kn_obs-tn/content/40/03.md

1.7 KiB

ಯೇಸುವಿನ ವಸ್ತ್ರಕ್ಕಾಗಿ ಜೂಜಾಡಿದರು

ಅಂದರೆ, "ಯೇಸುವಿನ ವಸ್ತ್ರವನ್ನು ಗೆಲ್ಲಲು ಆದೃಷ್ಟದ ಆಟವನ್ನು ಆಡಿದರು." ಅವರು ಇದನ್ನು ಹೇಗೆ ಮಾಡಿದರು ಎಂದು ನಮಗೆ ಗೊತ್ತಿಲ್ಲ, ಆದರೆ ಕೆಲವು ಸಂಸ್ಕೃತಿಗಳಲ್ಲಿ ಇದನ್ನು "ಯೇಸುವಿನ ವಸ್ತ್ರವನ್ನು ಗೆಲ್ಲಲು ನೆಲದ ಮೇಲೆ ಪಗಡೆಯಂತೆ ಕಲ್ಲುಗಳನ್ನು ಹಾಕಿದರು" ಅಥವಾ "ಯೇಸುವಿನ ಬಟ್ಟೆಗಳನ್ನು ಯಾರು ತೆಗೆದುಕೊಳ್ಳಬಹುದೆಂದು ನಿರ್ಧರಿಸಲು ಚೀಟಿಗಳನ್ನು ಹಾಕಿ ಆರಿಸಿಕೊಂಡರು" ಎಂದು ಅನುವಾದಿಸಬಹುದು.

ಎಂದು ಹೇಳಿದ ಪ್ರವಾದನೆಯನ್ನು ಅವರು ನೆರವೇರಿಸಿದರು

ಅಂದರೆ, "ಮೆಸ್ಸೀಯನಿಗೆ ಏನು ಸಂಭವಿಸುತ್ತದೆಂದು ಬಹಳ ಕಾಲದ ಹಿಂದೆಯೇ ಪವಿತ್ರ ಧರ್ಮಗ್ರಂಥವು ಭವಿಷ್ಯ ನುಡಿದಿತ್ತೋ ಅದನ್ನು ಅವರು ಮಾಡಿದರು" ಅಥವಾ "ಬಹಳ ಕಾಲದ ಹಿಂದೆಯೇ ಪ್ರವಾದಿಗಳು, ಹೇಳಿದಂತೆ, ಬರೆದಿರುವಂತೆ ಅವರು ಮಾಡಿದರು."

ಅನುವಾದದ ಪದಗಳು