kn_obs/content/03.md

11 KiB

3. ಜಲಪ್ರಳಯ

OBS Image

ದೀರ್ಘಕಾಲದ ನಂತರ, ಅನೇಕ ಜನರು ಲೋಕದಲ್ಲಿ ಜೀವಿಸುತ್ತಿದ್ದರು. ಅವರು ಬಹಳ ಕೆಟ್ಟವರು ಮತ್ತು ಹಿಂಸಾತ್ಮಕರು ಆಗಿದ್ದರು. ಅವರ ಕೆಟ್ಟತನದ ನಿಮಿತ್ತ ಇಡೀ ಲೋಕವನ್ನು ದೊಡ್ಡ ಜಲಪ್ರಳಯದಿಂದ ನಾಶಮಾಡಲು ದೇವರು ನಿರ್ಧರಿಸಿದನು.

OBS Image

ಆದರೆ ದೇವರು ನೋಹನಿಗೆ ದಯೆತೋರಿಸಿದನು. ಅವನು ಕೆಟ್ಟ ಜನರ ನಡುವೆ ಜೀವಿಸುತ್ತಿದ್ದರೂ ನೀತಿವಂತನಾದ ವ್ಯಕ್ತಿಯಾಗಿದ್ದನು. ದೇವರು ತಾನು ದೊಡ್ಡ ಜಲಪ್ರಳಯವನ್ನು ಬರಮಾಡುವುದಾಗಿ ದೇವರು ನೋಹನಿಗೆ ಹೇಳಿ ದೊಡ್ಡ ನಾವೆಯನ್ನು ಕಟ್ಟಬೇಕೆಂದು ಹೇಳಿದನು.

OBS Image

140 ಮೀಟರ್ ಉದ್ದ, 23 ಮೀಟರ್ ಅಗಲ, ಮತ್ತು 13.5 ಮೀಟರ್ ಎತ್ತರದ ನಾವೆಯನ್ನು ಕಟ್ಟಲು ದೇವರು ನೋಹನಿಗೆ ಹೇಳಿದನು. ಅದನ್ನು ಮರದಿಂದ ಕಟ್ಟಬೇಕು ಮತ್ತು ಮೂರು ಅಂತಸ್ತುಗಳನ್ನು, ಅದರಲ್ಲಿ ಅನೇಕ ಕೊಠಡಿಗಳನ್ನು, ಛಾವಣಿಯನ್ನು ಮತ್ತು ಕಿಟಕಿಯನ್ನು ಮಾಡಬೇಕು ಎಂದು ನೋಹನಿಗೆ ಹೇಳಲಾಯಿತು. ಅ ನಾವೆ ಜಲಪ್ರಳಯದ ಸಮಯದಲ್ಲಿ ನೋಹನನ್ನು, ಅವನ ಕುಟುಂಬವನ್ನು, ಮತ್ತು ಸಕಲವಿಧವಾದ ಭೂ ಪ್ರಾಣಿಗಳನ್ನು ಸುರಕ್ಷಿತವಾಗಿ ಕಾಪಾಡುವುದುದಾಗಿ ದೇವರು ತಿಳಿಸಿದನು.

OBS Image

ನೋಹನು ದೇವರಿಗೆ ವಿಧೇಯನಾದನು. ಅವನು ಮತ್ತು ಅವನ ಮೂವರು ಮಕ್ಕಳು ದೇವರು ಅವರಿಗೆ ಹೇಳಿದ ರೀತಿಯಲ್ಲಿಯೇ ನಾವೆಯನ್ನು ನಿರ್ಮಿಸಿದರು. ನಾವೆಯನ್ನು ಕಟ್ಟಲು ಅನೇಕ ವರ್ಷಗಳು ಬೇಕಾಯಿತು, ಏಕೆಂದರೆ ಅದು ತುಂಬಾ ದೊಡ್ಡದಾಗಿತ್ತು. ನೋಹನು ಮುಂಬರುವಂಥ ಜಲಪ್ರಳಯದ ಕುರಿತು ಜನರಿಗೆ ಎಚ್ಚರಿಕೆ ಕೊಟ್ಟನು ಮತ್ತು ದೇವರ ಕಡೆಗೆ ತಿರುಗಿಕೊಳ್ಳಲು ಅವರಿಗೆ ಹೇಳಿದನು, ಆದರೆ ಅವರು ಅವನನ್ನು ನಂಬಲಿಲ್ಲ.

OBS Image

ತಮಗೂ ಮತ್ತು ಪ್ರಾಣಿಗಳಿಗೂ ಬೇಕಾದಷ್ಟು ಆಹಾರವನ್ನು ಸಂಗ್ರಹಿಸಿಕೊಳ್ಳಬೇಕೆಂದು ದೇವರು ನೋಹನಿಗೂ ಮತ್ತು ಅವನ ಕುಟುಂಬದವರಿಗೂ ಆಜ್ಞಾಪಿಸಿದನು. ಎಲ್ಲವೂ ಸಿದ್ಧವಾಗಿದ್ದಾಗ, ದೇವರು ನೋಹನಿಗೆ, ಅವನು, ತನ್ನ ಹೆಂಡತಿಯು, ಮೂವರು ಗಂಡು ಮಕ್ಕಳು ಮತ್ತು ಅವರ ಹೆಂಡತಿಯರು ಅಂದರೆ ಒಟ್ಟು ಎಂಟು ಜನರು ನಾವೆಯೊಳಗೆ ಹೋಗುವಂತೆ ಅಪ್ಪಣೆ ಕೊಟ್ಟನು. .

OBS Image

ಅವುಗಳು ಹಡಗಿನೊಳಗೆ ಹೋಗಿ ಜಲಪ್ರಳಯದ ಸಮಯದಲ್ಲಿ ಸುರಕ್ಷಿತವಾಗಿರುವಂತೆ ದೇವರು ಸಕಲ ಪ್ರಾಣಿಪಕ್ಷಿಗಳಲ್ಲಿ ಒಂದು ಗಂಡು ಮತ್ತು ಒಂದು ಹೆಣ್ಣನ್ನು ನೋಹನ ಬಳಿಗೆ ಕಳುಹಿಸಿದನು. ಯಜ್ಞಕ್ಕಾಗಿ ಬಳಸಬಹುದಾದ ಸಕಲವಿಧವಾದ ಪ್ರಾಣಿಗಳಲ್ಲಿ ಏಳು ಗಂಡು ಮತ್ತು ಏಳು ಹೆಣ್ಣುಗಳನ್ನು ದೇವರು ಕಳುಹಿಸಿದನು. ಅವರೆಲ್ಲರು ಹಡಗಿನಲ್ಲಿರುವಾಗ, ದೇವರೇ ತಾನೇ ನಾವೆಯ ಬಾಗಿಲನ್ನು ಮುಚ್ಚಿದನು.

OBS Image

ತರುವಾಯ ಸತತವಾಗಿ ಮಳೆ ಬರಲು ಪ್ರಾರಂಭವಾಯಿತು. ನಲವತ್ತು ದಿನ ಹಗಲುರಾತ್ರಿ ನಿಲ್ಲದೇ ಮಳೆ ಸುರಿಯಿತು! ಭೂಮಿಯಿಂದಲೂ ಕೂಡ ನೀರು ನುಗ್ಗಿಬಂದಿತು. ಲೋಕಲ್ಲಿರುವ ಎಲ್ಲವು ನೀರಿನಿಂದ ಮುಚ್ಚಲ್ಪಟ್ಟವು, ಅತ್ಯುನ್ನತ ಪರ್ವತಗಳು ಸಹ ಮುಚ್ಚಿಹೋದವು.

OBS Image

ಹಡಗಿನಲ್ಲಿದ್ದ ಜನರು ಮತ್ತು ಪ್ರಾಣಿಗಳನ್ನು ಹೊರತುಪಡಿಸಿ, ಒಣನೆಲದಲ್ಲಿ ಜೀವಿಸುತ್ತಿದ್ದ ಎಲ್ಲವು ಸತ್ತುಹೋದವು. ನಾವೆ ನೀರಿನ ಮೇಲೆ ತೇಲಲು ಪ್ರಾರಂಭಿಸಿತು, ಆದರೂ ಮುಳುಗಲಿಲ್ಲ. ನಾವೆಯ ಒಳಗಿರುವುದೆಲ್ಲವನ್ನು ಎಲ್ಲವನ್ನೂ ಸುರಕ್ಷಿತವಾಗಿರಿಸಿತು.

OBS Image

ಮಳೆಯು ನಿಂತ ನಂತರ, ಹಡಗು ಐದು ತಿಂಗಳ ಕಾಲ ನೀರಿನ ಮೇಲೆ ತೇಲಾಡುತ್ತಿತ್ತು, ಮತ್ತು ಈ ಸಮಯದಲ್ಲಿ ನೀರು ತಗ್ಗಲು ಆರಂಭಿಸಿತು. ನಂತರ ಒಂದು ದಿನ ಹಡಗು ಬೆಟ್ಟದ ತುದಿಯಲ್ಲಿ ನಿಂತಿತು, ಆದರೆ ಲೋಕವು ಇನ್ನೂ ನೀರಿನಿಂದ ಮುಚ್ಚಲ್ಪಟ್ಟಿತು. ಮೂರು ತಿಂಗಳುಗಳ ನಂತರ, ಬೆಟ್ಟಗಳ ಶಿಖರಗಳು ಕಾಣಿಸಲಾರಂಭಿಸಿದವು.

OBS Image

ನಲವತ್ತು ದಿನಗಳ ನಂತರ, ನೀರು ಒಣಗಿದೆಯೇ ಎಂದು ನೋಡಲು ನೋಹನು ಕಾಗೆಯನ್ನು ಕಳುಹಿಸಿದನು. ಕಾಗೆಯು ಒಣನೆಲವನ್ನು ಹುಡುಕುತ್ತಾ ಹೋಗುತ್ತಾ ಬರುತ್ತಾ ಇತ್ತು, ಆದರೆ ಅದಕ್ಕೆ ಏನೂ ಸಿಗಲಿಲ್ಲ.

OBS Image

ನಂತರ ನೋಹನು ಒಂದು ಪಾರಿವಾಳವನ್ನು ಕಳುಹಿಸಿದನು. ಆದರೆ ಇದಕ್ಕೂ ಯಾವುದೇ ಒಣನೆಲವು ಸಿಗಲಿಲ್ಲ, ಆದ್ದರಿಂದ ಅದು ನೋಹನ ಬಳಿಗೆ ಹಿಂತಿರುಗಿ ಬಂತು. ಒಂದು ವಾರದ ನಂತರ ಆತ ಮತ್ತೆ ಪಾರಿವಾಳವನ್ನು ಕಳುಹಿಸಿದನು, ಮತ್ತು ಅದು ಅದರ ಕೊಕ್ಕಿನಲ್ಲಿ ಎಣ್ಣೆ ಮರದ ಚಿಗುರನ್ನು ತೆಗೆದುಕೊಂಡು ಹಿಂತಿರುಗಿ ಬಂತು! ನೀರು ತಗ್ಗುತ್ತಾ ಬಂತು ಮತ್ತು ಗಿಡಮರಗಳು ಮತ್ತೆ ಬೆಳೆಯಲರಂಭಿಸಿದವು!

OBS Image

ನೋಹನು ಮತ್ತೊಂದು ವಾರ ಕಾದನು ಮತ್ತು ಪಾರಿವಾಳವನ್ನು ಮೂರನೇ ಬಾರಿಗೆ ಕಳುಹಿಸಿದನು. ಈ ಸಮಯದಲ್ಲಿ, ಅದು ಇಳಿದುಕೊಳ್ಳಲು ಸ್ಥಳವನ್ನು ಕಂಡುಕೊಂಡಿತು ಮತ್ತು ಹಿಂತಿರುಗಿ ಬರಲಿಲ್ಲ. ಭೂಮಿ ಮೇಲಿನ ನೀರು ಒಣಗುತ್ತಿತ್ತು!

OBS Image

ಎರಡು ತಿಂಗಳುಗಳ ನಂತರ ದೇವರು ನೋಹನಿಗೆ, "ನೀನು ಮತ್ತು ನಿನ್ನ ಕುಟುಂಬ ಮತ್ತು ಎಲ್ಲಾ ಪ್ರಾಣಿಗಳು ಈಗ ಹಡಗನ್ನು ಬಿಟ್ಟು ಹೋಗಬಹುದು, ನೀವು ಅನೇಕ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಪಡೆದುಕೊಳ್ಳಿರಿ ಮತ್ತು ಭೂಮಿಯು ತುಂಬಿಕೊಳ್ಳಿರಿ" ಎಂದು ಹೇಳಿದನು. ಆದ್ದರಿಂದ ನೋಹನೂ ಅವನ ಕುಟುಂಬವೂ ನಾವೆಯಿಂದ ಹೊರಬಂದರು.

OBS Image

ನೋಹನು ಹಡಗನ್ನು ಬಿಟ್ಟು ಹೊರಬಂದ ನಂತರ, ಅವನು ಒಂದು ಯಜ್ಞವೇದಿಯನ್ನು ಕಟ್ಟಿದನು ಮತ್ತು ಯಜ್ಞಕ್ಕಾಗಿ ಬಳಸಬಹುದಾದ ಸಕಲವಿಧವಾದ ಪ್ರಾಣಿಗಳಲ್ಲಿ ಕೆಲವನ್ನು ಯಜ್ಞಮಾಡಿದನು. ದೇವರು ಆ ಯಜ್ಞದಲ್ಲಿ ಸಂತೋಷಿಸಿದನು ಮತ್ತು ನೋಹನನ್ನು ಮತ್ತು ಅವನ ಕುಟುಂಬವನ್ನು ಆಶೀರ್ವದಿಸಿದನು.

OBS Image

ಆಗ ದೇವರು, "ಜನರು ಚಿಕ್ಕಂದಿನಿಂದಲೇ ಪಾಪಿಷ್ಠರಾಗಿದ್ದರೂ, ನಾನು ಜನರು ಮಾಡುವ ಕೆಟ್ಟ ಕಾರ್ಯಗಳ ನಿಮಿತ್ತ ಭೂಮಿಯನ್ನು ಎಂದಿಗೂ ಪುನಃ ಶಪಿಸುವುದಿಲ್ಲ ಅಥವಾ ಜಲಪ್ರಳಯವನ್ನು ಉಂಟುಮಾಡುವ ಮೂಲಕ ಪ್ರಪಂಚವನ್ನು ನಾಶಮಾಡುವುದಿಲ್ಲ ಎಂದು ನಾನು ವಾಗ್ದಾನ ಮಾಡುತ್ತೇನೆ" ಎಂದು ದೇವರು ಹೇಳಿದನು.

OBS Image

ದೇವರು ತನ್ನ ವಾಗ್ದಾನದ ಗುರುತಾಗಿ ಮೊದಲ ಮಳೆಬಿಲ್ಲನ್ನು ಉಂಟುಮಾಡಿದನು. ಪ್ರತಿ ಬಾರಿ ಮಳೆಬಿಲ್ಲು ಆಕಾಶದಲ್ಲಿ ಕಾಣಿಸಿಕೊಂಡಾಗ, ದೇವರು ತಾನು ವಾಗ್ದಾನ ಮಾಡಿದದ್ದನ್ನು ನೆನಪಿಸಿಕೊಳ್ಳುತ್ತಾನೆ ಮತ್ತು ಅವನ ಜನರು ಹಾಗೆಯೇ ನೆನಪಿಸಿಕೊಳ್ಳುತ್ತಾರೆ.

ಸತ್ಯವೇದದ ಕಥೆ: ಆದಿಕಾಂಡ 6-8