kn_obs-tn/content/43/02.md

1.9 KiB

ಪಂಚಾಶತ್ತಮ ದಿನ

"ಪಂಚಾಶತ್ತಮ" ಎಂದರೆ "ಐವತ್ತನೆಯ (ದಿನ)." ನಿಮ್ಮ ಭಾಷಾಂತರದಲ್ಲಿ "ಪಂಚಾಶತ್ತಮ/ಪೆಂಟೆಕೋಸ್ಟ್" ಎಂಬ ಪದವನ್ನು ನೀವು ಬಳಸಬಹುದು ಮತ್ತು ವಾಕ್ಯಭಾಗವು ಅರ್ಥವನ್ನು ವಿವರಿಸಲಿ. ಅಥವಾ ನೀವು "50 ನೇ ದಿನ" ಎಂಬ ಅರ್ಥವುಳ್ಳ ಪದವನ್ನು ಬಳಸಬಹುದು.

ಗೋಧಿಯ ಸುಗ್ಗಿಹಬ್ಬವನ್ನು ಆಚರಿಸಿದರು

ಯೆಹೂದ್ಯರು ಕಾಣಿಕೆಗಳನ್ನು ತರುವುದರ ಮೂಲಕ ಗೋಧಿಯ ಸುಗ್ಗಿಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದರು ಮತ್ತು ವಿಶೇಷ ಭೋಜನಗಳನ್ನು ಮಾಡುವುದರ ಮೂಲಕ ಅದನ್ನು ಆಚರಿಸುತ್ತಿದ್ದರು. ಗೋಧಿಯು ಒಂದು ವಿಧವಾದ ಧಾನ್ಯ ಬೆಳೆಯಾಗಿದೆ; "ಗೋಧಿ" ಎಂಬ ಅರ್ಥವುಳ್ಳ ಪದವು ನಿಮ್ಮಲ್ಲಿ ಇರದಿದ್ದರೆ, ನೀವು ಧಾನ್ಯಕ್ಕೆ ಬಳಸುವ ಸಾಮಾನ್ಯವಾದ ಪದವನ್ನು ಬಳಸಬಹುದು. ಇದು ಮೇ ತಿಂಗಳಲ್ಲಿ ನಡೆಯಿತು; ಇತರ ಬೆಳೆಗಳನ್ನು ವರ್ಷದ ಇತರ ಸಮಯಗಳಲ್ಲಿ ಕೊಯ್ಲು ಮಾಡಲಾಗುತ್ತಿತ್ತು.

ಈ ವರ್ಷ

ಅಂದರೆ, "ಯೇಸು ಸತ್ತ ವರ್ಷದಲ್ಲಿ."

ಅನುವಾದದ ಪದಗಳು