kn_obs-tn/content/39/07.md

1.7 KiB

ಆಣೆಯಿಟ್ಟನು

ಅಂದರೆ, "ಒತ್ತುಗೊಟ್ಟು ಹೇಳಿದನು" ಅಥವಾ "ಬಹು ಬಲವಾಗಿ ಹೇಳಿದನು."

ನಾನು ಈ ಮನುಷ್ಯನನ್ನು ಬಲ್ಲವನಾಗಿದ್ದರೆ ದೇವರು ನನ್ನನ್ನು ಶಪಿಸಲಿ

ಇದು ಶಾಪವಾಗಿದೆ, ಇದರ ಅರ್ಥವೇನಂದರೆ, "ನಾನು ಹೇಳುತ್ತಿರುವುದು ನಿಜವಲ್ಲದಿದ್ದರೆ ದೇವರು ನನಗೆ ಕೇಡು ಉಂಟಾಗುವಂತೆ ಮಾಡಲಿ" ಅಥವಾ "ನಾನು ನಿಮಗೆ ಸುಳ್ಳು ಹೇಳುತ್ತಿರುವುದಾದರೆ ದೇವರು ನನ್ನನ್ನು ಶಿಕ್ಷಿಸಲಿ." ಈ ರೀತಿಯಾಗಿ ಪೇತ್ರನು ಯೇಸುವನ್ನು ತಿಳಿದಿಲ್ಲವೆಂದು ಬಲವಾಗಿ ಹೇಳಿದನು. ಅವನು ಯೇಸುವನ್ನು ಬಲ್ಲವನಲ್ಲವೆಂದು ತೋರುವಂತೆ ಮಾಡುವುದಕ್ಕಾಗಿ ಅವನು ಯೇಸುವನ್ನು "ಈ ಮನುಷ್ಯ" ಎಂದು ಕರೆದನು.

ಕೋಳಿಯು ಕೂಗಿತು

"ಕೂಗಿತು" ಎಂಬುದು ಕೋಳಿಯು ಮಾಡುವಂಥ ಭಾರಿ ಶಬ್ದವಾಗಿದೆ. 38:09 ರಲ್ಲಿ ನೀವು ಇದನ್ನು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ಹೋಲಿಸಿ ನೋಡಿರಿ.

ಅನುವಾದದ ಪದಗಳು