kn_obs/content/07.md

7.4 KiB

7. ದೇವರು ಯಾಕೋಬನನ್ನು ಆಶೀರ್ವದಿಸಿದನು

OBS Image

ಹುಡುಗರು ಬೆಳೆದಾಗ, ಯಾಕೋಬನು ಮನೆಯಲ್ಲಿ ಇರಲು ಇಷ್ಟಪಟ್ಟನು, ಆದರೆ ಏಸಾವನು ಪ್ರಾಣಿಗಳ ಬೇಟೆಯಾಡುವುದನ್ನು ಇಷ್ಟಪಟ್ಟನು. ರೆಬೆಕ್ಕಳು ಯಾಕೋಬನನ್ನು ಪ್ರೀತಿಸಿದಳು, ಆದರೆ ಇಸಾಕನು ಏಸಾವನನ್ನು ಪ್ರೀತಿಸಿದನು.

OBS Image

ಒಂದು ದಿನ, ಏಸಾವನು ಬೇಟೆಯಿಂದ ಹಿಂತಿರುಗಿ ಬಂದಾಗ, ಅವನು ತುಂಬಾ ಹಸಿದವನಾಗಿದ್ದನು. ಏಸಾವನು ಯಾಕೋಬನಿಗೆ, "ದಯಮಾಡಿ ನೀನು ಮಾಡಿದ ಆಹಾರದಲ್ಲಿ ಸ್ವಲ್ಪ ನನಗೆ ಕೊಡು" ಅಂದನು. ಯಾಕೋಬನು, "ನೀನು ಮೊದಲು ಹುಟ್ಟಿರುವ ಕಾರಣ ನಿನಗೆ ದೊರೆಯಬೇಕಾದ ಎಲ್ಲವುಗಳ ಹಕ್ಕನ್ನೂ ನನಗೆ ಕೊಡುವೆನೆಂದು ಮೊದಲಿಗೆ ಮಾತು ಕೊಡು" ಎಂದು ಉತ್ತರಿಸಿದನು. ಆದ್ದರಿಂದ ಏಸಾವನು ಆ ಎಲ್ಲಾ ವಿಷಯಗಳನ್ನು ಯಾಕೋಬನಿಗೆ ಕೊಡುವುದಾಗಿ ಮಾತು ಕೊಟ್ಟನು. ಆಗ ಯಾಕೋಬನು ಅವನಿಗೆ ಸ್ವಲ್ಪ ಆಹಾರವನ್ನು ಕೊಟ್ಟನು.

OBS Image

ಇಸಾಕನು ತನ್ನ ಆಶೀರ್ವಾದವನ್ನು ಏಸಾವನಿಗೆ ಕೊಡಲು ಬಯಸಿದನು. ಆದರೆ ಅವನು ಹಾಗೆ ಮಾಡುವ ಮುನ್ನ, ಯಾಕೋಬನು ಏಸಾವನಾಗಿ ನಟಿಸುವ ಮೂಲಕ ರೆಬೆಕ್ಕಳು ಮತ್ತು ಯಾಕೋಬನು ಅವನನ್ನು ಮೋಸಗೊಳಿಸಿದರು. ಇಸಾಕನು ವೃದ್ಧನು ಮತ್ತು ಕಣ್ಣು ಕಾಣಲಾರದವನು ಆಗಿದ್ದನು. ಆದ್ದರಿಂದ ಯಾಕೋಬನು ಏಸಾವನ ವಸ್ತ್ರಗಳನ್ನು ಧರಿಸಿಕೊಂಡನು ಮತ್ತು ಅವನ ಕುತ್ತಿಗೆ ಹಾಗೂ ಕೈಗಳಿಗೆ ಮೇಕೆಗಳ ಚರ್ಮಗಳನ್ನು ಸುತ್ತಿಕೊಂಡನು.

OBS Image

ಯಾಕೋಬನು ಇಸಾಕನ ಬಳಿಗೆ ಬಂದು, "ನಾನು ಏಸಾವನು, ನೀನು ನನ್ನನ್ನು ಆಶೀರ್ವದಿಸುವಂತೆ ನಾನು ನಿನ್ನ ಬಳಿ ಬಂದಿದ್ದೇನೆ" ಎಂದು ಹೇಳಿದನು. ಇಸಾಕನು ಆಡಿನ ರೋಮವನ್ನು ಮುಟ್ಟಿ ಮತ್ತು ವಸ್ತ್ರಗಳ ವಾಸನೆಯನ್ನು ಮೂಸಿ ನೋಡಿದಾಗ ಅವನು ಅವನನ್ನು ಏಸಾವನೆಂದು ಭಾವಿಸಿದನು ಮತ್ತು ಅವನನ್ನು ಆಶೀರ್ವದಿಸಿದನು.

OBS Image

ಏಸಾವನ್ನು ಯಾಕೋಬನನ್ನು ದ್ವೇಷಿಸುತ್ತಿದ್ದನು ಏಕೆಂದರೆ ಯಾಕೋಬನು ಹಿರಿಯ ಮಗನಿಗಿರುವ ಅವನ ಹಕ್ಕುಗಳನ್ನು ಮತ್ತು ಅವನ ಆಶೀರ್ವಾದವನ್ನು ಕದ್ದುಕೊಂಡಿದ್ದನು. ಆದ್ದರಿಂದ ಏಸಾವನ್ನು ಅವರ ತಂದೆಯು ಮರಣಹೊಂದಿದ ನಂತರ ಯಾಕೋಬನನ್ನು ಕೊಲ್ಲಲು ಯೋಜಿಸಿದ್ದನು.

OBS Image

ಆದರೆ ರೆಬೆಕ್ಕಳು ಏಸಾವನ ಯೋಜನೆಯ ಕುರಿತು ಅರಿತವಳಾದ್ದರಿಂದ ಆಕೆಯು ಮತ್ತು ಇಸಾಕನು ಯಾಕೋಬನನ್ನು ದೂರದಲ್ಲಿದ್ದ ಸಂಬಂಧಿಕರೊಂದಿಗೆ ಜೀವಿಸಲು ಕಳುಹಿಸಿದರು.

OBS Image

ಯಾಕೋಬನು ರೆಬೆಕ್ಕಳ ಸಂಬಂಧಿಕರೊಂದಿಗೆ ಅನೇಕ ವರ್ಷಗಳ ಕಾಲ ವಾಸಿಸಿದ್ದನು. ಆ ಸಮಯದಲ್ಲಿ ಅವನು ವಿವಾಹವಾದನು ಮತ್ತು ಹನ್ನೆರಡು ಗಂಡುಮಕ್ಕಳನ್ನು ಮತ್ತು ಒಬ್ಬಳು ಮಗಳನ್ನು ಪಡೆದನು. ದೇವರು ಅವನನ್ನು ಬಹಳ ಐಶ್ವ್ಸರ್ಯವಂತನನ್ನಾಗಿ ಮಾಡಿದನು.

OBS Image

ಕಾನಾನಿನಲ್ಲಿರುವ ತನ್ನ ಮನೆಯಿಂದ ಇಪ್ಪತ್ತು ವರ್ಷಗಳ ದೂರವಿದ್ದ ತರುವಾಯ ಯಾಕೋಬನು ತನ್ನ ಕುಟುಂಬ, ತನ್ನ ಸೇವಕರು ಮತ್ತು ಪ್ರಾಣಿಗಳ ಎಲ್ಲಾ ಹಿಂಡುಗಳ ಜೊತೆಯಲ್ಲಿ ಹಿಂದಿರುಗಿ ಬಂದನು.

OBS Image

ಯಾಕೋಬನು ಬಹಳ ಭಯವುಳ್ಳವನಾಗಿದ್ದನು ಏಕೆಂದರೆ ಅವನ ಮನಸಿನಲ್ಲಿ ಎಸಾವನು ತನ್ನನ್ನು ಕೊಲ್ಲತಾನೂ ಎಂಬ ಭಯ ಅವನನ್ನು ಕಾಡುತಿತ್ತು. ಆದ್ದರಿಂದ ಅವನು ತನ್ನಲ್ಲಿದ್ದ ಅನೇಕ ಪಶುಗಳನ್ನು, ಹಿಂಡಗಳನ್ನು ಏಸಾವನಿಗೆ ಉಡುಗೊರೆಯಾಗಿ ಕಳುಹಿಸಿದನು. ಪ್ರಾಣಿಗಳನ್ನು ತೆಗೆದುಕೊಂಡು ಬಂದ ಸೇವಕನು ಏಸಾವನಿಗೆ, "ನಿನ್ನ ಸೇವಕನಾದ ಯಾಕೋಬನು ಈ ಪ್ರಾಣಿಗಳನ್ನು ನಿನಗೆ ಉಡುಗೊರೆಯಾಗಿ ಕೊಟ್ಟಿದ್ದಾನೆ, ಅವನು ಶೀಘ್ರದಲ್ಲೇ ಬರಲಿದ್ದಾನೆ" ಎಂಬ ಸುವಾರ್ತೆಯನ್ನು ಹೇಳಿದನು.

OBS Image

ಆದರೆ ಏಸಾವನು ಯಾಕೋಬನಿಗೆ ಇನ್ನೂ ಕೇಡು ಮಾಡಬೇಕೆಂದಿರಲಿಲ್ಲ. ಬದಲಾಗಿ, ಅವನನ್ನು ಮತ್ತೆ ನೋಡಲು ಅವನು ಬಹು ಸಂತೋಷವುಳ್ಳವನಾಗಿದ್ದನು. ನಂತರ ಯಾಕೋಬನು ಕಾನಾನಿನಲ್ಲಿ ಸಮಾಧಾನಕರವಾಗಿ ಜೀವಿಸಿದನು. ಆಗ ಇಸಾಕನು ಸತ್ತುಹೋದನು ಮತ್ತು ಯಾಕೋಬನು ಹಾಗೂ ಏಸಾವನು ಅವನನ್ನು ಹೂಣಿಟ್ಟರು. ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದ್ದ ಒಡಂಬಡಿಕೆಯ ವಾಗ್ದಾನಗಳು ಈಗ ಇಸಾಕನಿಂದ ಯಾಕೋಬನಿಗೆ ವರ್ಗಾಯಿಸಲ್ಪಟ್ಟವು.

ಸತ್ಯವೇದದ ಕಥೆ: ಆದಿಕಾಂಡ 25:27-35:29