kn_obs-tn/content/26/02.md

1.6 KiB

ಆರಾಧನೆಯ ಸ್ಥಳ

ಅಂದರೆ, "ದೇವರನ್ನು ಆರಾಧಿಸಲು ಯೆಹೂದ್ಯರು ಒಟ್ಟಾಗಿ ಕೂಡಿಬರುತ್ತಿದ್ದ ಕಟ್ಟಡವಾಗಿದೆ." ಇದನ್ನು "ಆರಾಧನೆಯ ಕಟ್ಟಡ" ಎಂದು ಅನುವಾದಿಸಬಹುದು.

ಸುರುಳಿ

ಸುರುಳಿಯು ಕಾಗದದ ಅಥವಾ ಚರ್ಮದ ಉದ್ದನೆಯ ಹಾಳೆಯಾಗಿದೆ, ಅದನ್ನು ಸುತ್ತಿಡಬಹುದು ಮತ್ತು ಅದರ ಮೇಲೆ ಬರಹವಿತ್ತು.

ಪ್ರವಾದಿಯಾದ ಯೆಶಾಯನ ಸುರುಳಿ

ಅಂದರೆ, "ಪ್ರವಾದಿಯಾದ ಯೆಶಾಯನು ಬರೆದಿರುವ ಪದಗಳಿದ್ದಂಥ ಸುರುಳಿ." ಯೆಶಾಯನು ನೂರಾರು ವರ್ಷಗಳ ಹಿಂದೆ ಸುರುಳಿಯನ್ನು ಬರೆದಿದ್ದನು. ಇದು ಆ ಸುರುಳಿಯ ನಕಲುಪ್ರತಿಯಾಗಿದೆ.

ಸುರುಳಿಯನ್ನು ತೆರೆದು

ಇದನ್ನು "ಸುತ್ತಿಟ್ಟಿದ್ದ ಸುರುಳಿಯನ್ನು ಬಿಚ್ಚಿ ತೆರೆದನು" ಅಥವಾ "ಸುರುಳಿಯನ್ನು ಬಿಚ್ಚಿದನು" ಎಂದು ಅನುವಾದಿಸಬಹುದು.

ಅನುವಾದದ ಪದಗಳು