kn_obs-tn/content/39/12.md

3.0 KiB

ದಂಗೆ

ಅಂದರೆ, "ಅವರ ಕೋಪದಲ್ಲಿ ಹಿಂಸಾತ್ಮಕ ಕಾರ್ಯಗಳನ್ನು ಮಾಡಲು ತೊಡಗುವುದು."

ಅವನು ಮಾಡಲು ಒಪ್ಪಿಕೊಂಡನು

ಪಿಲಾತನು ಯೇಸುವನ್ನು ಕೊಲ್ಲಲು ಬಯಸಲಿಲ್ಲ ಏಕೆಂದರೆ ಯೇಸು ನಿರಪರಾಧಿ ಎಂದು ಅವನು ನಂಬಿದ್ದನು. ಆದರೆ ಜನಸಮೂಹದ ಭಯದಿಂದ ಯೇಸುವನ್ನು ಶಿಲುಬೆಗೆ ಹಾಕಬೇಕೆಂದು ಅವನು ತನ್ನ ಸೈನಿಕರಿಗೆ ಹೇಳಬೇಕಾಯಿತು. ಸಾಧ್ಯವಾದರೆ, ಈ ಪದವನ್ನು ಅವನಿಗೆ ಇಷ್ಟವಿಲ್ಲದಿರುವುದನ್ನು ತೋರಿಸುವ ರೀತಿಯಲ್ಲಿ ಭಾಷಾಂತರಿಸಿರಿ.

ರಾಜಯೋಗ್ಯ ನಿಲುವಂಗಿ

ಅಂದರೆ, "ರಾಜನ ನಿಲುವಂಗಿಯಂತೆ ಒಂದು ನಿಲುವಂಗಿ." ಈ ನಿಲುವಂಗಿಯು ಉಜ್ಜ್ವಲವಾದ ಬಣ್ಣವುಳ್ಳದಾಗಿತ್ತು, ರಾಜನು ಧರಿಸುವಂಥ ರೀತಿಯ ನಿಲುವಂಗಿಯಂತೆ ಕಾಣುತ್ತಿತ್ತು.

ಮುಳ್ಳಿನಿಂದ ಮಾಡಿದ ಕಿರೀಟ

ಕಿರೀಟದಂತೆ ಕಾಣುವಂತೆ ಮಾಡಲು ಅವರು ಮುಳ್ಳಿನ ಬಳ್ಳಿಗಳನ್ನು ವೃತ್ತಾಕಾರದಲ್ಲಿ ಹೆಣೆದು ಕಟ್ಟಿದರು ಎಂಬುದು ಇದರರ್ಥವಾಗಿದೆ. ಕಿರೀಟವು ಅರಸನು ತನ್ನ ಅಧಿಕಾರವನ್ನು ತೋರಿಸಲು ತನ್ನ ತಲೆಯ ಮೇಲೆ ಧರಿಸಿಕೊಳ್ಳುವಂಥ ಒಂದು ಆಭರಣವಾಗಿದೆ. ಆದರೆ ಅವರು ಯೇಸುವಿನ ತಲೆ ಮೇಲೆ ಇಟ್ಟ ಕಿರೀಟದಲ್ಲಿ ಚೂಪಾದ, ಅಪಾಯಕಾರಿಯಾದ ಮುಳ್ಳುಗಳು ಇದ್ದವು.

ನೋಡಿರಿ

ಅಂದರೆ, "ಇಗೋ ನೋಡಿರಿ" ಅಥವಾ "ಇಗೋ ಇಲ್ಲಿ."

ಯೆಹೂದ್ಯರ ಅರಸನು

ಸೈನಿಕರು ಯೇಸುವನ್ನು ಅಪಹಾಸ್ಯ ಮಾಡುತ್ತಿದ್ದುದರಿಂದ, ಇದನ್ನು "ಯೆಹೂದ್ಯರ ಅರಸನೆಂದು ಕರೆಯಲ್ಪಡುವವನು" ಎಂದು ಅನುವಾದಿಸಬಹುದು.

ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ಭಿನ್ನವಾಗಿರುತ್ತವೆ.

ಅನುವಾದದ ಪದಗಳು