kn_obs-tn/content/28/06.md

2.0 KiB

ದೇವರ ರಾಜ್ಯದಲ್ಲಿ ಸೇರಲು

ಇದನ್ನು "ದೇವರ ರಾಜ್ಯದ ಪ್ರಜೆಯಾಗಲು" ಎಂದು ಅನುವಾದಿಸಬಹುದು.

ಒಂಟೆ

ಒಂಟೆಗಳು ಭಾರಿ ಗಾತ್ರದ ಪ್ರಾಣಿಗಳಾಗಿದ್ದು, ಸಾಮಾನ್ಯವಾಗಿ ಭಾರವಾದ ಹೊರೆಗಳನ್ನು ಸಾಗಿಸಲು ಇವುಗಳನ್ನು ಬಳಸಲಾಗುತ್ತದೆ. ನಿಮ್ಮ ಭಾಷಾ ಪ್ರಾಂತ್ಯದಲ್ಲಿ, ಒಂಟೆಗಳ ಬಗ್ಗೆ ತಿಳಿದಿಲ್ಲವಾದರೆ, "ಅತಿ ದೊಡ್ಡ ಪ್ರಾಣಿ" ಅಥವಾ "ಭಾರದ ಪ್ರಾಣಿ" ಎಂಬ ಪದವನ್ನು ಬಳಸಬಹುದು. ಇದಕ್ಕೆ ಬದಲಾಗಿ ಬೇರೆ ಕೆಲವು ದೊಡ್ಡ ಪ್ರಾಣಿಗಳ ಹೆಸರನ್ನು ಬಳಸಲು ನೀವು ನಿರ್ಧರಿಸಿದರೆ, ಯೇಸು ಸಂಬೋಧಿಸುತ್ತಿದ್ದ ಜನರಿಗೆ ಈ ಪ್ರಾಣಿಯ ಬಗ್ಗೆ ತಿಳಿದಿತ್ತು ಎಂಬುದನ್ನು ಖಾತ್ರಿಪಡಿಸಿಕೊಳ್ಳಿರಿ, ಉದಾಹರಣೆಗೆ "ಎತ್ತು" ಅಥವಾ "ಕತ್ತೆ" ಮುಂತಾದವು.

ಸೂಜಿಕಣ್ಣು

ಇದು ಹೊಲಿಗೆಯ ಸೂಜಿಯ ಕೊನೆಯ ತುದಿಯಲ್ಲಿರುವ ಸಣ್ಣ ರಂಧ್ರವನ್ನು ಸೂಚಿಸುತ್ತದೆ. ಒಂಟೆಯಂತಿರುವ ದೊಡ್ಡದಾಗಿರುವುದು ಸೂಜಿಯ ಕಣ್ಣಿನ ಮೂಲಕ ಹಾದುಹೋಗುವ ಕಲ್ಪನೆಯು ಅಸಾಧ್ಯವಾದುದನ್ನು ಪ್ರತಿನಿಧಿಸಲು ರೂಪಿಸಲಾಗಿದೆ.

ಅನುವಾದದ ಪದಗಳು