kn_obs-tn/content/37/01.md

2.5 KiB

ಒಂದಾನೊಂದು ದಿನ

ಈ ಪದ ಹಿಂದೆ ನಡೆದ ಘಟನೆಯನ್ನು ಪರಿಚಯಿಸುತ್ತದೆ, ಆದರೆ ನಿರ್ದಿಷ್ಟವಾದ ಸಮಯವನ್ನು ತಿಳಿಸುವುದಿಲ್ಲ. ನೈಜ ಕಥೆಯನ್ನು ಹೇಳಲು ಅನೇಕ ಭಾಷೆಗಳಲ್ಲಿ ಇದಕ್ಕೆ ಸಮನಾದ ರೀತಿಯಿರುತ್ತದೆ.

ಮರಿಯಳು

ಯೇಸುವಿನ ತಾಯಿಯ ಹೆಸರು ಕೂಡ ಮರಿಯಳೇ. ಆದರೆ ಇದು ಬೇರೆ ಮರಿಯಳಾಗಿದ್ದಾಳೆ.

ಈ ರೋಗವು ಮರಣದಲ್ಲಿ ಅಂತ್ಯವಾಗುವುದಿಲ್ಲ

"ಈ ರೋಗದ ಅಂತಿಮ ಫಲಿತಾಂಶವು ಮರಣವಾಗಿರುವುದಿಲ್ಲ" ಅಥವಾ "ಲಾಜರನು ರೋಗಿಯಾಗಿದ್ದನು, ಆದರೆ ಮರಣವು ಈ ರೋಗದ ಅಂತಿಮ ಫಲಿತಾಂಶವಲ್ಲ" ಎಂದು ಇದನ್ನು ಅನುವಾದಿಸಬಹುದು. ಯೇಸುವಿನ ಶಿಷ್ಯರು ಬಹುಶಃ ಲಾಜರನು ಸಾಯುವುದಿಲ್ಲ ಎಂದು ಅರ್ಥಮಾಡಿಕೊಂಡಿದ್ದರು. ಆದರೆ ಲಾಜರನು ತನ್ನ ರೋಗದಿಂದ ಸತ್ತುಹೋದರೂ, ಅವನು ಕೊನೆಯಲ್ಲಿ ತಿರುಗಿ ಜೀವಿಸುತ್ತಾನೆ ಎಂದು ಯೇಸುವಿಗೆ ತಿಳಿದಿತ್ತು.

ಇದು ದೇವರ ಮಹಿಮೆಗಾಗಿ

ಅಂದರೆ, "ದೇವರು ಎಷ್ಟು ಉನ್ನತನಾಗಿದ್ದಾನೆ ಎಂದು ಜನರು ಆತನನ್ನು ಸ್ತುತಿಸಲು ಇದು ಕಾರಣವಾಗುತ್ತದೆ."

ಆದರೆ ಆತನು ತಾನು ಇದ್ದಲ್ಲಿಯೇ ಎರಡು ದಿನಗಳ ಕಾಲ ಕಾಯುತ್ತಿದ್ದನು

ಇದನ್ನು, "ಆತನು ಹೋಗಿ ಲಾಜರನನ್ನು ಗುಣಪಡಿಸಬೇಕೆಂದು ಅವರು ಬಯಸಿದ್ದರೂ ಕೂಡ ಆತನು ತಾನು ಇದ್ದಲ್ಲಿಯೇ ಎರಡು ದಿನಗಳ ಕಾಲ ಇದ್ದನು" ಎಂದು ಅನುವಾದಿಸಬಹುದು.

ಅನುವಾದದ ಪದಗಳು