kn_obs-tn/content/34/01.md

1.7 KiB

ಕಥೆಗಳು

ದೇವರ ರಾಜ್ಯದ ಕುರಿತಾದ ಸತ್ಯಗಳನ್ನು ಕಲಿಸಲು ಯೇಸು ಈ ಕಥೆಗಳನ್ನು ಉಪಯೋಗಿಸಿದನು. ಈ ಘಟನೆಗಳು ನಿಜವಾಗಿ ನಡೆದವೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ನಿಮ್ಮ ಭಾಷೆಯಲ್ಲಿ ಕಾಲ್ಪನಿಕ ಮತ್ತು ನೈಜ ಕಥೆಗಳನ್ನು ಒಳಗೊಂಡಿರುವಂತಹ ಪದ ಇರುವುದಾದರೆ, ನೀವು ಅದನ್ನು ಇಲ್ಲಿ ಬಳಸಿರಿ.

ಸಾಸಿವೆಕಾಳು

ಬಹುಶಃ ಇದು ಕಪ್ಪು ಸಾಸಿವೆ ಗಿಡದ ಕಾಳನ್ನು ಸೂಚಿಸುತ್ತದೆ, ಈ ಗಿಡದಲ್ಲಿ ಚಿಕ್ಕ ಕಾಳುಗಳಿದ್ದು ಇದು ದೊಡ್ಡ ಗಿಡವಾಗಿ ವೇಗವಾಗಿ ಬೆಳೆಯುತ್ತದೆ. ನಿಮ್ಮ ಭಾಷೆಯಲ್ಲಿ ಈ ಗಿಡಕ್ಕೆ ಪದವಿದ್ದರೆ, ನೀವು ಅದನ್ನು ಬಳಸಿರಿ. ಇಲ್ಲದಿದ್ದರೆ, ಅದೇ ರೀತಿಯ ಗುಣಲಕ್ಷಣಗಳನ್ನು ಹೊಂದಿರುವ ಮತ್ತೊಂದು ಗಿಡದ ಹೆಸರನ್ನು ಇದಕ್ಕೆ ಬದಲಾಗಿ ನೀವು ಬಳಸಬೇಕಾಗಬಹುದು.

ಎಲ್ಲಾ ಕಾಳುಗಳಿಗಿಂತಲೂ ಅತಿ ಚಿಕ್ಕ ಕಾಳು

ಅಂದರೆ, "ಜನರು ನೆಡುವ ಗಿಡಗಳ ಎಲ್ಲಾ ಕಾಳುಗಳಿಗಿಂತಲೂ ಅತಿ ಚಿಕ್ಕ ಕಾಳು."

ಅನುವಾದದ ಪದಗಳು