kn_obs-tn/content/44/09.md

2.1 KiB

ಬೆರಗಾದರು

ಅಂದರೆ, "ಬಹಳ ಆಶ್ಚರ್ಯಪಟ್ಟರು" ಅಥವಾ "ಆಶ್ಚರ್ಯಚಕಿತರಾದರು."

ಸಾಮಾನ್ಯವಾದ

ಅಂದರೆ, "ಸಾಧಾರಣವಾದ" ಅಥವಾ "ಕೆಳವರ್ಗದವರು." ಪೇತ್ರ ಮತ್ತು ಯೋಹಾನರು ಕೇವಲ ಬೆಸ್ತರಾಗಿದ್ದರು.

ಅವಿದ್ಯಾವಂತರಾಗಿದ್ದವರು

ಅಂದರೆ, "ವಿದ್ಯಾಭ್ಯಾಸವಿಲ್ಲದವರು." ಇದನ್ನು "ಧಾರ್ಮಿಕ ಶಾಲೆಗೆ ಹೋಗದವರು" ಎಂದು ಅನುವಾದಿಸಬಹುದು.

ಆಗ ಅವರು ನೆನಪಿಸಿಕೊಂಡರು

ಇದನ್ನು, "ಆದರೆ ಅನಂತರ ಅವರು ಆ ಸತ್ಯಾಂಶದ ಬಗ್ಗೆ ಯೋಚಿಸಿದರು" ಎಂದು ಅನುವಾದಿಸಬಹುದು.

ಯೇಸುವಿನೊಂದಿಗೆ ಇದ್ದವರು

ಇದನ್ನು "ಯೇಸುವಿನೊಂದಿಗೆ ಸಮಯ ಕಳೆದವರು" ಅಥವಾ "ಯೇಸುವಿನಿಂದ ಕಲಿತವರು" ಎಂದು ಅನುವಾದಿಸಬಹುದು.

ಅವರು ಬೆದರಿಸಿದ ನಂತರ

ಜನರಿಗೆ ಯೇಸುವಿನ ಬಗ್ಗೆ ಬೋಧಿಸುವುದನ್ನು ಮುಂದುವರಿಸಿದರೆ, ಪೇತ್ರ ಮತ್ತು ಯೋಹಾನರನ್ನು ಶಿಕ್ಷಿಸುವೆನೆಂದು ಮುಖಂಡರು ಅವರಿಗೆ ಹೇಳಿದರು.

ಅವರು ಹೋಗಲಿ

ಅಂದರೆ, "ಹೋಗಲು ಅವರನ್ನು ಬಿಡಿರಿ."

ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ಭಿನ್ನವಾಗಿರುತ್ತವೆ.

ಅನುವಾದದ ಪದಗಳು