kn_obs-tn/content/27/02.md

3.9 KiB

ಧರ್ಮೋಪದೇಶಕನು/ಶಾಸ್ತ್ರಿ

ಅಂದರೆ, "ಯೆಹೂದ್ಯರ ಧರ್ಮಶಾಸ್ತ್ರದಲ್ಲಿ ಪರಿಣಿತನು." ಈ ಪದವನ್ನು 27:01 ರಲ್ಲಿ ನೀವು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.

ನಿನ್ನ ದೇವರಾದ ಕರ್ತನನ್ನು ಪ್ರೀತಿಸಬೇಕು

"ನಾವು ನಮ್ಮ ದೇವರನ್ನು ಪ್ರೀತಿಸಬೇಕು" ಎಂದು ನೀವು ಹೇಳಬಹುದು. ಆ ಮನುಷ್ಯನು ಯೇಸುವಿಗೆ ಅಜ್ಞಾಪಿಸುತ್ತಿದ್ದಾನೆಂದು ಅನ್ನಿಸದಂತೆ ಖಚಿತಪಡಿಸಿಕೊಳ್ಳಿರಿ. ಆದರೆ, ದೇವರ ಧರ್ಮಶಾಸ್ತ್ರವು ಜನರು ಏನು ಮಾಡಬೇಕೆಂದು ಆಜ್ಞಾಪಿಸುತ್ತದೆ ಎಂಬುದನ್ನು ಅವನು ಉಲ್ಲೇಖಿಸುತ್ತಿದ್ದಾನೆ.

ನಿನ್ನ ಪೂರ್ಣ ಹೃದಯದಿಂದ, ಪ್ರಾಣದಿಂದ, ಬಲದಿಂದ ಮತ್ತು ಮನಸ್ಸಿನಿಂದ

ಅಂದರೆ, "ನಿನ್ನ ಪೂರ್ಣ ವ್ಯಕ್ತಿತ್ವದಿಂದ" ಅಥವಾ "ನಿನ್ನ ಪ್ರತಿಯೊಂದು ಭಾಗದಿಂದ." ಕೆಲವು ಭಾಷೆಗಳಲ್ಲಿ ಇದನ್ನು "ನಿಮ್ಮ ಪೂರ್ಣ ಹೃದಯದಿಂದ, ಉಸಿರಿನಿಂದ, ಶಕ್ತಿಯಿಂದ, ಮತ್ತು ಆಲೋಚನೆಗಳಿಂದ" ಎಂದು ಅನುವಾದಿಸಬಹುದು. ಈ ಪ್ರತಿಯೊಂದು ಭಾಗಗಳ ಮೇಲೆ ಕೇಂದ್ರೀಕರಿಸುತ್ತಿಲ್ಲ, ಆದರೆ ಇದು ನಮ್ಮ ಇಡೀ ವ್ಯಕ್ತಿತ್ವವನ್ನು ಕೇಂದ್ರೀಕರಿಸುತ್ತಿದೆ. ಇಡೀ ವ್ಯಕ್ತಿತ್ವವನ್ನು ರೂಪಿಸುವಂಥ ಪರಿಕಲ್ಪನೆಯನ್ನು ನಿಮ್ಮ ಭಾಷೆಯಲ್ಲಿ ಬಳಸಿರಿ.

ಹೃದಯ

ಹೃದಯವು ಆಸೆಗಳನ್ನು ಮತ್ತು ಭಾವನೆಗಳನ್ನು ಹೊಂದಿರುವ ವ್ಯಕ್ತಿಯ ಭಾಗವನ್ನು ಸೂಚಿಸುತ್ತದೆ.

ಪ್ರಾಣ

ಪ್ರಾಣವು ವ್ಯಕ್ತಿಯ ಅಭೌತಿಕ, ಆಧ್ಯಾತ್ಮಿಕ ಭಾಗವನ್ನು ಸೂಚಿಸುತ್ತದೆ.

ಬಲ

ಬಲವು ದೇಹವನ್ನು ಮತ್ತು ಅದರ ಎಲ್ಲಾ ಸಾಮರ್ಥ್ಯಗಳನ್ನು ಸೂಚಿಸುತ್ತದೆ.

ಮನಸ್ಸು

ಮನಸ್ಸು ಯೋಚಿಸುವಂತಹ ಮತ್ತು ಕಲ್ಪನೆಗಳು ಉಳ್ಳಂತಹ ವ್ಯಕ್ತಿಯ ಭಾಗವನ್ನು ಸೂಚಿಸುತ್ತದೆ.

ನೆರೆಯವನು

"ನೆರೆಯವನು" ಎಂಬ ಪದವು ಸಾಮಾನ್ಯವಾಗಿ ನಮ್ಮ ಅಕ್ಕಪಕ್ಕದಲ್ಲಿ ವಾಸಿಸುವ ವ್ಯಕ್ತಿಯನ್ನು ಸೂಚಿಸುತ್ತದೆ. ನಿಕಟ ಸಂಬಂಧಿ ಅಥವಾ ವಿದೇಶಿ ಅಥವಾ ಶತ್ರು ಅಲ್ಲದಂಥವರಿಗೆ ಯೆಹೂದ್ಯರು ಈ ಪದವನ್ನು ಉಪಯೋಗಿಸುತ್ತಿದ್ದರು.

ನಿನ್ನಂತೆಯೇ ನಿನ್ನ ನೆರೆಯವನನ್ನು ಪ್ರೀತಿಸು

ಅಂದರೆ, "ನೀನು ನಿನ್ನನ್ನು ಪ್ರೀತಿಸಿಕೊಳ್ಳುವ ಅದೇ ರೀತಿಯಲ್ಲಿ ನಿನ್ನ ನೆರೆಯವನನ್ನು ಪ್ರೀತಿಸು."

ಅನುವಾದದ ಪದಗಳು