kn_obs-tn/content/38/08.md

2.5 KiB

ಎಣ್ಣೆ ಮರದ ಗುಡ್ಡ

ಇದು ಯೆರೂಸಲೇಮಿನ ಪೌಳಿಗೋಡೆಗಳ ಹೊರಗಿದ್ದ, ಆಲಿವ್ ಮರಗಳಿಂದ ತುಂಬಿದ್ದ ಬೆಟ್ಟದ ಹೆಸರು. ಇದನ್ನು "ಆಲಿವ್ ಮರಗಳ ಗುಡ್ಡ" ಎಂದು ಅನುವಾದಿಸಬಹುದು.

ನನ್ನನ್ನು ತೊರೆದುಬಿಡುವಿರಿ

ಅಂದರೆ, "ನನ್ನನ್ನು ತ್ಯಜಿಸುವಿರಿ" ಅಥವಾ "ನನ್ನನ್ನು ಬಿಟ್ಟುಬಿಡುವಿರಿ"

ಎಂದು ಬರೆಯಲಾಗಿದೆ

ಅಂದರೆ, "ಎಂದು ದೇವರ ವಾಕ್ಯದಲ್ಲಿ ಬರೆಯಲಾಗಿದೆ" ಅಥವಾ "ಪವಿತ್ರ ಗ್ರಂಥದಲ್ಲಿ ಬರೆಯಲಾಗಿದೆ" ಅಥವಾ "ದೇವರ ಪ್ರವಾದಿಗಳಲ್ಲಿ ಒಬ್ಬರು ಬರೆದಿದ್ದಾರೆ." "ಬರೆಯಲ್ಪಟ್ಟಿರುವಂಥದ್ದು ಸಂಭವಿಸುವುದು" ಅಥವಾ "ಬರೆಯಲ್ಪಟ್ಟಿರುವ ಪ್ರಕಾರವೇ ಇರುವುದು" ಎಂದು ಹೇಳಬಹುದು. ಈ ಪ್ರವಾದನೆಯು ಯೇಸುವಿನ ಮರಣವನ್ನು ಮತ್ತು ಅವನ ಹಿಂಬಾಲಕರು ಓಡಿಹೋಗುವುದನ್ನು ಸೂಚಿಸುತ್ತದೆ.

ನಾನು ಹೊಡೆಯುವೆನು

ಅಂದರೆ "ನಾನು ಕೊಲ್ಲುವೆನು."

ಕುರುಬನು ಮತ್ತು ಎಲ್ಲ ಕುರಿಗಳು

ಈ ಉಲ್ಲೇಖದಲ್ಲಿ ಯೇಸುವಿನ ಹೆಸರನ್ನು ಬಳಸಬೇಡಿರಿ, ಏಕೆಂದರೆ ಇದನ್ನು ಮೊದಲು ಬರೆದಂಥ ಪ್ರವಾದಿಗೆ ಕುರುಬನ ಹೆಸರನ್ನು ತಿಳಿದಿರಲಿಲ್ಲ. ಹಾಗೆಯೇ, ಶಿಷ್ಯರನ್ನು ಕುರಿಗಳೆಂದು ಪ್ರಸ್ತಾಪಿಸಬೇಡಿರಿ. ನಿಮ್ಮ ಅನುವಾದದಲ್ಲಿ "ಕುರುಬ" ಮತ್ತು "ಕುರಿ" ಎಂಬ ಪದಗಳನ್ನು ಬಳಸುವುದು ಉತ್ತಮವಾಗಿರುತ್ತದೆ.

ಚದುರಿಹೋಗುವರು

ಅಂದರೆ, "ದಿಕ್ಕಾಪಾಲಾಗಿ ಓಡಿ ಹೋಗುವರು."

ಅನುವಾದದ ಪದಗಳು