kn_obs-tn/content/35/05.md

1.9 KiB

ಸಾಮಾನ್ಯ ಮಾಹಿತಿ

ಯೇಸು ಕಥೆ ಹೇಳುವುದನ್ನು ಮುಂದುವರಿಸಿದನು

ಘೋರವಾದ ಕ್ಷಾಮ ಸಂಭವಿಸಿತು

ಅಂದರೆ, "ತುಂಬಾ ಕಡಿಮೆ ಆಹಾರವಿತ್ತು". ಕೆಲವು ಭಾಷೆಗಳಲ್ಲಿ ಇದನ್ನು "ಅಲ್ಲಿ ತೀವ್ರ ಬರಗಾಲವಿತ್ತು" ಎಂದು ಅನುವಾದಿಸಬಹುದು.

ಆಹಾರವನ್ನು ಕೊಂಡುಕೊಳ್ಳಲು ಹಣವಿರಲಿಲ್ಲ

ಕ್ಷಾಮದಿಂದಾಗಿ, ಆಹಾರವು ಬಹಳ ದುಬಾರಿಯಾಯಿತು, ಮತ್ತು ಅವನು ಈಗಾಗಲೇ ತನ್ನ ಎಲ್ಲಾ ಹಣವನ್ನು ಖರ್ಚು ಮಾಡಿದ್ದನು.

ಕೆಲಸ

ಹಣವನ್ನು ಗಳಿಸುವುದಕ್ಕಾಗಿ ಬೇರೊಬ್ಬರಿಗೋಸ್ಕರ ಮಾಡುವ ಕೆಲಸವನ್ನು ಇದು ಸೂಚಿಸುತ್ತದೆ. ಇದು ಸ್ಪಷ್ಟವಾಗಿಲ್ಲವಾದರೆ, ಈ ವಾಕ್ಯವನ್ನು ಹೀಗೆ ಪ್ರಾರಂಭಿಸಬೇಕು, "ಸ್ವಲ್ಪ ಹಣವನ್ನು ಸಂಪಾದಿಸುವುದಕ್ಕಾಗಿ, ಅವನು ಒಂದು ಕೆಲಸವನ್ನು ಮಾಡಿದ್ದನು."

ಹಂದಿಗಳನ್ನು ಮೇಯಿಸುವುದು

ಅಂದರೆ, "ಹಂದಿಗಳಿಗೆ ಆಹಾರ ಕೊಡುವುದು." ಆ ಸಮಯದಲ್ಲಿ ಆ ಸಮಾಜದಲ್ಲಿ ಕೀಳು ಮಟ್ಟದ ಕೆಲಸಗಳಲ್ಲಿ ಇದನ್ನೂ ಪರಿಗಣಿಸುತ್ತಿದ್ದರು. ನಿಮ್ಮ ಭಾಷೆಯಲ್ಲಿ ಕೀಳು ಮಟ್ಟದ ಕೆಲಸಗಳಿಗೆ ನಿರ್ದಿಷ್ಟವಾದ ಪದ ಇರುವುದಾದರೆ, ಆ ಪದವನ್ನು ಬಳಸಿರಿ.