kn_obs-tn/content/42/10.md

2.2 KiB

ಪರಲೋಕದಲ್ಲಿ ಮತ್ತು ಭೂಲೋಕದಲ್ಲಿ ಇರುವ ಸಕಲ ಅಧಿಕಾರವು ನನಗೆ ಕೊಡಲ್ಪಟ್ಟಿದೆ

"ದೇವರು ಪರಲೋಕದಲ್ಲಿ ಮತ್ತು ಭೂಲೋಕದಲ್ಲಿ ಇರುವ ಸಕಲ ಅಧಿಕಾರವನ್ನು ನನಗೆ ಕೊಟ್ಟಿದ್ದಾನೆ " ಅಥವಾ "ದೇವರು ಪರಲೋಕದಲ್ಲಿ ಮತ್ತು ಭೂಮಿಯಲ್ಲಿ ಇರುವ ಎಲ್ಲರ ಮೇಲೆ ಸಂಪೂರ್ಣವಾದ ಅಧಿಕಾರವನ್ನು ಕೊಟ್ಟಿದ್ದಾನೆ" ಅಥವಾ "ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ನನಗೆ ಸಕಲ ಅಧಿಕಾರವಿದೆ" ಎಂದು ಅನುವಾದಿಸಬಹುದು.

ಎಲ್ಲಾ ಜನಾಂಗಗಳವರನ್ನು ಶಿಷ್ಯರನ್ನಾಗಿ ಮಾಡಿರಿ

ಅಂದರೆ, "ನನ್ನ ಶಿಷ್ಯರಾಗಲು ಪ್ರತಿಯೊಂದು ಜನಾಂಗದವರಿಗೆ ಸಹಾಯ ಮಾಡಿರಿ."

ಹೆಸರಿನಲ್ಲಿ

ಈ ಪದಕ್ಕೆ , "ಅಧಿಕಾರದಿಂದ" ಮತ್ತು "ಅಧಿಕಾರದ ಅಡಿಯಲ್ಲಿ" ಎಂಬ ಎರಡೆರಡು ಅರ್ಥವಿದೆ. ನಿಮ್ಮ ಭಾಷೆಯಲ್ಲಿ ಈ ರೀತಿಯಾದ ಅರ್ಥವಿರುವುದಾದರೆ "ಹೆಸರು" ಎಂಬ ಪದವನ್ನು ಅಕ್ಷರಶಃವಾಗಿ ಅನುವಾದಿಸುವುದಾಗಿ ಪರಿಗಣಿಸಿರಿ. ಈ ಪದವನ್ನು "ತಂದೆಯ ಹೆಸರಿನಲ್ಲಿ, ಮಗನ ಹೆಸರಿನಲ್ಲಿ, ಮತ್ತು ಪವಿತ್ರಾತ್ಮನ ಹೆಸರಿನಲ್ಲಿ" ಎಂದು ಪುನರಾವರ್ತಿಸಬಹುದು.

ಅನುವಾದದ ಪದಗಳು