kn_obs-tn/content/43/06.md

2.2 KiB

ಸಾಮಾನ್ಯ ಮಾಹಿತಿ

ಪೇತ್ರನು ಜನಸಮೂಹಕ್ಕೆ ಉಪದೇಶ ಮಾಡುವುದನ್ನು ಮುಂದುವರಿಸಿದನು.

ಇಸ್ರಾಯೇಲ್ ಪುರುಷರು

ಕೆಲವು ಭಾಷೆಗಳಲ್ಲಿ, "ಇಸ್ರಾಯೇಲ್ ಜನರು" ಎಂದು ಹೇಳುವುದು ಉತ್ತಮವಾಗಿರುತ್ತದೆ, ಏಕೆಂದರೆ ಇದು ಪುರುಷರನ್ನು ಮತ್ತು ಸ್ತ್ರೀಯರನ್ನು ಒಳಗೊಂಡಿರುತ್ತದೆ. ಪೇತ್ರನು ಯೆಹೂದ್ಯನಾಗಿದ್ದಾನೆ "ಇಸ್ರಾಯೇಲ್ ಜನರಿಗೆ" ಸೇರಿದವನಾಗಿದ್ದಾನೆ ಎಂದು ಸ್ಪಷ್ಟಪಡಿಸಲು, ಇದನ್ನು "ನನ್ನ ಜೊತೆಗಾರರಾದ ಇಸ್ರಾಯೇಲ್ ಜನರೇ" ಅಥವಾ "ನನ್ನ ಜೊತೆಗಾರರಾದ ಯೆಹೂದ್ಯರೇ" ಎಂದು ಸಹ ಅನುವಾದಿಸಬಹುದು.

ನೀವು ಆತನನ್ನು ಶಿಲುಬೆಗೇರಿಸಿದ್ದೀರಿ!

ಇದನ್ನು "ನೀವು ಆತನನ್ನು ಶಿಲುಬೆಗೇರಿಸುವಂತೆ ಮಾಡಿದ್ದೀರಿ" ಎಂದು ಅನುವಾದಿಸಬಹುದು ಅಥವಾ "ನಿಮ್ಮ ನಿಮಿತ್ತ ಆತನು ಶಿಲುಬೆಗೇರಿಸಲ್ಪಟ್ಟನು" ಎಂದು ಅನುವಾದಿಸಬಹುದು. ವಾಸ್ತವವಾಗಿ ಯೆಹೂದ್ಯರು ಯೇಸುವನ್ನು ಶಿಲುಬೆಗೆ ಜಡಿಯಲಿಲ್ಲ. ಆದಾಗ್ಯೂ, ಯೆಹೂದ್ಯ ಮುಖಂಡರು ಆತನಿಗೆ ಮರಣದಂಡನೆ ಉಂಟಾಗಬೇಕೆಂದು ಹೇಳಿದರು ಮತ್ತು ಜನಸಮೂಹದಲ್ಲಿದ್ದ ಅನೇಕರು ಆತನನ್ನು ಶಿಲುಬೆಗೇರಿಸುವಂತೆ ಕೂಗಿದರು.

ಅನುವಾದದ ಪದಗಳು