kn_obs-tn/content/43/11.md

2.1 KiB

ಹೆಸರಿನಲ್ಲಿ

ಈ ಪದಕ್ಕೆ "ಅಧಿಕಾರದಿಂದ" ಮತ್ತು "ಅಧಿಕಾರದ ಅಡಿಯಲ್ಲಿ" ಎಂಬ ಎರಡೆರಡು ಅರ್ಥವಿದೆ. ನಿಮ್ಮ ಭಾಷೆಯಲ್ಲಿ ಈ ರೀತಿಯಾದ ಅರ್ಥವಿರುವುದಾದರೆ "ಹೆಸರು" ಎಂಬ ಪದವನ್ನು ಅಕ್ಷರಶಃವಾಗಿ ಅನುವಾದಿಸುವುದಾಗಿ ಪರಿಗಣಿಸಿರಿ.

ಕ್ರಿಸ್ತನು

"ಮೆಸ್ಸೀಯ" ಎಂಬ ಪದಕ್ಕಿರುವ ಅದೇ ಅರ್ಥವು ಇದರ ಅರ್ಥವಾಗಿದೆ. ಇದನ್ನು "ಅಭಿಷಕ್ತನು" ಅಥವಾ "ಆರಿಸಿಕೊಳ್ಳಲ್ಪಟ್ಟವನು" ಎಂದು ಅನುವಾದಿಸಬಹುದು. ಇದರ ಅರ್ಥವನ್ನು ಅನುವಾದಿಸುವುದಕ್ಕೆ ಬದಲಾಗಿ, ಕೆಲವು ಭಾಷಾಂತರಕಾರರು "ಕ್ರಿಸ್ತ" ಎಂಬ ಪದವನ್ನು ಹಾಗೆಯೇ ಇಟ್ಟುಕೊಳ್ಳಲು ನಿರ್ಧರಿಸುತ್ತಾರೆ ಮತ್ತು ಅವರ ಸ್ವಂತ ಭಾಷೆಯಲ್ಲಿರುವ ಪದಗಳನ್ನು ಉಪಯೋಗಿಸಿಕೊಂಡು ಅದನ್ನು ಉಚ್ಚರಿಸುತ್ತಾರೆ

ಯೇಸು ಕ್ರಿಸ್ತನು

ಇಲ್ಲಿ "ಕ್ರಿಸ್ತನು" ಎಂಬುದು ಶಿರೋನಾಮೆಯಾಗಿರುವ ಕಾರಣ, ಕೆಲವು ಭಾಷಾಂತರಕಾರರು "ಕ್ರಿಸ್ತ ಯೇಸು" ಎಂದು ಅನುಕ್ರಮವನ್ನು ಬದಲಿಸಲು ನಿರ್ಧರಿಸಬಹುದು. ಎರಡೂ ಅನುಕ್ರಮಗಳನ್ನು ಸತ್ಯವೇದದಲ್ಲಿ ಬಳಸಲಾಗಿದೆ.

ಅನುವಾದದ ಪದಗಳು