kn_obs-tn/content/48/10.md

2.2 KiB

ನಮ್ಮ ಪಸ್ಕದ ಕುರಿಮರಿ

ಅಂದರೆ, "ನಮಗೆ ಕೊಲ್ಲಲ್ಪಟ್ಟ ಪಸ್ಕದ ಕುರಿಮರಿ" ಅಥವಾ "ದೇವರು ನಮ್ಮನ್ನು ದಾಟಿಹೋಗುವಂತೆ ಕೊಲ್ಲಲ್ಪಟ್ಟ ಕುರಿಮರಿ" ಅಥವಾ "ದೇವರು ನಮ್ಮನ್ನು ಕಾಪಾಡುವಂತೆ ಕುರಿಮರಿಯು ಕೊಲ್ಲಲ್ಪಟ್ಟಿತು."

ಪಾಪರಹಿತ

ಇದನ್ನು "ಪಾಪ ಮಾಡದ" ಎಂದು ಅನುವಾದಿಸಬಹುದು.

ಯೇಸುವಿನ ರಕ್ತ

"ಆತನು ಪಾಪಿಗಳಿಗಾಗಿ ಸತ್ತಾಗ ಯೇಸು ತನ್ನನ್ನೇ ಯಜ್ಞವಾಗಿ ಅರ್ಪಿಸಿದನು" ಎಂದು ಇದನ್ನು ಅನುವಾದಿಸಬಹುದು. ಇಲ್ಲಿರುವ "ರಕ್ತ" ಎಂಬ ಪದವು "ಮರಣ" ಎಂದರ್ಥವನ್ನು ಕೊಡುತ್ತದೆ.

ದೇವರ ಶಿಕ್ಷೆಯು ಆ ವ್ಯಕ್ತಿಯನ್ನು ದಾಟಿಹೋಗುತ್ತದೆ

"ದೇವರು ಆ ವ್ಯಕ್ತಿಯನ್ನು ಶಿಕ್ಷಿಸುವುದಿಲ್ಲ" ಎಂಬುದು ಈ ಹೇಳಿಕೆಯ ಅರ್ಥವಾಗಿದೆ. "ಪಸ್ಕ" ಮತ್ತು "ಪಸ್ಕದ ಕುರಿಮರಿ" ಎಂಬ ಪದಗಳೊಂದಿಗಿನ ಅದರ ಸಂಬಂಧವನ್ನು ತೋರಿಸುವಂಥ ನುಡಿಗಟ್ಟನ್ನು ಬಳಸಿ ಇದನ್ನು ಭಾಷಾಂತರಿಸಿರಿ. ಪಸ್ಕದ ಹೆಸರಿಗೆ ಬದಲಾಗಿ "ಕಾಪಾಡು" ಎಂಬ ಪದವನ್ನು ಬಳಸಿದ್ದರೆ, ಇದನ್ನು "ದೇವರು ಆ ವ್ಯಕ್ತಿಯನ್ನು ಶಿಕ್ಷೆಯಿಂದ ಕಾಪಾಡುತ್ತಾನೆ" ಎಂದು ಅನುವಾದಿಸಬಹುದು.

ಅನುವಾದದ ಪದಗಳು