kn_obs-tn/content/25/05.md

1.7 KiB

ದೇವರ ವಾಕ್ಯದಲ್ಲಿ, ಆತನು ತನ್ನ ಜನರಿಗೆ, 'ನಿಮ್ಮ ದೇವರಾದ ಕರ್ತನನ್ನು ಪರೀಕ್ಷಿಸಬಾರದು' ಎಂದು ಆಜ್ಞಾಪಿಸಿದ್ದಾನೆ.

ಇದನ್ನು ಪರೋಕ್ಷವಾದ ವಾಕ್ಯವಾಗಿ ಭಾಷಾಂತರಿಸಬಹುದು: "ನಾವು ನಮ್ಮ ದೇವರಾದ ಕರ್ತನನ್ನು ಪರೀಕ್ಷಿಸಬಾರದು ಎಂದು ದೇವರು ತನ್ನ ವಾಕ್ಯದಲ್ಲಿ ನಮಗೆ ಆಜ್ಞಾಪಿಸಿದ್ದಾನೆ."

ನಿನ್ನ ದೇವರಾದ ಕರ್ತನನ್ನು ಪರೀಕ್ಷಿಸಬಾರದು

"ನಿನ್ನ ದೇವರಾದ ಕರ್ತನು ತನ್ನನ್ನು ತಾನೇ ನಿನಗೆ ಸಾಬೀತುಮಾಡುವಂತೆ ಮಾಡಬೇಡ" ಅಥವಾ "ನಿನ್ನ ದೇವರಾದ ಕರ್ತನು ತಾನು ಒಳ್ಳೆಯವನು ಎಂದು ನಿನಗೆ ಸಾಬೀತುಮಾಡುವಂತೆ ಮಾಡಬೇಡ" ಎಂದು ಇದನ್ನು ಅನುವಾದಿಸಬಹುದು.

ನಿನ್ನ ದೇವರಾದ ಕರ್ತನು

ಅಂದರೆ, "ನಿನ್ನ ದೇವರಾದ ಯೆಹೋವನು" ಅಥವಾ "ಯೆಹೋವನು ದೇವರಾಗಿದ್ದಾನೆ ಮತ್ತು ನಿನ್ನ ಮೇಲೆ ಅಧಿಕಾರವುಳ್ಳವನಾಗಿದ್ದಾನೆ."

ಅನುವಾದದ ಪದಗಳು