kn_obs-tn/content/50/17.md

2.1 KiB

ಕಣ್ಣೀರನ್ನೆಲ್ಲಾ ಒರೆಸಿಬಿಡುವನು

ಇದನ್ನು "ನಮ್ಮ ಎಲ್ಲಾ ದುಃಖಕ್ಕೆ ಅಂತ್ಯವನ್ನುಂಟು ಮಾಡುತ್ತಾನೆ" ಅಥವಾ "ಉಪದ್ರವವನ್ನು ಕೊನೆಗೊಳಿಸುವನು" ಅಥವಾ "ಜನರಿಗಿರುವ ದುಃಖವನ್ನು ಪ್ರೀತಿಯಿಂದ ನಿವಾರಿಸುವನು" ಎಂದು ಅನುವಾದಿಸಬಹುದು.

ಕಷ್ಟ, ದುಃಖ, ಗೋಳಾಟ, ಕೆಟ್ಟತನ, ನೋವು, ಅಥವಾ ಸಾವು ಇನ್ನೂ ಇರುವುದಿಲ್ಲ

"ಜನರು ಕಷ್ಟವನ್ನು ಅನುಭವಿಸುವುದಿಲ್ಲ, ದುಃಖದಿಂದಿರುವುದಿಲ್ಲ, ಗೋಳಾಡುವುದಿಲ್ಲ, ಕೆಟ್ಟ ಕಾರ್ಯವನ್ನು ಮಾಡುವುದಿಲ್ಲ, ನೋವವನ್ನು ಅನುಭವಿಸುವುದಿಲ್ಲ, ಅಥವಾ ಸಾಯುವುದಿಲ್ಲ" ಎಂದು ಇದನ್ನು ಅನುವಾದಿಸಬಹುದು.

ಶಾಂತಿ ಮತ್ತು ನೀತಿಯಿಂದ ತನ್ನ ರಾಜ್ಯವನ್ನು ಆಳುವನು

ಇದನ್ನು "ಆತನು ತನ್ನ ಜನರನ್ನು ನ್ಯಾಯಯುತವಾದ ರೀತಿಯಲ್ಲಿ, ಅವರಿಗೆ ಶಾಂತಿಯನ್ನು ಉಂಟುಮಾಡುವ ರೀತಿಯಲ್ಲಿ ಆಳ್ವಿಕೆ ಮಾಡುವನು" ಎಂದು ಅನುವಾದಿಸಬಹುದು.

ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ಭಿನ್ನವಾಗಿರುತ್ತವೆ.

ಅನುವಾದದ ಪದಗಳು