kn_obs-tn/content/38/05.md

2.2 KiB

ಪಾನಪಾತ್ರೆ

ಅಂದರೆ, "ದ್ರಾಕ್ಷಾರಸದ ಪಾನಪಾತ್ರೆ" ಅಥವಾ "ದ್ರಾಕ್ಷಿಗಳಿಂದ ತಯಾರಿಸಿದ ರಸದಿಂದ ತುಂಬಿರುವ ಪಾನಪಾತ್ರೆ."

ಇದನ್ನು ಕುಡಿಯಿರಿ

ಅಂದರೆ, "ಈ ಪಾನಪಾತ್ರೆಯಲ್ಲಿರುವುದನ್ನು ಕುಡಿಯಿರಿ" ಅಥವಾ "ಈ ಪಾನಪಾತ್ರೆಯಲ್ಲಿ ಕುಡಿಯಿರಿ." ಪಾನಪಾತ್ರೆಯಲ್ಲಿರುವ ರಸವು ದ್ರಾಕ್ಷಿಗಳಿಂದ ತಯಾರಿಸಲ್ಪಟ್ಟಿತು, ಅದರಿಂದ ಅದು ಕಡು ಕೆಂಪು ಬಣ್ಣವಾಗಿತ್ತು.

ಹೊಸ ಒಡಂಬಡಿಕೆಯ ರಕ್ತ

ಇದನ್ನು "ಹೊಸ ಒಡಂಬಡಿಕೆಯನ್ನು ಮಾಡುವ ರಕ್ತ" ಅಥವಾ "ಹೊಸ ಒಡಂಬಡಿಕೆಗೆ ಆಧಾರವಾಗಿರುವ ರಕ್ತ" ಎಂದು ಅನುವಾದಿಸಬಹುದು.

ಸುರಿಸಲ್ಪಟ್ಟ

ಇದನ್ನು "ನನ್ನ ದೇಹದಿಂದ ಸುರಿಸಲ್ಪಡುವ" ಅಥವಾ "ನಾನು ಸುರಿಸುವ ರಕ್ತ" ಎಂದು ಅನುವಾದಿಸಬಹುದು.

ಪಾಪಗಳ ಕ್ಷಮಾಪಣೆಗಾಗಿ

ಅಂದರೆ, "ಆದ್ದರಿಂದ ದೇವರು ಜನರ ಪಾಪಗಳನ್ನೆಲ್ಲಾ ಸಂಪೂರ್ಣವಾಗಿ ಕ್ಷಮಿಸುವನು."

ನನ್ನನ್ನು ನೆನಪಿಸಿಕೊಳ್ಳಿರಿ

ಅಂದರೆ, "ನನ್ನನ್ನು ಕೊಂಡಾಡು" ಅಥವಾ "ನನ್ನನ್ನು ಸ್ಮರಿಸು". ಇದನ್ನು "ವಿಶೇಷವಾಗಿ ನನ್ನ ಮೇಲೆ ಗಮನವನ್ನು ಕೇಂದ್ರೀಕರಿಸಿರಿ" ಅಥವಾ "ನನ್ನನ್ನು ಜ್ಞಾಪಿಸಿಕೊಳ್ಳಿರಿ" ಎಂದು ಅನುವಾದಿಸಬಹುದು.

ಅನುವಾದದ ಪದಗಳು