kn_obs-tn/content/46/10.md

2.9 KiB

ಒಂದಾನೊಂದು ದಿನ

ಈ ಪದಗುಚ್ಛವುವು ಹಿಂದೆ ನಡೆದ ಘಟನೆಯನ್ನು ಪರಿಚಯಿಸುತ್ತದೆ, ಆದರೆ ನಿರ್ದಿಷ್ಟವಾದ ಸಮಯವನ್ನು ತಿಳಿಸುವುದಿಲ್ಲ. ಈ ನೈಜ ಕಥೆಯನ್ನು ಬೇರೆ ಭಾಷೆಗಳಲ್ಲಿಯೂ ಇದೇ ರೀತಿಯಲ್ಲಿ ಹೇಳಬಹುದು.

ನನಗಾಗಿ ಪ್ರತ್ಯೇಕಿಸಿರಿ ...

ಈ ವಾಕ್ಯವನ್ನು, "ಪೌಲ ಮತ್ತು ಬಾರ್ನಬರು ಮಾಡಬೇಕೆಂದು ನಾನು ನಿರ್ಧರಿಸುವ ವಿಶೇಷ ಕೆಲಸಕ್ಕಾಗಿ ಅವರನ್ನು ನೇಮಿಸಿರಿ" ಎಂದು ಸಹ ಅನುವಾದಿಸಬಹುದು.

ಸಭೆ

ಇದನ್ನು "ವಿಶ್ವಾಸಿಗಳು" ಅಥವಾ "ಕ್ರೈಸ್ತರು" ಎಂದು ಸಹ ಅನುವಾದಿಸಬಹುದು.

ಅವರ ಮೇಲೆ ತಮ್ಮ ಕೈಗಳನ್ನು ಇಟ್ಟರು

"ಅವರು ತಮ್ಮ ಕೈಗಳನ್ನು ಅವರ ಮೇಲೆ ಇಡುವುದರ ಮೂಲಕ ಪವಿತ್ರಾತ್ಮನ ಶಕ್ತಿಯಿಂದ ಮತ್ತು ಅಧಿಕಾರದಿಂದ ಅವರನ್ನು ಆಶೀರ್ವದಿಸಿದರು" ಅಥವಾ "ಆತ್ಮದಲ್ಲಿರುವ ಅವರ ಐಕ್ಯತೆಯ ಸಂಕೇತವಾಗಿ ಅವರು ತಮ್ಮ ಕೈಗಳನ್ನು ಅವರ ಮೇಲೆ ಇಟ್ಟರು" ಎಂದು ಇದನ್ನು ಅನುವಾದಿಸಬಹುದು. ಕೆಲವು ಭಾಷೆಗಳಲ್ಲಿ ಅವರು ತಮ್ಮ ಕೈಗಳನ್ನು ಎಲ್ಲಿ ಇಟ್ಟರು ಎಂದು ಹೇಳಬೇಕಾಗಬಹುದು. ಹಾಗಿದ್ದಲ್ಲಿ, ಅವರು ತಮ್ಮ ಕೈಗಳನ್ನು ಅವರ ತಲೆ, ಭುಜ ಅಥವಾ ಬೆನ್ನಿನ ಮೇಲೆ ಇಟ್ಟರು ಎಂದು ನೀವು ಹೇಳಬಹುದು.

ಅವರನ್ನು ಕಳುಹಿಸಿಕೊಟ್ಟರು

ಅಂದರೆ, "ಅವರನ್ನು ಕಳುಹಿಸಿದರು" ಅಥವಾ "ಅವರನ್ನು ಪ್ರಯಾಣವಾಗಿ ಕಳುಹಿಸಿಕೊಟ್ಟರು."

ಇದೊಂದು ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ಭಿನ್ನವಾಗಿರುತ್ತವೆ.

ಅನುವಾದದ ಪದಗಳು