kn_obs-tn/content/25/01.md

2.3 KiB

ಪವಿತ್ರಾತ್ಮನು ಆತನನ್ನು ಮುನ್ನಡೆಸಿದನು

ಅಂದರೆ, "ಪವಿತ್ರಾತ್ಮನು ಆತನಿಗೆ ಮಾರ್ಗದರ್ಶನ ಮಾಡಿದ್ದನು" ಅಥವಾ "ಹೋಗಬೇಕೆಂದು ಪವಿತ್ರಾತ್ಮನು ಆತನನ್ನು ಪ್ರೇರೇಪಿಸಿದನು."

ಅಡವಿ/ಅರಣ್ಯ

ಇದನ್ನು "ಮರುಭೂಮಿ" ಅಥವಾ "ಕೆಲವು ಜನರು ಮಾತ್ರವೇ ಇರುವಂಥ ನಿರ್ಜನವಾದ, ಬಂಜರು ಸ್ಥಳ" ಎಂದು ಅನುವಾದಿಸಬಹುದು. ಬಹುಶಃ ಈ ಸ್ಥಳದಲ್ಲಿ ಕೆಲವು ಮರಗಳು ಅಥವಾ ಇತರ ಸಸ್ಯಗಳು ಇದ್ದವು, ಆದುದರಿಂದ ಹೆಚ್ಚಿನ ಜನರು ಅಲ್ಲಿ ವಾಸಿಸಲು ಸಾಧ್ಯವಾಗುತ್ತಿರಲಿಲ್ಲ.

ನಲ್ವತ್ತು ಹಗಲು ಮತ್ತು ನಲ್ವತ್ತು ಇರಳು

"ನಲವತ್ತು ದಿನ, ಹಗಲಿರುಳಿನ ಸಮಯ" ಎಂಬುದು ಇದರರ್ಥವಾಗಿದೆ. ಈ ನುಡಿಗುಚ್ಛದ ಭಾಷಾಂತರವು ಎಂಭತ್ತು ದಿನಗಳ ಕಾಲಾವಧಿ ಎಂದು ತೋರದಂತೆ ನೋಡಿಕೊಳ್ಳಿರಿ.

ಪಾಪ ಮಾಡುವಂತೆ ಆತನನ್ನು ಶೋಧಿಸಿದನು

ಯೇಸು ಪಾಪ ಮಾಡದಿದ್ದುದರಿಂದ, ಯೇಸು ಪಾಪಮಾಡಲು ಮನವೊಲಿಸುವಲ್ಲಿ ಸೈತಾನನು ಮಾಡಿದ ಯತ್ನ ಸಫಲವಗಲ್ಲಿಲ್ಲ. ಇಂಥ ಅರ್ಥ ಕೊಡುವಂತಹ ಪದಗುಚ್ಛವನ್ನು ನೀವು ಬಳಸುವುದಾಗಿ ಖಾತ್ರಿಪಡಿಸಿಕೊಳ್ಳಿರಿ. ಈ ಪದಗುಚ್ಛವನ್ನು , "ಪಾಪ ಮಾಡುವಂತೆ ಮನವೊಲಿಸಲು ಪ್ರಯತ್ನಿಸಿದನು" ಎಂದು ಅನುವಾದಿಸಬಹುದು.

ಅನುವಾದದ ಪದಗಳು