kn_obs-tn/content/34/10.md

2.1 KiB

ಅವನನ್ನು ನೀತಿವಂತನೆಂದು ಘೋಷಿಸಿದನು

ಅಂದರೆ, "ಅವನನ್ನು ನೀತಿವಂತನಾದ ವ್ಯಕ್ತಿ ಎಂದು ಪರಿಗಣಿಸುವುದು." ತೆರಿಗೆ ಸಂಗ್ರಹಕನು/ಸುಂಕದವನು ಪಾಪಿಯಾಗಿದ್ದರೂ, ಅವನ ದೀನತೆ ಮತ್ತು ಪಶ್ಚಾತ್ತಾಪದಿಂದ ದೇವರು ಅವನಿಗೆ ಕರುಣೆಯನ್ನು ತೋರಿಸಿದನು.

ತಗ್ಗಿಸುವನು

ಇದನ್ನು "ಕೆಳಮಟ್ಟದ ಸ್ಥಾನಮಾನವನ್ನು ನೀಡುವನು" ಅಥವಾ "ಪ್ರಾಮುಖ್ಯವಲ್ಲದವನನ್ನಾಗಿ ಮಾಡುತ್ತಾನೆ" ಎಂದು ಅನುವಾದಿಸಬಹುದು. ಇದನ್ನು ಸಾಂಕೇತಿಕವಾಗಿ, "ಕೆಳಕ್ಕೆ ತರುವನು" ಎಂದು ಭಾಷಾಂತರಿಸಬಹುದು.

ಮೇಲೆತ್ತುವನು

ಅಂದರೆ, "ಉನ್ನತವಾದ ಸ್ಥಾನಮಾನವನ್ನು ನೀಡುವನು" ಅಥವಾ "ಗೌರವಿಸುವನು."

ತನ್ನನ್ನು ತಾನು ತಗ್ಗಿಸಿಕೋ

ಅಂದರೆ, "ದೀನ ಭಾವದಿಂದ ವರ್ತಿಸಲು ನಿರ್ಧರಿಸುವುದು" ಅಥವಾ "ತನ್ನ ಬಗ್ಗೆ ದೀನ ಮನೋಭಾವ ಉಳ್ಳವನಾಗಿರುವುದು."

ಇದೊಂದು ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ಭಿನ್ನವಾಗಿರುತ್ತವೆ.

ಅನುವಾದದ ಪದಗಳು