kn_obs-tn/content/40/04.md

3.4 KiB

ಇಬ್ಬರು ಕಳ್ಳರು

ಇದನ್ನು "ಇಬ್ಬರು ದರೋಡೆಕೋರರು" ಎಂದು ಅನುವಾದಿಸಬಹುದು. ವಸ್ತುಗಳನ್ನು ಕದಿಯಲು ಬಲತ್ಕಾರ ಮಾಡುತ್ತಿದ್ದ ಅಥವಾ ಹಿಂಸಿಸುತ್ತಿದ್ದ ಅಪರಾಧಿಗಳನ್ನು ಇದು ಸೂಚಿಸುತ್ತದೆ.

ನಿನಗೆ ದೇವರ ಭಯವಿಲ್ಲವೋ?

ಕಳ್ಳನು ಈ ಪ್ರಶ್ನೆಗೆ ಉತ್ತರವನ್ನು ಎದುರುನೋಡಲಿಲ್ಲ; ಕೆಲವು ಭಾಷೆಗಳು ಬಲವಾದ ಹೇಳಿಕೆಯನ್ನು ಮಾಡಲು ಬಳಸುವ ಒಂದು ರೀತಿಯಾಗಿದೆ. ನಿಮ್ಮ ಭಾಷೆಯಲ್ಲಿ ಈ ರೀತಿಯಾಗಿ ಪ್ರಶ್ನೆಗಳನ್ನು ಬಳಸದಿದ್ದರೆ, ಇದನ್ನು "ನೀವು ದೇವರಿಗೆ ಭಯ ಪಡಬೇಕು" ಎಂದು ಅನುವಾದಿಸಿರಿ.

ನಾವು ಅಪರಾಧಿಗಳು ಆದರೆ ಈ ಮನುಷ್ಯನು ನಿರಪರಾಧಿ

ಇದನ್ನು, "ನೀನು ಮತ್ತು ನಾನು ಕೆಟ್ಟ ಕೆಲಸಗಳನ್ನು ಮಾಡಿದ್ದೇವೆ ಮತ್ತು ಮರಣ ಶಿಕ್ಷೆಗೆ ಪಾತ್ರರಾಗಿದ್ದೇವೆ, ಆದರೆ ಈ ಮನುಷ್ಯನಾದ ಯೇಸು, ಯಾವ ತಪ್ಪು ಮಾಡಲಿಲ್ಲ ಮತ್ತು ಮರಣಕ್ಕೆ ಪಾತ್ರನಲ್ಲ" ಎಂದು ಅನುವಾದಿಸಬಹುದು. ಇದರಲ್ಲಿರುವ "ನಾವು" ಎಂಬುದು ಇಬ್ಬರೂ ಕಳ್ಳರನ್ನು ಒಳಗೊಂಡಿದೆ, ಆದರೆ ಯೇಸುವನ್ನು ಒಳಗೊಂಡಿಲ್ಲ.

ಈ ಮನುಷ್ಯ

ಇದು ಯೇಸುವನ್ನು ಸೂಚಿಸುತ್ತದೆ

ದಯಮಾಡಿ ನನ್ನನ್ನು ನೆನಪಿಸಿಕೋ

ಅಂದರೆ, "ದಯವಿಟ್ಟು ನನ್ನನ್ನು ಅಂಗೀಕರಿಸು" ಅಥವಾ "ದಯವಿಟ್ಟು ನನ್ನನ್ನು ಸ್ವೀಕರಿಸು" ಅಥವಾ "ನಾನು ನಿನ್ನೊಂದಿಗೆ ಇರಲು ದಯವಿಟ್ಟು ಅವಕಾಶ ಮಾಡಿಕೊಡು." ಇದರಲ್ಲಿರುವ "ನೆನಪಿಸಿಕೋ" ಎಂಬುದು ಯಾವುದೊಂದನ್ನು ಮರೆತುಹೋದ ಮೇಲೆ ಪುನಃ ಅದನ್ನು ನೆನಪಿಸಿಕೊಳ್ಳುವುದು ಎಂದರ್ಥವಲ್ಲ. ವಿನಮ್ರವಾದ ವಿನಂತಿಯಾಗಿದೆ ಎಂದು ತಿಳಿಸುವ ರೀತಿಯಲ್ಲಿ ಇದನ್ನು ಭಾಷಾಂತರಿಸಿರಿ.

ನಿನ್ನ ರಾಜ್ಯದಲ್ಲಿ

ಅಂದರೆ, "ನೀನು ನಿನ್ನ ರಾಜ್ಯವನ್ನು ಸ್ಥಾಪಿಸುವಾಗ" ಅಥವಾ "ನೀನು ಅರಸನಾಗಿ ಆಳ್ವಿಕೆ ಮಾಡುವಾಗ."

ಪರದೈಸು

ಇದು "ಸ್ವರ್ಗ" ಕ್ಕಿರುವಂಥ ಮತ್ತೊಂದು ಹೆಸರಾಗಿದೆ.

ಅನುವಾದದ ಪದಗಳು