kn_obs-tn/content/44/05.md

2.3 KiB

ಸಾಮಾನ್ಯ ಮಾಹಿತಿ

ಪೇತ್ರನು ಜನಸಮೂಹಕ್ಕೆ ಬೋಧಿಸುವುದನ್ನು ಮುಂದುವರಿಸಿದನು.

ಜೀವನದ ಕರ್ತೃ

ಅಂದರೆ, "ಜೀವವನ್ನು ಸೃಷ್ಟಿಸಿದವನು" ಅಥವಾ "ನಮಗೆ ಜೀವವನ್ನು ಕೊಡುವವನು" ಅಥವಾ "ಜನರು ಜೀವಿಸುವಂತೆ ಮಾಡುವವನು." ಇದು ಯೇಸುವನ್ನು ಸೂಚಿಸುತ್ತದೆ.

ನಿಮ್ಮ ಕೃತ್ಯಗಳು

ಇದನ್ನು "ನೀವು ಮಾಡಿದ ಕೃತ್ಯಗಳು" ಎಂದು ಸಹ ಅನುವಾದಿಸಬಹುದು. ಯೇಸುವನ್ನು ಕೊಲ್ಲಬೇಕೆಂದು ಅವರು ಪಿಲಾತನನ್ನು ಕೇಳಿಕೊಂಡದ್ದನ್ನು ಇದು ಸೂಚಿಸುತ್ತದೆ.

ದೇವರ ಕಡೆಗೆ ತಿರುಗಿಕೊಳ್ಳಿರಿ

ಅಂದರೆ, "ದೇವರಿಗೆ ವಿಧೇಯರಾಗಲು ನಿರ್ಧರಿಸಿರಿ."

ನಿಮ್ಮ ಪಾಪವನ್ನು ಅಳಿಸಿಬಿಡುತ್ತಾನೆ

"ದೇವರು ನಿಮ್ಮ ಪಾಪಗಳನ್ನು ತೊಳೆದುಬಿಡುತ್ತಾನೆ" ಅಥವಾ "ದೇವರು ನಿಮ್ಮ ಪಾಪಗಳನ್ನು ತೆಗೆದುಹಾಕಿ ನಿಮ್ಮನ್ನು ಶುದ್ಧೀಕರಿಸುವನು" ಎಂದು ಅನುವಾದಿಸಬಹುದು. ಅವರ ಪಾಪಗಳನ್ನು ಸಂಪೂರ್ಣವಾಗಿ ನಿವಾರಿಸುವುದರ ಮೂಲಕ ದೇವರು ಜನರನ್ನು ಅವರ ಆತ್ಮದಲ್ಲಿ ಶುದ್ಧೀಕರಿಸುವುದರ ಬಗ್ಗೆ ಇದು ಮಾತಾಡುತ್ತಿದೆ. ಇದು ಶಾರೀರಿಕ ಶುದ್ಧೀಕರಣವಲ್ಲ.

ಅನುವಾದದ ಪದಗಳು