಥವನ್ನು ಕೊಡುತ್ತದೆ.
  • ಕೆಲವು ಭಾಷೆಗಳಲ್ಲಿ ಉದಾಹರಣೆಗೆ ಸತ್ಯವೇದದಲ್ಲಿನ ಭಾಷೆಗಳಲ್ಲಿ, ದ್ವಿಗುಣ ನಕಾರತ್ಮಕಗಳು ಸಕಾರಾತ್ಮಕ ವಾಕ್ಯಗಳನ್ನು ರಚಿಸುತ್ತವೆ ಮತ್ತು ಅನೇಕವೇಳೆ ವಾಕ್ಯಗಳನ್ನು ದೃಢಪಡಿಸುತ್ತವೆ. "ಅವನು ಬುದ್ಧಿಹೀನನು ಅಲ್ಲ" ಎಂಬುದು "ಅವನು ಬುದ್ಧಿವಂತ" ಅಥವಾ "ಅವನು ತುಂಬಾ ಬುದ್ಧಿವಂತ" ಎಂಬ ಅರ್ಥವನ್ನು ಕೊಡುತ್ತದೆ.

ದ್ವಿಗುಣ ನಕಾರಾತ್ಮಕಗಳುಳ್ಳ ವಾಕ್ಯಗಳನ್ನು ನಿರ್ದಿಷ್ಟವಾಗಿ ಮತ್ತು ಸರಿಯಾಗಿ ನಿಮ್ಮ ಭಾಷೆಯಲ್ಲಿ ಭಾಷಾಂತರ ಮಾಡಲು ಸತ್ಯವೇದದಲ್ಲಿನ ದ್ವಿಗುಣ ನಕಾರಾತ್ಮಕ ಪದಗಳ ಅರ್ಥವನ್ನು ಮತ್ತು ನಿಮ್ಮ ಭಾಷೆಯಲ್ಲಿ ಇದನ್ನು ಹೇಗೆ ವ್ಯಕ್ತಪಡಿಸಬಹುದು ಎಂಬುದನ್ನು ನೀವು ತಿಳಿದುಕೊಳ್ಳಬೇಕು.

ಸತ್ಯವೇದದಲ್ಲಿನ ಉದಾಹರಣೆಗಳು

...ನಿಷ್ಪ್ರಯೋಜಕರು ಆಗದೇ ಇರುವ ಸಲುವಾಗಿ, (ತೀತ 3:14 ULT)

ಇದರ ಅರ್ಥ "ಪ್ರಯೋಜನವುಳ್ಳವರು ಆಗುವ ಸಲುವಾಗಿ."

ಆತನ ಮೂಲಕವಾಗಿ ಸಮಸ್ತವೂ ಉಂಟಾಯಿತು ಉಂಟಾಗಿರುವ ವಸ್ತುಗಳಲ್ಲಿ ಆತನಿಲ್ಲದೆ ಒಂದಾದರೂ ಉಂಟಾಗಲಿಲ್ಲ. (ಯೋಹಾನ 1:3 ULT)

ಎರಡು ನಕಾರ ಅರ್ಥ ಬರುವ ಪದಗಳನ್ನು ಉಪಯೋಗಿಸಿ ದೇವರ ಮಗನು ಸಮಸ್ತವನ್ನೂ ಸೃಷ್ಟಿಸಿದ ಎಂದು ಯೋಹಾನನು ಒತ್ತಿ ಹೇಳಿದ್ದಾನೆ. ದ್ವಿಗುಣ ನಕಾರಾತ್ಮಕ ಪದಗಳು ಕೇವಲ ಸಕಾರಾತ್ಮಕವಾದ ವಾಕ್ಯವನ್ನು ರಚಿಸುವುದಕ್ಕಿಂತಲೂ ಹೆಚ್ಚಾಗಿ ದೃಢವಾದ ವಾಕ್ಯವನ್ನು ರಚಿಸುತ್ತವೆ.

ಭಾಷಾಂತರದ ಕಾರ್ಯತಂತ್ರಗಳು

ನಿಮ್ಮ ಭಾಷೆಯಲ್ಲಿ ಎರಡು ನಕಾರ ಪದಗಳು ಸಹಜವಾಗಿ ಬಳಕೆಯಾಗಿ ಸಕಾರಾತ್ಮಕ ವಾಕ್ಯಗಳನ್ನು ರಚಿಸುವುದಾದರೆ ಅದನ್ನೇ ಬಳಸಬಹುದು. ಇಲ್ಲದಿದ್ದರೆ ಈ ಕೆಳಗೆ ಕೊಟ್ಟಿರುವ ಕಾರ್ಯತಂತ್ರಗಳನ್ನು ಬಳಸಬಹುದು:

  1. ಎರಡು ನಕಾರಾತ್ಮಕ ಪದಗಳು ಸತ್ಯವೇದದಲ್ಲಿ ಸಹಜವಾಗಿ ಬಂದು ಬಲವಾದ ಸಕಾರಾತ್ಮಕ ವಿಷಯವನ್ನು ತಿಳಿಸುವುದಾದರೆ ಮತ್ತು ನಿಮ್ಮ ಭಾಷೆಯಲ್ಲಿ ಅದನ್ನು ಉಪಯೋಗಿಸಲು ಸಾಧ್ಯವಾಗದಿದ್ದರೆ ಎರಡೂ ನಕಾರಾತ್ಮಕ ಪದಗಳನ್ನು ಬಿಟ್ಟು ಸಕಾರಾತ್ಮಕ ವಾಕ್ಯ ಮಾಡಬೇಕು.
  2. ಸತ್ಯವೇದದಲ್ಲಿನ ವಾಕ್ಯವನ್ನು ಸತ್ವವುಳ್ಳ ಸಕಾರಾತ್ಮಕ ವಾಕ್ಯವನ್ನು ಮಾಡಲು ಎರಡು ನಕಾರಾತ್ಮಕ ಪದಗಳನ್ನು ಬಳಸಿದರೆ ಮತ್ತು ಇಂತಹ ಪ್ರಯೋಗಗಳು ನಿಮ್ಮ ಭಾಷೆಯಲ್ಲಿ ಆಗದಿದ್ದರೆ ಎರಡೂ ನಕಾರಾತ್ಮಕ ಪದಗಳನ್ನು ತೆಗೆದು ಅದಕ್ಕಿಂತ ಸಮರ್ಥವಾದ ಪದ ಅಥವಾ ನುಡಿಗಟ್ಟನ್ನು ಬಳಸಬಹುದು. ಉದಾಹರಣೆಗೆ: "ತುಂಬಾ" ಅಥವಾ "ಖಂಡಿತವಾಗಿ" ಅಥವಾ "ನಿಶ್ಚಯವಾಗಿ."

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು

(1) ಸತ್ಯವೇದದಲ್ಲಿ ಬರುವ ಎರಡು ನಕಾರಾತ್ಮಕ ಪದಗಳ ಉದ್ದೇಶ ಸರಳವಾದ ಸಕಾರಾತ್ಮಕ ವಾಕ್ಯ ರಚಿಸುವುದಕ್ಕಾಗಿರುವುದಾದರೆ, ಮತ್ತು ಇಂತಹ ಬಳಕೆ ನಿಮ್ಮ ಭಾಷೆಯಲ್ಲಿ ಇಲ್ಲದಿದ್ದರೆ ಎರಡೂ ನಕಾರಾತ್ಮಕ ಪದಗಳನ್ನು ತೆಗೆದರೆ ಅದು ಸಕಾರಾತ್ಮಕ ವಾಕ್ಯವಾಗುತ್ತದೆ.

ನಮ್ಮ ನಿರ್ಬಲಾವಸ್ಥೆಯಲ್ಲಿ ಅನುತಾಪ ಪಡದ ಮಹಾ ಯಾಜಕನು ನಮಗೆ ಇಲ್ಲ (ಇಬ್ರಿಯರಿಗೆ 4:15 ULT)

"ನಮ್ಮ ನಿರ್ಬಲಾವಸ್ಥೆಯಲ್ಲಿ ಅನುತಾಪ ಪಡಬಲ್ಲ ಮಹಾ ಯಾಜಕನು ನಮಗಿದ್ದಾನೆ."

...ನಿಷ್ಪ್ರಯೋಜಕರು ಆಗದೇ ಇರುವ ಸಲುವಾಗಿ, (ತೀತ 3:14 ULT)

"ಪ್ರಯೋಜನವುಳ್ಳವರು ಆಗುವ ಸಲುವಾಗಿ."

(2) ಸತ್ಯವೇದದಲ್ಲಿನ ವಾಕ್ಯವನ್ನು ಸತ್ವವುಳ್ಳ ಸಕಾರಾತ್ಮಕ ವಾಕ್ಯವನ್ನು ಮಾಡಲು ಎರಡು ನಕಾರಾತ್ಮಕ ಪದಗಳನ್ನು ಬಳಸಿದರೆ ಮತ್ತು ಇಂತಹ ಪ್ರಯೋಗಗಳು ನಿಮ್ಮ ಭಾಷೆಯಲ್ಲಿ ಆಗದಿದ್ದರೆ ಎರಡೂ ನಕಾರಾತ್ಮಕ ಪದಗಳನ್ನು ತೆಗೆದು ಅದಕ್ಕಿಂತ ಸಮರ್ಥವಾದ ಪದ ಅಥವಾ ನುಡಿಗಟ್ಟನ್ನು ಬಳಸಬಹುದು. ಉದಾಹರಣೆಗೆ: "ತುಂಬಾ" ಅಥವಾ "ಖಂಡಿತವಾಗಿ" ಅಥವಾ "ನಿಶ್ಚಯವಾಗಿ."

ದುಷ್ಟ ಜನರು ಶಿಕ್ಷೆ ಹೊಂದದೇ ಇರುವುದಿಲ್ಲ ಖಂಡಿತ (ಜ್ಞಾನೋಕ್ತಿಗಳು 11:21 ULT)

"ದುಷ್ಟ ಜನರಿಗೆ ಖಂಡಿತವಾಗಿ ಶಿಕ್ಷೆಯಾಗುವುದು ಎಂದು ತಿಳಿಯಿರಿ"

ಆತನ ಮೂಲಕವಾಗಿ ಸಮಸ್ತವೂ ಉಂಟಾಯಿತು ಉಂಟಾಗಿರುವ ವಸ್ತುಗಳಲ್ಲಿ ಆತನಿಲ್ಲದೆ ಒಂದಾದರೂ ಉಂಟಾಗಲಿಲ್ಲ. (ಯೋಹಾನ 1:3 ULT)

"ಸಮಸ್ತವೂ ಆತನಿಂದ ಉಂಟಾಯಿತು. ಉಂಟಾಗಿರುವ ವಸ್ತುಗಳನ್ನೆಲ್ಲಾ ನಿಶ್ಚಯವಾಗಿ ಆತನೇ ಉಂಟುಮಾಡಿದನು"