kn_obs-tn/content/32/16.md

2.1 KiB

ತನ್ನ ಮೊಣಕಾಲೂರಿದನು

ಅಂದರೆ, "ಕೂಡಲೇ ಮೊಣಕಾಲೂರಿದನು."

ಯೇಸುವಿನ ಮುಂದೆ

ಅಂದರೆ, "ಯೇಸುವಿನ ಮುಂಭಾಗದಲ್ಲಿ."

ನಡುಗುತ್ತಾ ಮತ್ತು ತುಂಬಾ ಹೆದರುತ್ತಾ

ಅಂದರೆ, "ಭಯದಿಂದ ನಡುಗುತ್ತಾ" ಅಥವಾ "ಭಯಭೀತಳಾಗಿದ್ದುದರಿಂದ ನಡುಗುತ್ತಾ."

ನಿನ್ನ ನಂಬಿಕೆಯು ನಿನ್ನನ್ನು ವಾಸಿಮಾಡಿತು

ಇದನ್ನು "ನಿನ್ನ ನಂಬಿಕೆಯಿಂದಾಗಿ ನೀನು ವಾಸಿಯಾಗಿದ್ದಿ" ಎಂದು ಅನುವಾದಿಸಬಹುದು.

ಸಮಾಧಾನದಿಂದ ಹೋಗು

ಜನರು ಪರಸ್ಪರ ಒಬ್ಬರನ್ನೊಬ್ಬರು ಬಿಟ್ಟು ಹೊರಡುವಾಗ ಈ ಸಾಂಪ್ರದಾಯಿಕ ಆಶೀರ್ವಾದವನ್ನು ಅವರು ನುಡಿಯುತ್ತಿದ್ದರು. ಇತರ ಭಾಷೆಗಳಲ್ಲಿಯೂ ಸಹ ಇದಕ್ಕೆ ಸಮವಾದ ಪದಗಳಿರಬಹುದು ಉದಾಹರಣೆಗೆ, "ಸುಖವಾಗಿ ಹೋಗಿ ಬಾ", "ದೇವರೊಂದಿಗೆ ಹೋಗು" ಅಥವಾ "ಸಮಾಧಾನವಿರಲಿ." ಇದನ್ನು ಭಾಷಾಂತರಿಸುವ ಇತರ ರೀತಿಗಳು ಯಾವುವೆಂದರೆ, "ನೀವು ಹೋಗುತ್ತಿರುವಾಗ ನಿನಗೆ ಸಮಾಧಾನವಾಗಲಿ" ಅಥವಾ, "ಹೋಗು ಮತ್ತು ನಮ್ಮ ನಡುವೆ ಎಲ್ಲಾ ಚೆನ್ನಾಗಿದೆ ಎಂದು ತಿಳಿದುಕೋ."

ಇದೊಂದು ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ಭಿನ್ನವಾಗಿರುತ್ತವೆ.

ಅನುವಾದದ ಪದಗಳು