kn_obs-tn/content/27/01.md

3.1 KiB

ಒಂದಾನೊಂದು ದಿನ

ಈ ಪದವು ಹಿಂದೆ ನಡೆದ ಘಟನೆಯನ್ನು ಪರಿಚಯಿಸುತ್ತದೆ, ಆದರೆ ನಿರ್ದಿಷ್ಟವಾದ ಸಮಯವನ್ನು ತಿಳಿಸುವುದಿಲ್ಲ. ನೈಜ ಕಥೆಯನ್ನು ಹೇಳಲು ಅನೇಕ ಭಾಷೆಗಳಲ್ಲಿ ಇದಕ್ಕೆ ಸಮವಾದ ರೀತಿ ಇರುತ್ತದೆ.

ಯೆಹೂದ್ಯರ ಧರ್ಮಶಾಸ್ತ್ರದಲ್ಲಿ ಪರಿಣಿತನು

ಈ ಮನುಷ್ಯನು ದೇವರು ಇಸ್ರಾಯೇಲರಿಗೆ ಕೊಟ್ಟಿದಂಥ ನಿಯಮಗಳನ್ನು ಮತ್ತು ಇತರ ಯೆಹೂದ್ಯ ನಿಯಮಗಳನ್ನು ಅಧ್ಯಯನ ಮಾಡಿದವನು ಮತ್ತು ಬೋಧಿಸುವವನು ಆಗಿದ್ದನು.

ಆತನನ್ನು ಪರೀಕ್ಷಿಸಲು

ಅಂದರೆ, "ಯೇಸು ಉತ್ತಮವಾದ ಉತ್ತರವನ್ನು ಕೊಡುವನೋ ಎಂದು ತಿಳಿದುಕೊಳ್ಳಲು."

ನಿತ್ಯಜೀವವನ್ನು ಪಡೆಯಲು

ಅಂದರೆ, "ದೇವರೊಂದಿಗೆ ಶಾಶ್ವತವಾಗಿರುವ ಜೀವವನ್ನು ಪಡೆಯಲು" ಅಥವಾ "ಆತನೊಂದಿಗಿರಲು ದೇವರು ನನಗೆ ಕೊಡುವಂಥ ಶಾಶ್ವತವಾದ ಜೀವವನ್ನು ಪಡೆದುಕೊಳ್ಳಲು" ಅಥವಾ "ದೇವರಿಂದ ನಿತ್ಯ ಜೀವನವನ್ನು ಪಡೆದುಕೊಳ್ಳಲು." ಧರ್ಮಶಾಸ್ತ್ರದ ಪರಿಣಿತನು ಅಥವಾ ಶಾಸ್ತ್ರಿಯು ತಾನು ತಂದೆಯಾದ ದೇವರಿಂದ ನಿತ್ಯ ಜೀವವನ್ನು ಬಾಧ್ಯವಾಗಿ ಪಡೆದುಕೊಳ್ಳಲು ಯೋಗ್ಯನಾಗುವುದು ಹೇಗೆ ಕೇಳುತ್ತಿದ್ದಾನೆ.

ನಿತ್ಯಜೀವ

ಮರ್ತ್ಯ ದೇಹವು ಸತ್ತ ನಂತರ ದೇವರೊಂದಿಗೆ ಶಾಶ್ವತವಾಗಿರುವಂಥ ಜೀವವನ್ನು ಇದು ಸೂಚಿಸುತ್ತದೆ. ನಿತ್ಯಜೀವದ ಪದಕ್ಕಾಗಿ ಮುಖ್ಯ ಪದದ ಪುಟವನ್ನು ನೋಡಿರಿ.

ದೇವರ ಧರ್ಮಶಾಸ್ತ್ರದಲ್ಲಿ ಏನೆಂದು ಬರೆಯಲ್ಪಟ್ಟಿದೆ?

ಅಂದರೆ, "ಇದರ ಬಗ್ಗೆ ದೇವರ ಧರ್ಮಶಾಸ್ತ್ರದಲ್ಲಿ ಏನು ಬರೆಯಲಾಗಿದೆ?" ಯೇಸು ಈ ಪ್ರಶ್ನೆಯನ್ನು ಕೇಳಿದನು ಕಾರಣ ದೇವರ ಧರ್ಮಶಾಸ್ತ್ರವು ವಾಸ್ತವವಾಗಿ ಏನು ಕಲಿಸುತ್ತದೆ ಎಂಬುದರ ಬಗ್ಗೆ ಆ ಮನುಷ್ಯನು ಯೋಚಿಸಬೇಕೆಂದು ಆತನು ಬಯಸಿದನು.

ಅನುವಾದದ ಪದಗಳು