kn_obs-tn/content/26/04.md

2.1 KiB

ನಾನು ಈಗತಾನೇ ನಿಮಗೆ ಓದಿ ಕೇಳಿಸಿದ ಮಾತುಗಳು ಇದೀಗ ನೆರವೇರುತ್ತಿವೆ

ಇದನ್ನು ಭಾಷಾಂತರಿಸುವಂತ ಇತರ ರೀತಿಗಳು ಯಾವುವೆಂದರೆ, "ನೀವು ಈಗತಾನೇ ಕೇಳಿಸಿಕೊಂಡಂತಹ ಮಾತುಗಳು ಅಂದರೆ ನಾನು ಓದಿದಂತಹ ಮಾತುಗಳು ಇದೀಗ ನೆರವೇರುತ್ತಿವೆ" ಅಥವಾ, "ಇಂದು ನಾನು ನಿಮಗೆ ಓದಿ ಕೇಳಿಸಿದ ಮಾತುಗಳನ್ನು ನೀವು ಕೇಳಿಸಿಕೊಳ್ಳುತ್ತಿರುವಾಗ ಅವು ನಿಜವಾಗುತ್ತಿವೆ."

ಆಶ್ಚರ್ಯಚಕಿತರಾದರು

"ಆಶ್ಚರ್ಯಚಕಿತರಾದರು" ಎಂಬ ಪದವನ್ನು ಇದು ಹೇಗೆ ಸಾಧ್ಯ ಎಂದು ಅವರು ಬೆರಗಾದರು, ದಿಗ್ಭ್ರಮೆಗೊಂಡರು, ಮತ್ತು ಗೊಂದಲಕ್ಕೊಳಗಾದರು ಎಂಬ ಅರ್ಥವನ್ನು ಕೊಡುವಂಥ ಪದವನ್ನು ಬಳಸಿ ಅನುವಾದಿಸಿರಿ.

ಈತನು ಯೋಸೇಫನ ಮಗನಲ್ಲವೇ?

"ಈ ಮನುಷ್ಯನು ಯೋಸೇಫನ ಮಗನು" ಅಥವಾ "ಈತನು ಯೋಸೇಫನ ಮಗನೆಂದು ಎಲ್ಲರಿಗೂ ಗೊತ್ತು!" ಎಂದು ಇದನ್ನು ಅನುವಾದಿಸಬಹುದು. ಈತನು ಯೋಸೇಫನ ಮಗನೋ ಅಲ್ಲವೋ ಎಂಬುದರ ಬಗ್ಗೆ ಜನರು ಕೇಳಲಿಲ್ಲ. ಅವರು ಆತನನ್ನು ಒಬ್ಬ ಸಾಮಾನ್ಯ ವ್ಯಕ್ತಿಯ ಮಗನೆಂದು ಭಾವಿಸಿದ್ದರಿಂದ ಆತನು ಮೆಸ್ಸೀಯನಾಗಲು ಹೇಗೆ ಸಾಧ್ಯ ಎಂದು ಅವರು ಯೋಚಿಸುತ್ತಿದ್ದರು.

ಅನುವಾದದ ಪದಗಳು