kn_obs-tn/content/39/02.md

2.4 KiB

ಯೇಸುವನ್ನು ನ್ಯಾಯ ವಿಚಾರಣೆ ಮಾಡಿದರು

ಇದನ್ನು, "ತಪ್ಪು ಮಾಡಿರುವನೆಂದು ಯೇಸುವಿನ ಮೇಲೆ ಸುಳ್ಳು ಆರೋಪ ಮಾಡಲು ಔಪಚಾರಿಕ ಸಭೆಯನ್ನು ಕೂಡಿಸಿದರು" ಎಂದು ಅನುವಾದಿಸಬಹುದು. ನ್ಯಾಯವಿಚಾರಣೆ ಎಂದರೆ ಸಾಮಾನ್ಯವಾಗಿ ಒಬ್ಬನು ಯಾವುದಾದರೊಂದು ಅಪರಾಧದ ವಿಷಯದಲ್ಲಿ ನಿರಪರಾಧಿಯಾಗಿದ್ದಾನೋ ಅಥವಾ ತಪ್ಪಿತಸ್ಥನಾಗಿದ್ದಾನೋ ಎಂದು ಕಂಡುಹಿಡಿಯಲು ಮಾಡುವಂತಹ ಕಾರ್ಯವಾಗಿದೆ. ಈ ಸಂಗತಿಯಲ್ಲಿ, ಯೇಸು ತಪ್ಪಿತಸ್ಥನೆಂದು ತೋರುವಂತೆ ಮಾಡಲು ಮುಖಂಡರು ನಿರ್ಧರಿಸಿದ್ದರು.

ಆತನ ಬಗ್ಗೆ ಸುಳ್ಳುಸಾಕ್ಷಿ ಹೇಳಿದರು

ಅಂದರೆ, "ಆತನ ಬಗ್ಗೆ ಸುಳ್ಳು ಹೇಳಿದರು" ಅಥವಾ, "ತಪ್ಪೊಂದನ್ನು ಮಾಡಿದ್ದಾನೆಂದು ಅವರು ಆತನ ಮೇಲೆ ಸುಳ್ಳು ಆರೋಪ ಮಾಡಿದರು."

ಅವರ ಹೇಳಿಕೆಗಳು ಪರಸ್ಪರ ಹೊಂದಾಣಿಕೆಯಾಗಲಿಲ್ಲ

ಇದನ್ನು, "ಯೇಸುವಿನ ಬಗ್ಗೆ ಅವರು ಹೇಳಿದಂಥ ವಿಷಯಗಳಲ್ಲಿ ಒಬ್ಬರ ಹೇಳಿಕೆಗಳು ಇನ್ನೊಬ್ಬರ ಹೇಳಿಕೆಗಳಿಗಿಂತ ವಿಭಿನ್ನವಾಗಿದ್ದವು" ಅಥವಾ "ಸಾಕ್ಷಿಹೇಳಿದವರು ಯೇಸುವಿನ ಬಗ್ಗೆ ಹೇಳಿದಂಥ ವಿಷಯಗಳು ಪರಸ್ಪರ ವ್ಯತಿರಿಕ್ತವಾಗಿದ್ದವು" ಎಂದು ಭಾಷಾಂತರಿಸಬಹುದು.

ಆತನು ಯಾವ ವಿಷಯದಲ್ಲಿ ತಪ್ಪಿತಸ್ಥನಾಗಿದ್ದಾನೆ

ಅಂದರೆ, "ಆತನು ಯಾವ ತಪ್ಪು ಮಾಡಿದ್ದಾನೆ."

ಅನುವಾದದ ಪದಗಳು