kn_obs-tn/content/24/04.md

2.9 KiB

ವಿಷಪೂರಿತ ಸರ್ಪಗಳೇ

ಇದನ್ನು ನೀವು “ ನೀವು ಸುಳ್ಳುಹೇಳುವ ವಿಷಪೂರಿತ ಸರ್ಪಗಳು" ಎಂದು ಅನುವಾದಿಸಬಹುದು. ಅವರು ಅಪಾಯಕಾರಿ ಮತ್ತು ಮೋಸಗಾರರು ಆದ ಕಾರಣ ಯೋಹಾನನು ಅವರನ್ನು ವಿಷಪೂರಿತ ಸರ್ಪಗಳೆಂದು ಕರೆಯುತ್ತಿದ್ದಾನೆ.

ಒಳ್ಳೆಯ ಫಲಗಳನ್ನು ಕೊಡದ ಪ್ರತಿಯೊಂದು ಮರ

ಯೋಹಾನನು ವಾಸ್ತವವಾಗಿ ಮರಗಳ ಬಗ್ಗೆ ಮಾತನಾಡುತ್ತಿಲ್ಲ. ಇದು ಈ ಒಳ್ಳೆಯ ಫಲಗಳನ್ನು ದೇವರಿಂದ ಬರುವ ಒಳ್ಳೆಯ ಕ್ರಿಯೆಗಳು ಮತ್ತು ಮನೋಭಾವನೆಗಳಿಗೆ ಹೋಲಿಸುವಂಥ ಪದಗುಚ್ಛವಾಗಿದೆ.

ಕಡಿದು ಬೆಂಕಿಗೆ ಹಾಕುವರು

ಅಂದರೆ, "ದೇವರು ನ್ಯಾಯತೀರಿಸಿ ಶಿಕ್ಷಿಸುವನು."

ಯೋಹಾನನು ನೆರವೇರಿಸಿದನು

ಅಂದರೆ, ದೇವರ ಸಂದೇಶಕನು ಅಥವಾ ದೂತನು ಏನು ಮಾಡುವನೆಂದು ಪ್ರವಾದಿ ಹೇಳಿದನೋ ಅದನ್ನು "ಯೋಹಾನನು ಮಾಡುತ್ತಿದ್ದಾನೆ."

ನೋಡಿರಿ

ಇದನ್ನು "ಇಗೋ ನೋಡಿರಿ" ಅಥವಾ "ಗಮನ ಕೊಡಿರಿ" ಎಂದು ಅನುವಾದಿಸಬಹುದು.

ನನ್ನ ದೂತ

ಅಂದರೆ, "ಯೆಹೋವನಾದ ನಾನು, ನನ್ನ ದೂತನನ್ನು ಕಳುಹಿಸುತ್ತೇನೆ." ಕೆಲವು ಭಾಷೆಗಳಲ್ಲಿ ಈ ವಾಕ್ಯವನ್ನು ಪರೋಕ್ಷವಾದ ರೀತಿಯಲ್ಲಿ ಹೇಳುವುದು ಹೆಚ್ಚು ನೈಜವಾಗಿರುತ್ತದೆ: "ದೇವರು ತನ್ನ ದೂತನನ್ನು ಕಳುಹಿಸುತ್ತಾನೆಂದು ಅವನು ಹೇಳಿದಾಗ ಪ್ರವಾದಿಯಾದ ಯೆಶಾಯನು ಮುಂತಿಳಿಸಿದ್ದು ಏನೆಂದರೆ."

ನಿನಗೆ ಮುಂದಾಗಿ

ಈ ವಾಕ್ಯದಲ್ಲಿರುವ, "ನೀನು" ಎಂಬ ಪದವು ಮೆಸ್ಸೀಯನನ್ನು ಸೂಚಿಸುತ್ತದೆ.

ನಿನ್ನ ದಾರಿಯನ್ನು ಸಿದ್ಧಮಾಡಲು

ಜನರು ಮೆಸ್ಸೀಯನಿಗೆ ಕಿವಿಗೊಡುವಂತೆ ದೇವರ ದೂತನು ಅವರನ್ನು ಸಿದ್ಧಪಡಿಸುವನು.

ಅನುವಾದದ ಪದಗಳು