kn_obs-tn/content/43/07.md

2.5 KiB

ಸಾಮಾನ್ಯ ಮಾಹಿತಿ

ಪೇತ್ರನು ಜನಸಮೂಹಕ್ಕೆ ಉಪದೇಶ ಮಾಡುವುದನ್ನು ಮುಂದುವರಿಸಿದನು.

ಇದು …ಎಂದು ಹೇಳುವ ಪ್ರವಾದನೆಯನ್ನು ನೆರವೇರಿಸುತ್ತದೆ

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಭಾಷಾಂತರಿಸಬಹುದು, "ಪ್ರವಾದಿಗಳಲ್ಲಿ ಒಬ್ಬನು ಬಹಳ ಕಾಲದ ಹಿಂದೆಯೇ ಹೇಳಿದ್ದು ಸಂಭವಿಸುವಂತೆ ಇದು ಮಾಡಿತ್ತು."

ನೀನು ನಿನ್ನ… ಬಿಡುವುದಿಲ್ಲ

"ನೀನು" ಮತ್ತು "ನಿನ್ನ" ಎಂಬುದು ತಂದೆಯಾದ ದೇವರನ್ನು ಎಂದು ಸೂಚಿಸುತ್ತದೆ. ಅದನ್ನು ಸ್ಪಷ್ಟಪಡಿಸಲು, ಇದನ್ನು " ದೇವರೇ ನೀನು, ನಿನ್ನ… ಬಿಡಿಸುವುದಿಲ್ಲ" ಎಂದು ಅನುವಾದಿಸಬಹುದು. ಕೆಲವು ಭಾಷೆಗಳಲ್ಲಿ ಯಾರನ್ನಾದರೂ ಸಂಭೋಧಿಸುವುದಕ್ಕಾಗಿ ವಿಶೇಷವಾದ ರೀತಿಗಳು ಇರುತ್ತವೆ, ಉದಾಹರಣೆಗೆ "ಓ, ದೇವರೇ."

ಸಮಾಧಿಯಲ್ಲಿ ಕೊಳೆಯಲು

ಅಂದರೆ, "ಸಮಾಧಿಯಲ್ಲಿ ನಶಿಸಲು" ಅಥವಾ "ಸಮಾಧಿಯಲ್ಲಿ ಕ್ಷಯಿಸಲು." ಯೇಸು ಸಮಾಧಿಯಲ್ಲಿ ಧೀರ್ಘ ಕಾಲ ಇರಲಿಲ್ಲ ಎಂಬ ಸತ್ಯಾಂಶವನ್ನು ಇದು ಸೂಚಿಸುತ್ತದೆ ಮತ್ತು ಇದು ಆತನು ಸತ್ತವನಾಗಿಯೇ ಇದ್ದುಬಿಡಲಿಲ್ಲ, ಆದರೆ ಮತ್ತೇ ಜೀವದಿಂದ ಎದ್ದುಬಂದನು ಎಂದು ಹೇಳುವುದರ ಬೇರೊಂದು ರೀತಿಯಾಗಿದೆ.

ಯೇಸು ಮತ್ತೇ ಜೀವದಿಂದ ಎದ್ದುಬಂದನು

ಅಂದರೆ, "ಮತ್ತೆ ಯೇಸು ಜೀವಿಸುವಂತೆ ಮಾಡಿದನು." ಆನುವಾದದ ಪದಗಳು