kn_obs-tn/content/27/11.md

2.7 KiB

ಧರ್ಮೋಪದೇಶಕನು/ಶಾಸ್ತ್ರಿ

ಈ ಪದವನ್ನು 27:01 ರಲ್ಲಿ ನೀವು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.

ಆ ಮೂವರು ಮನುಷ್ಯರು

ಮೂವರು ಮನುಷ್ಯರು ಯಾರೆಂದರೆ ಯಾಜಕನು, ಲೇವಿಯನು ಮತ್ತು ಸಮಾರ್ಯದವನು.

ನೆರೆಯವನು

27:02 ರಲ್ಲಿರುವುದಕ್ಕಿಂತಲೂ ವಿಶಾಲವಾದ ಅರ್ಥದಲ್ಲಿ "ನೆರೆಯವನು" ಎಂಬ ಪದವನ್ನು ಯೇಸು ಉಪಯೋಗಿಸುತ್ತಿದ್ದಾನೆ. ಇಲ್ಲಿರುವ "ನೆರೆಯವನು" ಎಂಬ ಪದವು ನಾವು ಭೇಟಿಯಾಗುವಂಥ ಮತ್ತು ನಮ್ಮ ಸಹಾಯದ ಅಗತ್ಯವಿರುವಂಥವನನ್ನು ಸೂಚಿಸುತ್ತದೆ.

ನೆರೆಯವನಾಗಿದ್ದನು

ಇದನ್ನು "ನೆರೆಯವನಂತೆ ವರ್ತಿಸಿದನು" ಅಥವಾ "ಸ್ನೇಹಿತನಾಗಿದ್ದನು" ಅಥವಾ "ಪ್ರೀತಿಯಿಂದ ವರ್ತಿಸಿದನು" ಎಂದು ಅನುವಾದಿಸಬಹುದು. 27:02 ಮತ್ತು 27:03 ರಲ್ಲಿ ನೀವು "ನೆರೆಯವನು" ಎಂಬ ಪದವನ್ನು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.

ನೀನು ಹೋಗು ಮತ್ತು ಮಾಡು

ಅಂದರೆ, "ನೀನು ಕೂಡ ಹೋಗಬೇಕು ಮತ್ತು ಕಾರ್ಯ ಮಾಡಬೇಕು" ಅಥವಾ "ಈಗ ನೀನು ಮಾಡಲೇ ಬೇಕು". ಸಮಾರ್ಯದವನು ಮಾಡಿದಂತೆ ಮಾಡು ಎಂದು ಯೇಸು ಧರ್ಮೋಪದೇಶಕನಿಗೆ ಆಜ್ಞಾಪಿಸಿದನು.

ಅದರಂತೆಯೇ

ಅಂದರೆ, "ಇತರರನ್ನು ಪ್ರೀತಿಸು, ನಿನ್ನ ಶತ್ರುಗಳನ್ನು ಕೂಡಾ ಪ್ರೀತಿಸು." "ಅದರಂತೆಯೇ" ಎಂಬುದು ಗಾಯಗೊಂಡ ಮನುಷ್ಯನಿಗೆ ಸಹಾಯಮಾಡುವುದನ್ನು ಮಾತ್ರ ಸೂಚಿಸುತ್ತಿದೆ ಎಂದು ಅನ್ನಿಸದಂತೆ ನೋಡಿಕೊಳ್ಳಿರಿ.

ಇದೊಂದು ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ವ್ಯತ್ಯಾಸವಾಗಿರುತ್ತವೆ.

ಅನುವಾದದ ಪದಗಳು