kn_obs-tn/content/39/04.md

3.6 KiB

ನಾನು

ಅಂದರೆ, "ನೀನು ಹೇಳಿದಂಥವನು ನಾನೇ ಆಗಿದ್ದೇನೆ" ಅಥವಾ "ನಾನು ಮೆಸ್ಸೀಯನು ಮತ್ತು ದೇವರ ಮಗನು." "ನಾನು" ಎಂಬುದು ದೇವರ ಹೆಸರಾಗಿದೆ (ನೋಡಿರಿ 09:14). ಯೇಸು "ನಾನು" ಹೇಳುವುದರ ಮೂಲಕ ತಾನು ದೇವರೆಂದು ಹೇಳುತ್ತಿದ್ದಾನೆ. ಸಾಧ್ಯವಾದರೆ, ಯೇಸುವಿನ ಉತ್ತರಕ್ಕೂ ಮತ್ತು ದೇವರ ಹೆಸರಿಗೂ ಸಾಮ್ಯತೆಯಿದೆ ಎಂದು ಜನರು ತಿಳಿದುಕೊಳ್ಳುವ ರೀತಿಯಲ್ಲಿ ಇದನ್ನು ಭಾಷಾಂತರ ಮಾಡಿರಿ.

ದೇವರೊಂದಿಗೆ ಕುಳಿತುಕೊಂಡಿರುವನು

ಇದನ್ನು "ದೇವರೊಂದಿಗೆ ಆಳುತ್ತಿರುವನು" ಎಂದು ಅನುವಾದಿಸಬಹುದು. ದೇವರು ಎಲ್ಲವನ್ನು ಆಳುವ ಕಾರಣ, ಆತನು ಸ್ವರ್ಗದಲ್ಲಿ ಸಿಂಹಾಸನದ ಮೇಲೆ ಕುಳಿತುಕೊಂಡಿರುವನು ಎಂದು ಜನರು ಹೇಳುತ್ತಾರೆ. ಆತನು ದೇವರೊಂದಿಗೆ ಕುಳಿತುಕೊಂಡಿರುವನು ಎಂದು ಹೇಳುವ ಮೂಲಕ, ತಂದೆಯೊಂದಿಗೆ ಆಳುವ ಅಧಿಕಾರವನ್ನು ಹೊಂದಿದ್ದೇನೆಂದು ಯೇಸು ಹೇಳಿದನು.

ದೇವರೊಂದಿಗೆ ಕುಳಿತುಕೊಂಡು ಸ್ವರ್ಗದಿಂದ ಬರುವನು

ಇದನ್ನು "ದೇವರ ಪಕ್ಕದಲ್ಲಿ ಕುಳಿತುಕೊಂಡು ನಂತರ ಸ್ವರ್ಗದಿಂದ ಬರುವನು" ಎಂದು ಅನುವಾದಿಸಬಹುದು.

ಕೋಪದಿಂದ ತನ್ನ ವಸ್ತ್ರಗಳನ್ನು ಹರಿದುಕೊಂಡನು

ದುಃಖವನ್ನಾಗಲಿ ಅಥವಾ ಕೋಪವನ್ನಾಗಲಿ ತೋರಿಸಲು ಯೆಹೂದ್ಯರು ತಮ್ಮ ವಸ್ತ್ರಗಳನ್ನು ಹರಿದುಕೊಳ್ಳುತ್ತಿದ್ದರು. ವಸ್ತ್ರಗಳನ್ನು ಹರಿದು ಹಾಕುವುದು ನಿಮ್ಮ ಭಾಷೆಯಲ್ಲಿ ಬೇರೆ ಯಾವುದಾದರೂ ಅರ್ಥವನ್ನು ಕೊಡುವುದಾದರೆ, "ಅವನು ಬಹಳ ಕೋಪಗೊಂಡಿದ್ದನು" ಎಂಬ ಪದವನ್ನು ಅದಕ್ಕೆ ಬದಲಾಗಿ ಬಳಸಬಹುದು.

ನಿಮ್ಮ ನಿರ್ಣಯವೇನು?

ಅಂದರೆ, "ನಿಮ್ಮ ನಿರ್ಧಾರವೇನು?" ಅಥವಾ, "ನೀವು ಏನು ನಿರ್ಧರಿಸಿರುವಿರಿ ಎಂಬುದನ್ನು ನಮಗೆ ತಿಳಿಸಿ: ಆತನು ನಿರಪರಾಧಿಯೋ ಅಥವಾ ಅಪರಾಧಿಯೋ?" ಯೇಸು ದೇವರೊಂದಿಗೆ ತನ್ನನ್ನು ತಾನು ಸರಿಸಮ ಮಾಡಿಕೊಂಡಿದ್ದಕ್ಕಾಗಿ ಧಾರ್ಮಿಕ ಮುಖಂಡರು ಯೇಸುವನ್ನು ಖಂಡಿಸಬೇಕೆಂದು ಮಹಾಯಾಜಕನು ಬಯಸಿದನು.

ಅನುವಾದದ ಪದಗಳು