kn_obs-tn/content/35/12.md

2.4 KiB

ಸಾಮಾನ್ಯ ಮಾಹಿತಿ

ಯೇಸು ಕಥೆ ಹೇಳುವುದನ್ನು ಮುಂದುವರಿಸಿದನು

ಒಂದು ಚಿಕ್ಕ ಆಡು

ಕೊಬ್ಬಿದ ಕರುಗಿಂತ ಒಂದು ಚಿಕ್ಕ ಆಡಿನಿಂದ ಕಡಿಮೆ ಜನರಿಗೆ ಆಹಾರ ಊಣಬಡಿಸಬಹುದು, ಮತ್ತು ಅದು ಅದರಷ್ಟು ಹೆಚ್ಚು ಬೆಲೆಯುಳ್ಳದಾಗಿರಲಿಲ್ಲ. ತನ್ನ ತಂದೆಯು ಪಾಪಿಷ್ಠನಾದ ಕಿರಿಯ ಮಗನನ್ನು ತನಗಿಂತ ಅತ್ಯುತ್ತಮವಾಗಿ ಪರಿಗಣಿಸುತ್ತಿದ್ದಾನೆ ಎಂದು ಹಿರಿಯ ಸಹೋದರನು ತಂದೆಗೆ ದೂರು ಹೇಳಿದನು.

ಈ ನಿನ್ನ ಮಗನು

ಈ ಪದವು ಹಿರಿಯ ಮಗನು ಕೋಪಗೊಂಡಿದ್ದಾನೆ ಎಂಬುದನ್ನು ತೋರಿಸುತ್ತದೆ. ಇದು ಅವನು ತನ್ನ ತಮ್ಮನನ್ನು ತಿರಸ್ಕರಿಸಿದ್ದನ್ನು ತೋರಿಸುತ್ತದೆ ಮತ್ತು ಸ್ವೇಚ್ಛಾಪರನಾದ ಈ ಮಗನನ್ನು ಸ್ವಾಗತಿಸಿದ ತನ್ನ ತಂದೆಯ ತೀರ್ಮಾನವನ್ನು ಅವನು ಅನುಮೋದಿಸಲಿಲ್ಲ ಎಂಬುದನ್ನು ತೋರಿಸುತ್ತದೆ. ಇತರ ಭಾಷೆಗಳಲ್ಲಿ ಈ ವಿಷಯಗಳನ್ನು ಸಂವಹನ ಮಾಡಲು ಪರೋಕ್ಷವಾದ ರೀತಿಯಿರಬಹುದು.

ನಿನ್ನ ಹಣವನ್ನು ಹಾಳುಮಾಡಿದವನು

ಅಂದರೆ, "ನೀನು ಅವನಿಗೆ ಕೊಟ್ಟ ಹಣವನ್ನು ದುಂದುವೆಚ್ಚ ಮಾಡಿದವನು" ಅಥವಾ "ನಿನ್ನ ಸಂಪತ್ತನ್ನು ನುಂಗಿಬಿಟ್ಟವನು." ಸಾಧ್ಯವಾದರೆ, ಸಹೋದರನ ಕೋಪವನ್ನು ತೋರಿಸುವ ಪದಗುಚ್ಛವನ್ನು ಬಳಸಿರಿ.

ಕೊಬ್ಬಿದ ಕರುವನ್ನು ಕೊಯ್ಸಿದಿ

ಅಂದರೆ, "ಹಬ್ಬದಲ್ಲಿ ತಿನ್ನುವುದಕ್ಕಾಗಿ ಕೊಬ್ಬಿದ ಕರುವನ್ನು ಕೊಯ್ಸಿದಿ."

ಅನುವಾದದ ಪದಗಳು