kn_obs-tn/content/49/12.md

2.1 KiB

ಒಳ್ಳೆಯ ಕ್ರಿಯೆಗಳು ನಿಮ್ಮನ್ನು ರಕ್ಷಿಸಲು ಸಾಧ್ಯವಿಲ್ಲ

ಅಂದರೆ, "ಒಳ್ಳೆಯ ಕ್ರಿಯೆಗಳನ್ನು ಮಾಡುವಂಥದ್ದು ನಿಮ್ಮ ಪಾಪಗಳಿಂದ ನಿಮ್ಮನ್ನು ರಕ್ಷಿಸಲು ಸಾಧ್ಯವಾಗುವುದಿಲ್ಲ" ಅಥವಾ "ನಿಮ್ಮ ಪಾಪಗಳ ದಂಡನೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳುವಂತೆ ನೀವು ಮಾಡಬೇಕಾದ ಯಾವ ಒಳ್ಳೆಯ ಕ್ರಿಯೆಯು ಇಲ್ಲ."

ನಿಮ್ಮ ಪಾಪಗಳನ್ನು ತೊಳೆದುಬಿಡುವನು

ಅಂದರೆ, "ನಿಮ್ಮ ಪಾಪಗಳನ್ನು ಸಂಪೂರ್ಣವಾಗಿ ನಿವಾರಿಸುವನು" ಅಥವಾ "ನಿಮ್ಮ ಪಾಪಗಳನ್ನು ನಿವಾರಿಸಿ ನಿಮ್ಮನ್ನು ಶುದ್ಧೀಕರಿಸುವನು." ಅವರ ಪಾಪಗಳನ್ನು ಸಂಪೂರ್ಣವಾಗಿ ತೆಗೆದುಹಾಕುವುದರ ಮೂಲಕ ದೇವರು ಅವರ ಆತ್ಮದಲ್ಲಿ ಶುದ್ಧೀಕರಣವನ್ನು ಮಾಡುವುದರ ಬಗ್ಗೆ ಇದು ಮಾತಾಡುತ್ತಿದೆ. ಇದು ಶಾರೀರಿಕ ಶುದ್ದೀಕರಣವಲ್ಲ.

ನಿಮಗೆ ಬದಲಾಗಿ

ಅಂದರೆ, "ನಿಮ್ಮ ಸ್ಥಾನದಲ್ಲಿ."

ಆತನನ್ನು ಮತ್ತೆ ಜೀವದಿಂದ ಎಬ್ಬಿಸಿದನು

ಇದನ್ನು "ಆತನನ್ನು ಮತ್ತೆ ಜೀವಿಸುವಂತೆ ಮಾಡಿದನು" ಎಂದು ಅನುವಾದಿಸಬಹುದು.

ಅನುವಾದದ ಪದಗಳು