kn_obs-tn/content/34/09.md

2.1 KiB

ಯೇಸು ಕಥೆ ಹೇಳುವುದನ್ನು ಮುಂದುವರೆಸಿದನು

ದೂರದಲ್ಲಿ ನಿಂತುಕೊಂಡು

ಇದನ್ನು "ದೂರದಲ್ಲಿ ನಿಂತು" ಅಥವಾ "ಪ್ರತ್ಯೇಕವಾಗಿ ಇದ್ದು" ಎಂದು ಅನುವಾದಿಸಬಹುದು.

ಪರಲೋಕದ ಕಡೆಗೂ ಕೂಡ ನೋಡಲಿಲ್ಲ

ದೇವರಿಗೆ ಪ್ರಾರ್ಥನೆ ಮಾಡುವಾಗ ಜನರು ಸಾಮಾನ್ಯವಾಗಿ ಪರಲೋಕದ ಕಡೆಗೆ ನೋಡುತ್ತಿದ್ದಾರೆಂದು “ಕೂಡ” ಎಂಬ ಪದವು ಸೂಚಿಸುತ್ತದೆ, ಆದರೆ ಈ ಮನುಷ್ಯನು ತನ್ನ ಪಾಪದ ನಿಮಿತ್ತ ಅವಮಾನಗೊಂಡ ಕಾರಣದಿಂದ ಹಾಗೆ ಮಾಡಲಿಲ್ಲ ಎಂದು ಸೂಚಿಸುತ್ತದೆ.

ಅವನು ತನ್ನ ಮುಷ್ಠಿಯಿಂದ ಎದೆ ಬಡಿದುಕೊಂಡನು

ಇದನ್ನು "ಅವನ ದುಃಖದ ಕಾರಣದಿಂದ ಅವನು ತನ್ನ ಮುಷ್ಠಿಯಿಂದ ಎದೆಯನ್ನು ಬಡಿದುಕೊಂಡನು" ಅಥವಾ "ದುಃಖದಿಂದ ಅವನು ತನ್ನ ಎದೆಯನ್ನು ಬಡಿದುಕೊಂಡನು" ಎಂದು ಅನುವಾದಿಸಬಹುದು. ಇತರ ಕಾರಣಗಳಿಗಾಗಿ ಜನರು ತಮ್ಮ ಎದೆಗೆ ಬಡಿದುಕೊಳ್ಳುವುದರಿಂದ ಇದನ್ನು ಅರ್ಥಮಾಡಿಕೊಳ್ಳಲು ಜನರಿಗೆ ಕಷ್ಟವಾಗುವುದಾದರೆ, "ಅವನು ತನ್ನ ಹತಾಶೆಯನ್ನು ತೋರಿಸಿದನು" ಎಂದು ನೀವು ಅನುವಾದಿಸಬಹುದು.

ಅನುವಾದದ ಪದಗಳು